Bollywood News: ಮೊನ್ನೆಯಷ್ಟೇ ಬಿಗ್‌ಬಾಸ್ ಮನೆಯಲ್ಲಿ ಡಿವೋರ್ಸ್ ವಿಷಯ ಮಾತಾಡಿ ಸುದ್ದಿಯಾಗಿದ್ದ ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ ವಿಕಿ ಜೈನ್, ಈಗ ಇನ್ನೊಂದು ಕೆಲಸ ಮಾಡಿ ಸುದ್ದಿಯಾಗಿದ್ದಾರೆ.
ಇವರಿಬ್ಬರು ಬಿಗ್‌ಬಾಸ್ ಮನೆಯಲ್ಲಿ ಬ್ಲ್ಯಾಂಕೇಟ್ ಮುಚ್ಚಿಕೊಂಡು ರೋಮ್ಯಾನ್ಸ್ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿಕಿ ಮತ್ತು ಅಂಕಿತಾ ಪದೇ ಪದೇ ಸುದ್ದಿಯಾಗುತ್ತಲೇ ಇದ್ದಾರೆ. ಬಿಗ್‌ಬಾಸ್‌ನಂಥ ಕೌಟುಂಬಿಕ ಕಾರ್ಯಕ್ರಮದಲ್ಲಿ ವಿಕಿ- ಅಂಕಿತಾ ಹೀಗೆ ರೋಮ್ಯಾನ್ಸ್ ಮಾಡಿರುವುದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲರೂ ಇದೆಂಥ ಫ್ಯಾಮಿಲಿ ಶೋ ಎಂದು ಆಡಿಕೊಳ್ಳುವಂತಾಗಿದೆ.
ಇನ್ನು ಇವರ ಬ್ಲ್ಯಾಂಕೇಟ್ ರೋಮ್ಯಾನ್ಸ್ ವೀಡಿಯೋ ಎಕ್ಸ್ ಖಾತೆಯಲ್ಲಿ ವೈರಲ್ ಆಗಿದ್ದು, ಜನ ಛೀಮಾರಿ ಹಾಕಿದ್ದಾರೆ. ಅಂಕಿತಾ ಹಿಂದಿ ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದು, ದಿವಂಗತ ಸುಶಾಂತ್ ಸಿಂಗ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಬ್ರೇಕಪ್ ಮಾಡಿಕೊಂಡು, ಉದ್ಯಮಿಯಾದ ವಿಕಿ ಜೈನ್ ಜೊತೆ ವಿವಾಹವಾದರು.
Ye Vicky Bhaiya aur Ankita kya kar rahe hai family show me😳pic.twitter.com/sSo1tz39dm
— #BiggBoss_Tak👁 (@BiggBoss_Tak) December 25, 2023