Monday, December 23, 2024

Latest Posts

ಮಾ.12 ಕ್ಕೆ ಬೆಂಗಳೂರು- ಮೈಸೂರು ಏಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆ !

- Advertisement -

state news

ಬೆಂಗಳೂರು(ಮಾ.3): ಮೈಸೂರು ಏಕ್ಸಪ್ರೆಸ್ ಹೈವೇ ಉದ್ಘಾಟನೆ ಹಾಗೂ ಮೈಸೂರು – ಕುಶಲನಗರ ಹೆದ್ದಾರಿಯ ಶಂಕುಸ್ಥಾಪನೆ ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಗೆಜ್ಜಲಗೆರೆ ಕಾಲೋನಿಯಲ್ಲಿ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ರವರು ತಿಳಿಸಿದರು.

ಅವರು ಇಂದು ಗೆಜ್ಜಲಗೆರೆ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು, ಭಾರತದಲ್ಲಿ ಲಾಜಿಸ್ಟಿಕ್ ಕಾಸ್ಟ್ ಹೆಚ್ಚಿದೆ ಉತ್ತಮವಾದ ರಾಷ್ಟೀಯ ಹೆದ್ದಾರಿ, ರೈಲ್ವೆ, ಜಲಸಾರಿಗೆ ಮೂಲಕ ಸಮಯದ ಉಳಿತಾಯ ಮಾಡಿ ಲಾಜಿಸ್ಟಿಕ್ ಕಾಸ್ಟ್ ಕಡಿಮೆ ಮಾಡಬಹುದು ಎಂದರು.

ಲಾಜಿಸ್ಟಿಕ್ ಕಾಸ್ಟ್ ಶೇಕಡ 12 ರಷ್ಟು ಇದ್ದು 2030ರ ಒಳಗಾಗಿ ಇದನ್ನು ಶೇಕಡ 7 ರಿಂದ 8 ಕ್ಕೆ ಇಳಿಸಲು .
ರಸ್ತೆ, ಪೋರ್ಟ್ ಗಳು, ವಿಮಾನ ನಿಲ್ದಾಣ, ಇಂಟರ್ ನಲ್ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಕ್ಕಾಗಿ ಆಯವ್ಯಯದಲ್ಲಿ 10 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ ಎಂದರು.

ಬೆಂಗಳೂರು- ಮೈಸೂರು ಏಕ್ಸಪ್ರಸ್ ಹೈವೆಯಿಂದ ಸಂಚಾರದ ಸಮಯ ಉಳಿತಾಯವಾಗಿದ್ದು, 75 ನಿಮಿಷದಲ್ಲಿ ಸಂಚರಿಸಬಹುದು. 3550 ಕೋಟಿ ರೂ ವೆಚ್ಚದಲ್ಲಿ ಮೈಸೂರು ಕುಶಾಲನಗರ ಹೆದ್ದಾರಿಯ ಶಂಕುಸ್ಥಾಪನೆ, ಮೈಸೂರು- ಬೆಂಗಳೂರು ಹೆದ್ದಾರಿಯ ಉದ್ಘಾಟನೆಯನ್ನು ಒಂದೇ ವೇದಿಕೆಯಲ್ಲಿ ನೆರವೇರಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ ಕೆ, ರೇಷ್ಮ ಹಾಗೂ ಕ್ರೀಡಾ ಸಚಿವ ಡಾ: ಕೆ.ಸಿ ನಾರಾಯಣ ಗೌಡ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಟ್ರಾಫಿಕ್ ಫೈನ್; 50 ಶೇಕಡಾ ಮತ್ತೆ ವಿಸ್ತರಣೆ..!

ರೈಲ್ವೇ ಕಾಮಗಾರಿ ಚುರುಕುಗೊಳಿಸಲು ಸಂಸದೆ ಸುಮಲತಾ ಆಗ್ರಹ..!

- Advertisement -

Latest Posts

Don't Miss