Hassan News: ಹಾಸನ: ಬೇಲೂರು ಪಟ್ಟಣದ ಹೊಳೆಬೀದಿ ಹೊಯ್ಸಳ ಶಾಲೆಯ ಸಮೀಪದಲ್ಲಿನ ಯುಜಿಡಿ ಭಸ್ಮೀಕರಣ ಹೊಂಡದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ತೀವ್ರ ಕಳಪೆಯಿಂದ ಕೂಡಿದೆ. ತಕ್ಷಣವೇ ಕೆಲಸ ಸ್ಥಗಿತ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಿದ ಬಳಿಕೆವೇ ಕಾಮಗಾರಿ ಆರಂಭಿಸಬೇಕು ಎಂದು ಗುತ್ತಿಗೆದಾರರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಹೊಳೆಬೀದಿಯ ಭಸ್ಮೀಕರಣ ಹೊಂಡದ ಕಾಮಗಾರಿ ವೀಕ್ಷಣೆಗೆ ದಿಢೀರ್ ಭೇಟಿ ನೀಡಿದ ಶಾಸಕ ಹೆಚ್.ಕೆ.ಸುರೇಶ್ ಅಲ್ಲಿನ ಕಾಮಗಾರಿಗಳ ಕಂಬಗಳು ಈಗಾಗಲೇ ಬಿರುಕು ಕಂಡ ಶಾಸಕರು ಏನ್ರೀ ಸರ್ಕಾರಿ ಕೆಲಸವೆಂದರೆ ಬೇಕಾಬಿಟ್ಟಿ ಮಾಡವುದಾ. ನಾನು ಕೂಡ ಸಿವಿಲ್ ಇಂಜಿಯರ್ ಮಾಡಿರುವೆ ನಿಮ್ಮ ಕಾಮಗಾರಿ ನಕಲಿ ಕಥೆಗಳು ಯಾಥ ಪ್ರಕಾರ ಹೇಳುವೆ. ಈ ಕಾಮಗಾರಿ ಬೇಲೂರಿಗೆ ಶಾಶ್ವತವಾಗಿ ಉಳಿಯಬೇಕು ಹೊರತು ಎರಡು ವರ್ಷಕ್ಕೆ ಕೋಟ್ಯಾಂತರ ಹಣ ವ್ಯರ್ಥಕ್ಕೆ ನಾನು ಅವಕಾಶ ನೀಡುವುದಿಲ್ಲ, ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಿ, ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ತನಿಖೆ ನಡೆಸಲು ಪತ್ರ ಬರೆಯುವೆ ಹಾಗೂ ವಿಧಾನಸಭೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ವಿಷಯ ಪ್ರಸ್ತಾಪಿಸುವ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರವಾಸಿ ತಾಣ ಬೇಲೂರಿನ ಸ್ವಚ್ಛತೆ ಮತ್ತು ನೈರ್ಮಾಲ್ಯದ ನಿಟ್ಟಿನಲ್ಲಿ ಪಟ್ಟಣದ ಹೊಳೆಬೀದಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರೂ ೧೪.೪ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಭಸ್ಮೀಕರಣ ಹೊಂಡದ ಅಭಿವೃದ್ಧಿ ಕಾಮಗಾರಿಯನ್ನು ಇಂದು ವೀಕ್ಷೀಸಿದ ಸಂದರ್ಭದಲ್ಲಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಸರಿಯಾದ ಪ್ರಮಾಣದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಬಳಕೆಯಾಗಿಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಗುಣಮಟ್ಟವೇ ಇಲ್ಲದೆ ನಡೆಯುತ್ತಿರುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಉನ್ನಾಧಿಕಾರಿಗಳು ಮತ್ತು ಮಂತ್ರಿಗಳಲ್ಲಿ ಮಾತನಾಡುವೆ ಮತ್ತು ಸೂಕ್ತ ತನಿಖೆ ನಡೆಸಲು ಒತ್ತಾಯ ಪಡಿಸಲಾಗುತ್ತದೆ. ಈಗಾಗಲೇ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಬೇಲೂರಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಗುಣಮಟ್ಟದ ಕಾಮಗಾರಿಗೆ ನಡೆಸಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ನಾಗರಾಜ್, ಕರ್ನಾಟಕ ಟಿವಿ ಹಾಸನ