Sunday, September 8, 2024

Latest Posts

ಸರಣಿ ಕ್ಲೀನ್‍ಸ್ವೀಪ್ ಭಾರತದ ಗುರಿ

- Advertisement -

ಪೋರ್ಟ್ ಆಫ್ ಸ್ಪೇನ್: ಈಗಾಗಲೆ ಏಕದಿನ ಸರಣಿಯನ್ನು ಬಗಲಿಗೆ ಇಳಿಸಿಕೊಂಡಿರುವ ಭಾರತೀಯ ತಂಡವು ಇಂದು ನಡೆಯುವ ಕೊನೆಯ ಏಕದಿನ ಪಂದ್ಯವನ್ನೂ ಗೆದ್ದು ವೆಸ್ಟಿಂಡೀಸ್‍ಗೆ ವೈಟ್‍ವಾಶ್ ಬಳಿಯುವ ಗುರಿ ಹೊಂದಿದೆ. ಇದರ ಜತೆಗೇ  ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಮೀಸಲು ಆಟಗಾರರಿಗೆ ಅವಕಾಶ ಕಲ್ಪಿಸುವ ಕುರಿತಂತೆಯೂ ಯೋಚಿಸುತ್ತಿದೆ.

ಪ್ರಮುಖ ಆಟಗಾರರ ಗೈರು ಹಾಜರಿಯಲ್ಲಿಯೂ ಅತ್ಯುತ್ತಮ ನಿರ್ವಹಣೆ ನೀಡಿರುವ ಭಾರತೀಯ ತಂಡವು ಎರಡೂ ಪಂದ್ಯಗಳನ್ನು ರೋಚಕವಾಗಿ ಗೆಲ್ಲುವಲ್ಲಿ ಸಫಲವಾಗಿದೆ. ಮುಖ್ಯವಾಗಿ ಬ್ಯಾಟಿಂಗಿನಲ್ಲಿ ಭಾರತೀಯ ಆಟಗಾರರು ದೊಡ್ಡ ಮೊತ್ತ ಕೂಡಿಹಾಕುವಲ್ಲಾಗಲಿ, ದೊಡ್ಡ ಮೊತ್ತ ಬೆಂಬತ್ತುವಲ್ಲಾಗಲಿ ತಾವು ಸಮರ್ಥರೇ ಹೌದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೊದಲ ಪಂದ್ಯವನ್ನು ಕೇವಲ 3 ರನ್‍ಗಳಿಂದ ಗೆದ್ದ ಭಾರತವು ಎರಡನೇ ಏಕದಿನ ಪಂದ್ಯವನ್ನು ಕೊನೆಯ ಓವರಿನಲ್ಲಿ 8 ವಿಕೆಟ್ ಕಳಕೊಂಡು ಜಯಿಸಿತ್ತು.

ಇಂದಿನ ಪಂದ್ಯಕ್ಕೆ ಕೆಲವು ಮೀಸಲು ಆಟಗಾರರಿಗೆ ಅವಕಾಶ ನೀಡಿ ಅವರ ಸಾಮಥ್ರ್ಯ ಪರೀಕ್ಷಿಸುವುದು  ಕೋಚ್ ದ್ರಾವಿಡ್ ಇರಾದೆಯಾಗಿರುವಂತಿದೆ. ಹಾಗೆಂದು ತಂಡದ ಸಮತೋಲನ ಕಳೆದುಕೊಂಡು ಗೆಲುವಿನ ಅವಕಾಶ ಕೈಬಿಡಲು ಅವರು ಸಿದ್ಧರಿಲ್ಲ.

ಆರಂಭಿಕ ಆಟಗಾರ ಶುಭಮನ್ ಗಿಲ್ ಎರಡೂ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ (64 ರನ್ ಮತ್ತು 43 ರನ್) ನೀಡಿದ್ದಾರೆ. ಹಾಗಾಗಿ ಅವರ  ಬದಲಾಗಿ ಋತುರಾಜ್ ಗಾಯಕ್‍ವಾಡ್ ಸ್ಥಾನ ಪಡೆಯುವ ಸಾಧ್ಯತೆಗಳು ದೂರವೇ ಆಗಿವೆ. ದ.ಆಫ್ರಿಕಾ ವಿರುದ್ಧ ಅವಕಾಶ ಪಡೆದ ಋತುರಾಜ್ ವೇಗದ ಬೌಲಿಂಗನ್ನು ನಿಭಾಯಿಸಲು ಕಷ್ಟ ಪಟ್ಟಿದ್ದರು.

ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಅರ್ಧ ಶತಕ ಬಾರಿಸಿರುವುದರಿಂದ ಅವರ ಸ್ಥಾನ ಭದ್ರವಾಗಿದೆ. ಸೂರ್ಯಕುಮಾರ್ ಯಾದವ್ ಎರಡೂ ಪಂದ್ಯಗಳಲ್ಲಿ ವಿಫಲಗೊಂಡರೂ ಅವರ ಸ್ಥಾನಕ್ಕೆ ಚ್ಯುತಿ ಬರಲಾರದು. ಏಕೆಂದರೆ ಅವರು ಮಧ್ಯಮ ಸರದಿಯ ಬೆನ್ನೆಲುಬಾಗಿದ್ದಾರೆ.

ಇಶಾನ್ ಕಿಶನ್ ಕೂಡ ತಂಡಕ್ಕೆ ಅವಕಾಶ ಪಡೆಯುವ ಸಾಧ್ಯತೆಗಳ ಕುರಿತಂತೆ ಖಚಿತವಾಗಿ ಹೇಳುವಂತಿಲ್ಲ. ಟಿ20ಯಲ್ಲಿ ನೀಡುವಂತಹ ಆಕ್ರಮಣಶಾಲಿ ಆಟ ಏಕದಿನ ಕ್ರಿಕೆಟಿನಲ್ಲಿ ಮಧ್ಯಮ ಸರದಿಯಲ್ಲಿ ಬೇಕಾಗಲಾರದ್ದರಿಂದ ಇಶಾನ್‍ಗೆ ಅವಕಾಶ ವಂಚಿತವಾಗಬಹುದು. ಏಕೆಂದರೆ ಅವರು ಏಕದಿನ ಕ್ರಿಕೆಟಿನಲ್ಲಿ ಮಧ್ಯಮ ಸರದಿಯಲ್ಲಿ ಬೇಕಾಗುವ ತಾಳ್ಮೆಯನ್ನು ಹೊಂದಿಲ್ಲ.

ಉಪನಾಯಕ ರವೀಂದ್ರ ಜಡೇಜಾ ಗಾಯದಿಂದಾಗಿ ಎರಡು ಪಂದ್ಯ ಕಳಕೊಂಡಿದ್ದರು. ಇಂದಿನ ಪಂದ್ಯಕ್ಕೆ ಅವರು ಲಭ್ಯರಾಗುವರೆ ಎಂಬುದು ಸ್ಪಷ್ಟವಾಗಿಲ್ಲ.

ಬೌಲಿಂಗಿನಲ್ಲಿ  ಆರ್ಶದೀಪ್ ಸಿಂಗ್ ಅವಕಾಶ ಪಡೆಯಬಹುದು. ಹಾಗಾದಲ್ಲಿ ಅವೇಶ್ ಖಾನ್ ಜಾಗ ಬಿಡಬೇಕಾಗಬಹುದು. ಅವೇಶ್ ಖಾನ್ ಎರಡನೇ ಪಂದ್ಯದಲ್ಲಿ ತುಸು ದುಬಾರಿಯಾಗಿದ್ದರು. ಇಬ್ಬರು ಆ ಸ್ಪಿನ್ನರ್‍ಗಳನ್ನು ಆಡಿಸಲು ಶಿಖರ್ ಧವನ್ ಇಚ್ಛಿಸಿದಲ್ಲಿ ಚಾಹಲ್‍ಗೆ ವಿಶ್ರಾಂತಿ ನೀಡಬೇಕಾಗಿ ಬಂದೀತು.

ವೆಸ್ಟಿಂಡೀಸ್‍ನ ಕೆಲವು ಆಟಗಾರರು ಉತ್ತಮ ನಿರ್ವಹಣೆ ತೋರುವಲ್ಲಿ ಲರಾಗಿದ್ದಾರೆ. ಬೌಲಿಂಗಿನಲ್ಲಾಗಲಿ, ಬ್ಯಾಟಿಂಗಿನಲ್ಲಾಗಲಿ ಮಿಂಚಿದ್ದಾರೆ. ಆದರೆ ಅವರ ವೈಫಲ್ಯವಿರುವುದು ಒಂದು ತಂಡವಾಗಿ ಸಂಘಟಿತ ನಿರ್ವಹಣೆ ನೀಡುವಲ್ಲಿ. ಅದನು ನೀಗಿಕೊಳ್ಳಬೇಕಾಗಿರುವುದು ವಿಂಡೀಸ್ನ ಅಗತ್ಯವಾಗಿದೆ. ವೈಟ್‍ವಾಶ್ ಬಳಿದುಕೊಳ್ಳದಿರಲು ಅವರು ಇಂದಿನ ಪಂದ್ಯವನ್ನಾದರೂ ಗೆಲ್ಲಬೇಕಾಗಿದೆ.

- Advertisement -

Latest Posts

Don't Miss