ಬೆಂಗಳೂರು: ಸರ್ಕಾರ ಉಳಿಸಿಕೊಳ್ಳೋಕೆ ನಾನಾ ಕಸರತ್ತು ಮಾಡುತ್ತಿರೋ ಮೈತ್ರಿ ನಾಯಕರ ತಲೆಗೆ ಪಕ್ಷೇತರ ಶಾಸಕರು ಹುಳ ಬಿಡುತ್ತಿದ್ದಾರೆ.
ಹೇಗಾದ್ರೂ ಮಾಡಿ ಪಕ್ಷೇತರ ಶಾಸಕರನ್ನ ತಮ್ಮತ್ತ ಸೆಳೆದು ಅವರು ಹೇಳಿದ ಷರತ್ತುಗಳಿಗೆಲ್ಲಾ ಒಪ್ಪಿಕೊಳ್ತೇವೆ ಅಂತ ಹೇಳಿದ್ದ ದೋಸ್ತಿಗಳಿಗೆ ಇದೀಗ ಗೊಂದಲ ಎದುರಾಗಿದೆ. ಯಾಕಂದ್ರೆ ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಯಾರ ಪರ ಇದ್ದಾರೆ, ಅವರ ಉದ್ದೇಶ ಏನು ಅನ್ನೋದು ಮಾತ್ರ ಮೈತ್ರಿ ನಾಯಕರಿಗೆ ಅಂದಾಜಿಗೆ ಸಿಗುತ್ತಿಲ್ಲ.
ಯಾಕಂದ್ರೆ ಇಂದು ಈ ಇಬ್ಬರೂ ಪಕ್ಷೇತರ ಶಾಸಕರು ದಿಢೀರನೆ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿಯನ್ನ ಭೇಟಿಯಾಗಿದ್ದಾರೆ. ನಿನ್ನೆಯಷ್ಟೇ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆಶಿ ಜೊತೆಗಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್ ಮತ್ತು ಮೊನ್ನೆ ದೆಹಲಿಯಲ್ಲಿ ಸಿದ್ದರಾಮಯ್ಯ ಜೊತೆಗಿದ್ದ ಆರ್.ಶಂಕರ್ ರಮೇಶ್ ಜಾರಕಿಹೊಳಿಯನ್ನ ಯಾಕೆ ಭೇಟಿಯಾದ್ರು ಅನ್ನೋದು ಇದೀಗ ಕುತೂಹಲ ಕೆರಳಿಸಿದೆ.
ಒಂದು ವೇಳೆ ರಮೇಶ್ ಜೊತೆ ಸೇರಿ ಸರ್ಕಾರ ಪತನಗೊಳಿಸೋಕೆ ಕೈಜೋಡಿಸಿದ್ರಾ ಅನ್ನೋ ಸಂಶಯದಲ್ಲಿರೋ ದೋಸ್ತಿಗಳು ಪಕ್ಷೇತರ ಶಾಸಕರ ನಿಲುವೇನು ಅಂತ ತಲೆ ಕೆಡಿಸಿಕೊಂಡಿದ್ದಾರೆ.
ವೇಣುಗೋಪಾಲ್ ಗೂ ತಲೆಬಿಸಿ..!
ಶಾಸಕ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ವಿ.ಎಸ್ ಹುಲಗೇರಿ ಮತ್ತು ಬಸವನಗೌಡ ಪಾಟೀಲ್ ದದ್ದಲ್ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಈ ಇಬ್ಬರೂ ಈಗ ರಮೇಶ್ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿರೋ ಮಾಹಿತಿ ಹಿನ್ನೆಲೆಯಲ್ಲಿ ಇಬ್ಬರನ್ನು ಭೇಟಿಯಾಗಿ ಮನವೊಲಿಕೆಗೆ ಮುಂದಾದ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ನಿಟ್ಟಿನಲ್ಲಿ ಚರ್ಚೆ ನಡೆಸಿದ್ರು.
ಏನಾಯ್ತು ಬಂಡಾಯ… ಏನಾಯ್ತು ಆಪರೇಷನ್…?ಮಿಸ್ ಮಾಡದೇ ಈ ವಿಡಿಯೋ ನೋಡಿ