Monday, September 25, 2023

Latest Posts

ಅನಾವಶ್ಯಕ ದುಡ್ಡು ಖರ್ಚು ಮಾಡ್ಬೇಡಿ, ಆಪತ್ಕಾಲ ಬರ್ತಿದೆ ಹುಷಾರ್..!

- Advertisement -

ಕರ್ನಾಟಕ ಟಿವಿ : ಭಾರತ ಇದೇ ವೇಗದಲ್ಲಿ ಹೋದ್ರೆ ವಿಶ್ವದ ನಂಬರ್ ಒನ್ ರಾಷ್ಟ್ರವಾಗುತ್ತೆ.. ಪ್ರಪಂಚದ ಪವರ್ ಫುಲ್ ರಾಷ್ಟ್ರ ಆಗುತ್ತೆ ಹೀಗೆ ಭಾಷಣ ಕೇಳಿ ನಮಗೂ ಬಹಳ ಖುಷಿ ಆಗ್ತಿತ್ತು. ಹೌದು ಭಾರತ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರವಾಗಿತ್ತು, ಉದ್ಯೋಗವನ್ನ ಸೃಷ್ಠಿಸುವ ರಾಷ್ಟ್ರವಾಗಿತ್ತು. ಆದ್ರೆ ಇದೆಲ್ಲಾ ಮಾತು 2014-15ರ ವರೆಗೂ ನಿಜವಾಗಿತ್ತು. ಆದ್ರೆ 2016ರ ನಂತರ ಭಾರತ ನಿರುದ್ಯೋಗ, ಬಂಡಾವಳ ಹೂಡಿಕೆಯಲ್ಲಿ ಹಿನ್ನಡೆ ಹೀಗೆ ನಾನಾ ಸಮಸ್ಯೆಗಳನ್ನ ಎದುರಿಸುವಂತಾಗಿದೆ.. ಆಟೋಮೊಬೈಲ್ ವಿಭಾಗದಲ್ಲಿ ಕಳೆದ 5 ವರ್ಷದಲ್ಲಿ 3,50,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ..

ಬರೀ ಆಟೋ ಮೊಬೈಲ್ ಕ್ಷೇತ್ರವಷ್ಟೆ ಅಲ್ಲ ಹಲವು ಕ್ಷೇತ್ರಗಳು ಬಾಗಿಲು ಬಂದ್ ಮಾಡ್ತಿವೆ.. ದಿನನಿತ್ಯ ಸಾವಿರಾರರು ಜನ ಕೆಲಸ ಕಳೆದುಕೊಳ್ತಿದ್ದಾರೆ. ಹಲವು ಉದ್ಯಮಿಗಳು ಸಾಲಮರುಪಾವತಿ ಮಾಡಲಾಗದೆ ಕೆಲವರು ದೇಶ ಖಾಲಿ ಮಾಡಿದ್ರೆ ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ.. ಕಳೆದ 5 ವರ್ಷಗಳಲ್ಲಿ ಮಲ್ಯ, ಮೋದಿ, ಚೋಕ್ಸಿ, ಸೇರಿದಂತೆ ಸಾವಿರಾರು ಉದ್ಯಮಿಗಳಿಂದ ಲಕ್ಷಾಂತರ ಕೋಟಿ ಸಾಲ ವಸೂಲಿ ಮಾಡಲಾಗದೆ ಬ್ಯಾಂಕುಗಳು ದಿವಾಳಿ ಅಂಚಿಗೆ ಬಂದು ನಿಂತಿವೆ..

ಕೇವಲ ಉದ್ಯಮಿಗಳಷ್ಟೆ ಅಲ್ಲ. ಉದ್ಯೋಗಿಗಳು ನಮ್ಮ ಕೆಲಸ ಯಾವಾಗ ಹೋಗುತ್ತೋ ಅನ್ನೋ ಭಯದಲ್ಲೇ ದಿನ ದೂಡ್ತಿದ್ದಾರೆ. ಟ್ರಂಪ್ ಬಿಗಿನಿಲುವಿನಿಂದಾಗಿ ಭಾರತೀಯ ಸಾಫ್ಟ್ ವೇರ್ ಕ್ಷೇತ್ರದಲ್ಲಿಆತಂಕದ ವಾತಾವರಣ ನಿರ್ಮಾಣವಾಗಿದೆ.. ಇನ್ನು ಎಂಜಿನಿಯರಿಂಗ್ ಪದವಿ ಪೂರೈಸಿರುವ ಹಾಗೂ ಪ್ರಸ್ತುವ ಕಾಲೇಜಿನಲ್ಲಿ ಸೇರಿರುವ 50 ಲಕ್ಷ ಯುವಜನತೆಗೆ ಕೆಲಸ ಸಿಗುವ ಸಾಧ್ಯತೆಯೇ ಇಲ್ಲ ಎನ್ನಲಾಗ್ತಿದೆ. ಶಿಕ್ಷಣ ಮುಗಿಸಿ ಹೊರ ಬರುತ್ತಿರುವ ಪದವಿದರರಲ್ಲಿ ಶೇಕಡ 10% ಮಾತ್ರ ಕೆಲಸ ಪಡೀತಿದ್ದಾರೆ.. ಉಳಿದ ಶೇ 90% ಪದವೀಧರರು ಕೆಲಸ ವಿಲ್ಲದೇ ಡಿಪ್ರೆಶನ್ ಗೆ ಒಳಗಾಗುತ್ತಿದ್ದಾರೆ..

ಈ ಎಲ್ಲಾ ಬೆಳವಣಿಗೆಯನ್ನ ಗಮನಿಸಿದ್ರೆ ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯೆಗೆ ಸಿಲುಕುವ ಸಾಧ್ಯತೆ ಗೋಚರವಾಗ್ತಿದೆ. ಹೀಗಾಗಿ ಅನಶ್ಯಕವಾಗಿ ಹಣವನ್ನ ಖರ್ಚು ಮಾಡದೆ. ಭವಿಷ್ಯದ ದೃಷ್ಠಿಯಿಂದ ಹಣ ಕೂಡಿಡುವುದು ಉತ್ತಮ. ನಮ್ಮ ಭಾರತೀಯರು ಫಿನಾನ್ಸ್ ಮ್ಯಾನೇಜ್ ಮೆಂಟ್ ಚೆನ್ನಾಗಿ ನಿಭಾಯಿಸ್ತಾರೆ. ಹೀಗಾಗಿ ಇಂದಿನಿಂದಲೇ ಉಳಿತಾಯದ ಕಡೆ ಗಮನಕೊಡುವುದು ಉತ್ತಮ. ಹಾಗಂತೆ ಭಾರತದ ಆರ್ಥಿಕ ಸನ್ನಿವೇಶ ಹೀಗೆಯೇ ಪಾತಾಳಕ್ಕೆ ಕುಸಿಯುವುದಿಲ್ಲ. ಪರ್ಯಾಯ ವ್ಯವಸ್ಥೆ ಆಗುತ್ತೆ. ಆದರೆ ಕನಿಷ್ಠ 5-10 ವರ್ಷ ನಾವು ನಮ್ಮ ಹಿಡಿತದಲ್ಲಿ ಇರುವುದು ಒಳ್ಳೆಯದು.

ಹಣ ಹೇಗೆ ಕೂಡಿಡುವುದು..?

ದುಬಾರಿ ಡೋನೇಷನ್ ಕೊಟ್ಟು ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸದೆ ಉತ್ತಮ ಶಿಕ್ಷಣ ಖಾತ್ರಿ ಮಾಡಿಕೊಂಡು ಸರ್ಕಾರಿ ಶಾಲೆ ಅಥವಾ ಡೋನೇಷನ್ ರಹಿತ ಸರ್ಕಾರಿ ಅನುದಾನಿತ ಶಾಲೆಗೆ ಸೇರಿಸುವುದು

ಮದುವೆ, ಇತರೆ ಕಾರ್ಯಗಳನ್ನ ಆಡಂಬರದಿಂದ ಮಾಡದೆ ಸರಳಾಗಿ ಆಚರಿಸಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ.

ಮೋಜು, ಮಸ್ತಿಗೆ ಬ್ರೇಕ್ ಹಾಕಿ ಖರ್ಚಿಲ್ಲದೇ ಸಿಗುವ ಮನರಂಜನೆ ಕಡೆ ಗಮನ ಕೊಡಿ

ಸಾಲ ಮಾಡಿ ಜೀವನ ಎಂಜಾಯ್ ಮಾಡೊದನ್ನ ನಿಲ್ಲಿಸಿ, ಅವಶಕ್ಯಕತೆಗೆ ಅನುಗುಣವಾಗಿ ಲೋನ್ ಮಾಡಿ

ತಿಂಗಳ ದುಡಿಮೆಯಲ್ಲಿ ಕನಿಷ್ಟ 20% ಮೇಲ್ಪಟ್ಟ ಹಣವನ್ನ ಕಡ್ಡಾಯವಾಗಿ ಉಳಿತಾಯ ಮಾಡಿ

- Advertisement -

Latest Posts

Don't Miss