Wednesday, November 29, 2023

Latest Posts

ಕೋಟಿಕೋಟಿ ಹಣ ಹೋಯ್ತು. ಕಾಸು ಬರುವ ಜಾಗಾನೂ ಹೋಯ್ತು..!

- Advertisement -

ಕರ್ನಾಟಕ ಟಿವಿ : ಸಾಮಾನ್ಯವಾಗಿ ದೊಡ್ಡದೊಡ್ಡ ಅಧಿಕಾರಿಗಳು ಕಾಸು ಸಿಗುವ ಹುದ್ದೆಯಲ್ಲಿ ಕೂರಬೇಕು ಅಂತ ನಾನಾ ಸರ್ಕಸ್ ಮಾಡೋದು ಓಪನ್ ಸೀಕ್ರೆಟ್.. ಹೀಗಾಗಿ ಸಚಿವರು ಶಾಸಕರ ಇನ್ ಫ್ಲೂಯನ್ಸ್ ಮೂಲಕ ಅಥವಾ ಜಾತಿ ಸ್ಲೇಟ್ ಹಿಡಿದುಕೊಂಡೋ, ಇಲ್ಲ ಹಣ ಕೊಟ್ಟೊ ಆಯಕಟ್ಟಿನ ಜಾಗಕ್ಕೆ ಬಂದು ಕೂತಿರ್ತಾರೆ.. ಹೀಗೆ ಕಳೆದ ಸರ್ಕಾರದ ಕೃಪಾಕಟಾಕ್ಷದಿಂದ ವರ್ಗಾವಣೆಗೊಂಡಿದ್ದಅಧಿಕಾರಿಗಳನ್ನ ಸಿಎಂ ಯಡಿಯೂರಪ್ಪ ಟೀಂ ಈಗ  ಟಾರ್ಗೆಟ್ ಮಾಡಿದಂತೆ ಕಾಣ್ತಿದೆ.. ಸಿದ್ದರಾಮಯ್ಯ ಸರ್ಕಾರದ ನಂತರ ಬಂದ ಕುಮಾರಸ್ವಾಮಿ ಸರ್ಕಾರ ಯಾವ ರೀತಿ ಅಧಿಕಾರಿಗಳನ್ನ ಪವರ್ ಬಳಸಿ ವರ್ಗವಾಣೆ ಮಾಡಿತ್ತೋ ಅದೇ ರೀತಿ ಸಿಎಂ ಯಡಿಯೂರಪ್ಪ ಹಳೆ ಸರ್ಕಾರದ ಪಟಾಲಂ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ತಮ್ಮ ಸೇನೆಯನ್ನ ಕಟ್ಟೋಕೆ ಮುಂದಾಗಿದ್ದಾರೆ.. ಆದ್ರೆ, ಕೋಟಿಗಟ್ಟಲೇ ಕಾಸುಕೊಟ್ಟು ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳ ಸ್ಥಿತಿ ಇತ್ತ ಕಾಸೂ ಇಲ್ಲ ಅತ್ತ ಕಾಸು ಬರುವ ಜಾಗನೂ ಇಲ್ಲಅನ್ನುವ ಸ್ಥಿತಿಗೆ ತಲುಪಿದ್ದಾರೆ.. ತಮಗಾದ ನೋವನ್ನ ಯಾರ ಬಳಿಯೂ ಹೇಳಲಾರದೆ ಕೈಕೈ ಹಿಸಿಕಿಕೊಳ್ತಿದ್ದಾರೆ..

ಇನ್ನು ಸಿಎಂ ಯಡಿಯೂರಪ್ಪ ವರ್ಗಾವಣೆ ಸ್ಪೀಡ್ ಕಂಡು ಬಿಜೆಪಿ ನಾಯಕರೇ ದಂಗಾಗಿ ಹೋಗಿದ್ದಾರೆ.. ಯಾವೊಬ್ಬ ಸಚಿವರು ಅಧಿಕಾರವಹಿಸಿಕೊಳ್ಳದ ಹೊರತಾಗಿಯೂ ಯಡಿಯೂರಪ್ಪ ಸುಖಾಸುಮ್ಮನೆ ವರ್ಗಾವಣೆ ಮಾಡ್ತಿರೋದು ಬಿಜೆಪಿ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.. ಯಾಕಂದ್ರೆ ಈ ವರ್ಗಾವಣೆ ನಿಷ್ಟಾವಂತ ಅಧಿಕಾರಿಗಳ ಪ್ರತಿಷ್ಠಾಪನೆಯೋ, ಇಲ್ಲ ಕಾಸಿಗಾಗಿ ನಡೀತಿರೋ ವರ್ಗಾವಣೆಯೋ ಅನ್ನುವ ಪ್ರಶ್ನೆ ಎದ್ದಿದೆ.. ಜೆಡಿಎಸ್ ನಾಯಕರು ಮಾತ್ರ ಸಿಎಂ ಯಡಿಯೂರಪ್ಪ ಒಕ್ಕಲಿಗ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.. ಇತ್ತ ಕಾಂಗ್ರೆಸ್ ಕೆಲ ನಾಯಕರು ಬಿಎಸ್ ವೈ ವರ್ಗವಾಣೆ ಬಗ್ಗೆ ಆರೋಪ ಮಾಡಿದ್ರೆ ಮತ್ತೆ ಕೆಲವರು ನೇರವಾಗಿ ಬಿಎಸ್ ವೈ ಗೆ ಕಾಲ್ ಮಾಡಿ ತಮಗೆ ಬೇಕಾದ ಅಧಿಕಾರಿಗಳ ವರ್ಗವಾಣೆಗೆ ಶಿಫಾರಸು ಮಾಡಿದ್ದಾರೆ ಅಂತ ಹೇಳಾಗ್ತಿದೆ..

- Advertisement -

Latest Posts

Don't Miss