International News: ಮಾರ್ಚ್ 16ರಿಂದ 20ರವರೆಗೆ ಐದು ದಿನಗಳ ಕಾಲ ಭಾರತದ ಭೇಟಿಯಲ್ಲಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲೂಕ್ಸನ್ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿದ್ದಾರೆ. ಅಲ್ಲದೆ ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ಮಾಹಿತಿ ವಿನಿಮಯ, ತಂತ್ರಜ್ಞಾನ ಆಧಾರಿತ ಜ್ಞಾನ ಹಂಚಿಕೆ ಸೇರಿದಂತೆ ಪ್ರಮುಖವಾಗಿ ಖಲಿಸ್ತಾನಿ ಉಗ್ರರು ಸೇರಿದಂತೆ ಭಯೋತ್ಪಾದಕ ನಿಗ್ರಹ ವಿಷಯಗಳ ಬಗ್ಗೆ ಭಾರತ ಹಾಗೂ ನ್ಯೂಜಿಲೆಂಡ್‌ನ ಪ್ರಧಾನಿಗಳ ನಡುವೆ ಮಹತ್ವದ ಚರ್ಚೆಯನ್ನು ನಡೆದಿದೆ.
ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎರಡು ದೇಶಗಳ ನಡುವಿನ ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತೇವೆ. ಎರಡು ದೇಶದ ನಡುವೆ ಸುಸ್ಥಿರ ವ್ಯಾಪಾರ ಮತ್ತು ಹೂಡಿಕೆಗೆ ಎರಡು ದೇಶದ ನಾಯಕರು ಸ್ವಾಗತಿಸುತ್ತೇವೆ. ಆಳದ ಆರ್ಥಿಕತೆಯು ಏಕೀಕರಣ ಸಾಧಿಸಲು ಸಮತೋಲಿತ, ಮಹಾತ್ವಕಾಂಕ್ಷೆ, ಸಮಗ್ರತೆಗಳು ಪರಸ್ಪರ ಪ್ರಯೋಜನಕಾರಿಯಾಗಿವೆ ಎಂದು ಹೇಳಿದ್ದಾರೆ. ಇದೇ ವೇಳೆ, ಜಾಗತಿಕ ಸವಾಲುಗಳ ಕುರಿತು ಮಾತನಾಡಿದ ಅವರು, ಭಯೋತ್ಪಾದನೆ ಕುರಿತು ಕಾಳಜಿ ಕುರಿತು ವ್ಯಕ್ತಪಡಿಸಿ, ಎರಡು ದೇಶಗಳು ಇದರ ದಾಳಿಗೆ ಒಳಗಾಗಿದ್ದು, ಎಲ್ಲ ರೀತಿಯ ಭಯೋತ್ಪಾದನೆಗಳು ಸ್ವೀಕರಾರ್ಹವಲ್ಲ. ಅದು 2019ರ ಕ್ರೈಸ್ತ್ ಚರ್ಚ್ ದಾಳಿ ಇರಲಿ , ಮುಂಬೈನ ದಾಳಿ ಆಗಿರಲಿ. ಭಯೋತ್ಪಾದನೆ ಬಗ್ಗೆ ಎರಡು ದೇಶದ ಅಭಿಪ್ರಾಯ ಒಂದೇ ಆಗಿದೆ. ಭಯೋತ್ಪಾದನೆ ಪಿತೂರಿ ವಿರುದ್ಧ ಅಗತ್ಯ ಕಠಿಣ ಕ್ರಮ ನಡೆಸಬೇಕು ಎಂದು ಮೋದಿ ಒತ್ತಿ ಹೇಳಿದ್ದಾರೆ.
ಅಲ್ಲದೆ ಉಭಯ ದೇಶಗಳು ವ್ಯಾಪಾರ, ಹೂಡಿಕೆ, ರಕ್ಷಣೆ ಮತ್ತು ಭದ್ರತೆಯಲ್ಲಿನ ಸಹಯೋಗ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವಲ್ಲಿ ಒಪ್ಪಿರುವುದಾಗಿ ತಿಳಿಸಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ಲೂಕ್ಸನ್, ಸಚಿವರು, ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಮಾಧ್ಯಮ ಮತ್ತು ನ್ಯೂಜಿಲ್ಯಾಂಡ್ ಭಾರತದ ರಾಯಭಾರಿ ಸಮುದಾಯದ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.