Sunday, March 3, 2024

Latest Posts

1st ಸೆಮಿಫೈನಲ್ : ಬ್ಲೂ ಬಾಯ್ಸ್ vs ಬ್ಲಾಕ್ ಕ್ಯಾಪ್ಸ್ ವಾರ್..!

- Advertisement -

ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ಮತ್ತು ನ್ಯೂಜಿಲೆಂಡ್, ಮೊದಲ ಸೆಮಿಫೈನಲ್ ಫೈಟ್ ಗೆ ರೆಡಿಯಾಹಿವೆ. ಈ ನಡುವೆ ಎರಡೂ ತಂಡಗಳ ಸ್ಟಾರ್ ಆಟಗಾರರ ನಡುವಿನ ಸಮರಕ್ಕೆ ಮ್ಯಾಂಚೆಸ್ಟರ್ ವೇದಿಕೆಯಾಗುತ್ತಿದೆ. ಹಾಗಾದ್ರೆ ಇಂದು ಯಾವೆಲ್ಲ ಕ್ರಿಕೆಟರ್ಸ್ ಪೈಪೋಟಿಗೆ ಇಳಿದಿದ್ದಾರೆ ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್…

ರೋಹಿತ್ ಶರ್ಮಾ vs ಟ್ರೆಂಟ್ ಬೌಲ್ಟ್
ಟೀಮ್ ಇಂಡಿಯಾ ಓಪನರ್ ರೋಹಿತ್ ಶರ್ಮಾಗೆ, ನ್ಯೂಜಿಲೆಂಡ್ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ಇಂದು ಸವಾಲ್ ಹಾಕಲಿದ್ದಾರೆ. ಹಿಟ್ ಮ್ಯಾನ್ ಅಂತಾನೇ ಫೇಮಸ್ ಆಗಿರುವ ರೋಹಿತ್, ಟೂರ್ನಿಯಲ್ಲಿ 5 ಸೆಂಚುರಿ ಸಿಡಿಸಿದ್ದಾರೆ. ಅಷ್ಟೇ ಅಲ್ಲದೇ 8 ಪಂದ್ಯಗಳಲ್ಲಿ 647 ರನ್ ಕಲೆ ಹಾಕಿದ್ದಾರೆ. ಇನ್ನೂ ಕಿವೀಸ್ ಪರ ಸ್ಟ್ರೈಕ್ ಬೌಲರ್ ಬೌಲ್ಟ್, ಟೂರ್ನಿಯಲ್ಲಿ 15 ವಿಕೆಟ್ ಪಡೆದಿದ್ದಾರೆ. ಆರಂಭದಲ್ಲೇ ಎದುರಾಳಿ ಓಪನರ್ಸ್ ಗಳಿಗೆ ಆಘಾತ ನೀಡುವ ಬೌಲ್ಟ್ ಮತ್ತು ರೋಹಿತ್ ನಡುವಿನ ಪೈಪೋಟಿ ಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಕಾದು ನೋಡಬೇಕಾಗಿದೆ.

ಕೇನ್ ವಿಲಿಯಮ್ಸನ್ vs ಜೆಸ್ಪ್ರೀತ್ ಬೂಮ್ರಾ
ಯಾರ್ಕರ್ ಸ್ಪೆಷಲಿಸ್ಟ್ ಬೂಮ್ರಾ, ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಗೆ ಸವಾಲ್ ಹಾಕುವುದಕ್ಕೆ ಸಜ್ಜಾಗಿದ್ದಾರೆ. ಟೀಮ್ ಇಂಡಿಯಾದ ಫ್ರೆಂಟ್ ಲೈನ್ ಬೌಲರ್ ಬೂಮ್ರಾ, ಟೂರ್ನಿಯಲ್ಲಿ 17 ವಿಕೆಟ್ ಪಡೆದಿದ್ರೆ, ಕಿವೀಸ್ ಪಡೆಯ ಬ್ಯಾಟಿಂಗ್ ಬೆನ್ನೆಲುಬಾಗಿರುವ ವಿಲಿಯಮ್ಸನ್ ಆಡಿರುವ 8 ಪಂದ್ಯಗಳಲ್ಲಿ 481 ರನ್ ಕಲೆ ಹಾಕಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋ ಕುತೂಹಲ ಕ್ರಿಕೆಟ್ ವಲಯದಲ್ಲಿ ಮನೆ ಮಾಡಿದೆ.

ವಿರಾಟ್ ಕೊಹ್ಲಿ vs ಲಾಕಿ ಫರ್ಗುಸನ್
ರನ್ ಮಷಿನ್ ವಿರಾಟ್ ಕೊಹ್ಲಿ ಗೆ ನ್ಯೂಜಿಲೆಂಡ್ ಬೌನ್ಸ್ ಸ್ಪೆಷಲಿಸ್ಟ್ ಲಾಕಿ ಫರ್ಗುಸನ್ ಸವಾಲ್ ಹಾಕುವುದಕ್ಕೆ ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್, ಟೂರ್ನಿಯಲ್ಲಿ ಒಂದೇ ಒಂದು ಸೆಂಚುರಿ ಬಾರಿಸಿಲ್ಲ. ಹಾಗಂತ ಕೊಹ್ಲಿ ಪರ್ಫಾರ್ಮೆನ್ಸ್ ಕಡಿಮೆಯಾಗಿಲ್ಲ. ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ 5 ಅರ್ಧ ಶತಕ ಸಿಡಿಸಿರುವ ಕಿಂಗ್ ಕೊಹ್ಲಿ, 442 ರನ್ ಕಲೆ ಹಾಕಿದ್ದಾರೆ. ಇನ್ನೂ ಇಂದು ಕೂಡ ಮ್ಯಾಂಚೆಸ್ಟರ್ ನಲ್ಲಿ ರನ್ ಹೊಳೆ ಹರಿಸುವ ಯೋಚನೆಯಲ್ಲಿದ್ದಾರೆ. ಆದ್ರೆ ಕೊಹ್ಲಿ ರನ್ ದಾಹಕ್ಕೆ ಬ್ರೇಕ್ ಹಾಕುವುದಕ್ಕೆ ಎದುರಾಳಿ ಪಡೆಯ ವೇಗಿ ಫರ್ಗುಸನ್ ಸಜ್ಜಾಗಿದ್ದಾರೆ. ಆಡಿದ 7 ಪಂದ್ಯಗಳಲ್ಲೇ 17 ವಿಕೆಟ್ ಪಡೆದಿರುವ ನ್ಯೂಜಿಲೆಂಡ್ ವೇಗಿ ಆಟ ಕೊಹ್ಲಿ ಮುಂದೆ ನಡೆಯುತ್ತಾ ನೋಡಬೇಕಾಗಿದೆ.

ರಾಸ್ ಟೈಲರ್ vs ಮೊಹಮ್ಮದ್ ಶಮಿ
ನ್ಯೂಜಿಲೆಂಡ್ ನ ಅನುಭವಿ ಬ್ಯಾಟ್ಸ್ ಮನ್ ರಾಸ್ ಟೈಲರ್ ಅಪಾಯಕಾರಿ ಆಟಗಾರ. ಅದ್ರೆ ಇಂತಹ ಡೇಂಜರ್ ಬ್ಯಾಟ್ಸ್ ಮನ್ ಗೆ ಖೆಡ್ಡಾ ತೋಡುವುದಕ್ಕೆ, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಯಾರಾಗಿದ್ದಾರೆ. ಆಡಿರುವ 4 ಪಂದ್ಯಗಳಲ್ಲೇ 14 ವಿಕೆಟ್ ಪಡೆದಿರುವ ಶಮಿ, ಟೈಲರ್ ರನ್ನ ಪೆವಿಲಿಯನ್ ಗಟ್ಟೋ ಗೇಮ್ ಪ್ಲಾನ್ ರೂಪಿಸಿದ್ದಾರೆ.
ಯಸ್.. ವೀಕ್ಷಕರೆ ಅದೇನೆ ಇರಲಿ ಸದ್ಯ ಫೈನಲ್ ಮೇಲೆ ಕಣ್ಣಿಟ್ಟಿರುವ ಎರಡೂ ತಂಡದ ಆಟಗಾರರು ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿದ್ದಾರೆ. ಹಾಗಾದ್ರೆ ಇಲ್ಲಿ ಯಾರು ಯಾರ ಮೇಲೆ ಮೇಲುಗೈ ಸಾಧಿಸುತ್ತಾರೆ ಎನ್ನುವುದರ ಮೇಲೆ ತಂಡದ ಫಲಿತಾಂಶ ನಿಂತಿದೆ.

https://www.youtube.com/watch?v=-lk64_EnG7g
- Advertisement -

Latest Posts

Don't Miss