Saturday, October 25, 2025

Latest Posts

3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ : ರೋಹಿತ್ ಮತ್ತು ಕೊಹ್ಲಿ ಅದ್ಭುತ ಪ್ರದರ್ಶನ

- Advertisement -

ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ಏಕದಿನ ತಂಡ ಸರಣಿಯನ್ನು ಕಳೆದುಕೊಂಡಿದ್ದರೂ, ಕೊನೆಯ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿ ಪ್ರವಾಸಕ್ಕೆ ಜಯಭೇರಿ ಬಾರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ಗಳಷ್ಟೇ ಗಳಿಸಿತು. ನಂತರ ಭಾರತದ ಪರವಾಗಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಸುಲಭ ಗೆಲುವಿನತ್ತ ಕೊಂಡೊಯ್ದರು.

ರೋಹಿತ್ ಶರ್ಮಾ ಅಜೇಯ ಶತಕ ಬಾರಿಸಿದರೆ, ಕೊಹ್ಲಿ ಅರ್ಧಶತಕದ ಅದ್ಭುತ ಇನ್ನಿಂಗ್ಸ್‌ ಆಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 168 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿ ಕೇವಲ 38.3 ಓವರ್‌ಗಳಲ್ಲಿ ಭಾರತವನ್ನು ಗುರಿಯತ್ತ ಕೊಂಡೊಯ್ದರು. ಈ ಗೆಲುವಿನಿಂದ ಭಾರತ ಕ್ಲೀನ್‌ ಸ್ವೀಪ್‌ ಮುಜುಗರದಿಂದ ಪಾರಾಗಿ ಸರಣಿಯನ್ನು 2-1 ಅಂತರದಿಂದ ಮುಗಿಸಿತು.

ರೋಹಿತ್ ತಮ್ಮ 33ನೇ ಶತಕವನ್ನು ಪೂರ್ಣಗೊಳಿಸಿ ಆಸ್ಟ್ರೇಲಿಯಾದಲ್ಲಿ ಆರನೇ ಶತಕ ಬಾರಿಸಿದರು, ಕೊಹ್ಲಿ ತಮ್ಮ 75ನೇ ಅರ್ಧಶತಕದ ಮೈಲುಗಲ್ಲು ತಲುಪಿದರು. ಇಬ್ಬರ ಮಧ್ಯೆ ಇದು ಏಕದಿನ ಕ್ರಿಕೆಟ್‌ನಲ್ಲಿನ 19ನೇ ಶತಕದ ಜೊತೆಯಾಟವಾಗಿದ್ದು, ಅಭಿಮಾನಿಗಳಿಗೆ ಹಳೆಯ ದಿನಗಳ ನೆನಪನ್ನು ತಂದುಕೊಟ್ಟಿತು. ಸರಣಿಯನ್ನು ಆಸ್ಟ್ರೇಲಿಯಾ ಗೆದ್ದರೂ, ಅಂತಿಮ ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿಯ ಪ್ರದರ್ಶನವೇ ದಿನದ ವಿಶೇಷ ಕ್ಷಣವಾಗಿ ಉಳಿಯಿತು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss