ಬರ್ಮಿಂಗ್ ಹ್ಯಾಮ್: ಜೋ ರೂಟ್ ಹಾಗೂ ಜಾನಿ ಬೇರ್ ಸ್ಟೋ ಅವರ ಶತಕದ ಜೊತೆಯಾಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗಳ ಸೋಲು ಅನುಭವಿಸಿತು.
ಇದರೊಂದಿಗೆ ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಭಗ್ನವಾಯಿತು.ಸರಣಿ 2-2 ಅಂತರದಿಂದ ಡ್ರಾ ಕಂಡಿತು.
ಮಂಗಳವಾರ ಐದನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಜೋ ರೂಟ್ ಹಾಗೂ ಜಾನಿ ಬೈರ್ ಸ್ಟೊ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಇದೇ ಮೊದಲ ಬಾರಿಗೆ 378 ಬೃಹತ್ ಮೊತ್ತವನ್ನು ಚೆಸ್ ಮಾಡಿದ ಸಾಧನೆ ಮಾಡಿತು.
ಜೋ ರೂಟ್ ಒಟ್ಟು 173 ಎಸೆತ ಎದುರಿಸಿ 19 ಬೌಂಡರಿ 1 ಸಿಕ್ಸರ್ ಸಿಡಿಸಿ ಅಜೇಯ 142 ರನ್ ಹೊಡೆದರು. ಇವರಿಗೆ ಒಳ್ಳೆ ಸಾಥ್ ನೀಡಿದ ಜಾನು ಬೈರ್ ಸ್ಟೊ 145 ಎಸೆತದಲ್ಲಿ 15 ಬೌಂಡರಿ 1 ಸಿಕ್ಸರ್ ಸಿಡಿಸಿ ಅಜೇಯ 114 ರನ್ ಗಳಿಸಿದರು. ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 378 ರನ್ ಕಲೆ ಹಾಕಿತು.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 737 ರನ್ ಹೊಡೆದ ಜೋ ರೂಟ್ ಹಾಗೂ 23 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಎರಡೂ ಇನ್ನಿಂಗ್ಸ್ ಗಳಲ್ಲೂ ಶತಕ ಸಿಡಿಸಿದ ಜಾನಿ ಬೈರ್ ಸ್ಟೊ ಪಂದ್ಯ ಶ್ರೇಷ್ಠ ಪ್ರಸಸ್ತಿಗೆ ಭಾಜನರಾದರು.