ರಾಜ್ಕೋಟ್: ಸರಣಿ ಸೋಲು ಜೊತೆಗೆ ನಾಯಕತ್ವದಲ್ಲಿ ಯಶಸ್ವಿಯಾಗಲೂ ಪಣ ತೊಟ್ಟಿರುವ ನಾಯಕ ರಿಷಬ್ ಪಂತ್ ಮತ್ತೊಂದು ಅಗ್ನಿ ಸವಾಲು ಸ್ವೀಕರಿಸಲು ಸಜ್ಜಾಗಿದ್ದು ಇಂದು ರಾಜ್ ಕೋಟ್ ಅಂಗಳದಲ್ಲಿ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯ ಆಡಲಿದೆ.
ಮೊದಲ ಮೂರು ಪಂದ್ಯಗಳಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದುಕೊಂಡಿತು.ಇದೀಗ ಈ ಪಂದ್ಯವನ್ನೂ ಕೈಚೆಲ್ಲಿದರೆ ಸರಣಿಯನ್ನು ಕೈಚೆಲ್ಲಿದೆ. ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಕಳೆದುಕೊಳ್ಳಲಿದೆ.
ಆರಂಭದ 2 ಸೋಲುಗಳ ಹೊರತಾಗಿಯೂ ಭಾರತಕ್ಕೆ ಗೆಲ್ಲುವ ತಾಕತ್ತು ಇದೆ. ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಒಳ್ಳೆಯ ಆರಂಭ ನೀಡುತ್ತಿರುವುದು ತಂಡಕ್ಕೆ ಲಾಭವಾಗಿದೆ. ಪಂತ್ ನಾಯಕತ್ವದ ಒತ್ತಡಕ್ಕೆ ಒಳಗಾಗದಂತೆ ಆಡುತ್ತಿದ್ದು ಬ್ಯಾಟಿಂಗ್ ನಲ್ಲೂ ಮಿಂಚಬೇಕಿದೆ.
ಹಾರ್ದಿಕ್ ಪಾಂಡ್ಯ ಕಠಿಣ ಸಂದರ್ಭದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಸ್ಕೋರ್ ಹೆಚ್ಚಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮತ್ತೋರ್ವ ಸ್ಫೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ ಇನ್ನಷ್ಟೆ ಸ್ಪೋಟಕ ಬ್ಯಾಟಿಂಗ್ ಮಾಡಬೇಕಿದೆ.
ವೇಗಿ ಭುವನೇಶ್ವರ್ ಮತ್ತೆ ಲಯ ಕಂಡುಕೊಂಡಿದ್ದಾರೆ. ಇತರೆ ಬೌಲರ್ಗಳಿಂದ ಬೆಂಬಲ ನಿರೀಕ್ಷಿಸುತ್ತಿದ್ದಾರೆ. ಮೂರು ಪಂದ್ಯಗಳಿಂದ ಒಂದೂ ವಿಕೆಟ್ ಪಡೆಯದ ಆವೇಶ್ ಖಾನ್ ಬದಲು ಉಮ್ರಾನ್ ಮಲ್ಲಿಕ್ ಗೆ ಅವಕಾಶ ಕೊಡುವ ಸಾಧ್ಯತೆ ಇದೆ.
ದ.ಆಫ್ರಿಕಾ ಡೇವಿಡ್ ಮಿಲ್ಲರ್, ವಾನ್ ಡೆರ್ ಡುಸನ್, ಕ್ಲಾಸೆನ್ ಅವರನ್ನು ಬೇಗ ಕಟ್ಟಿಹಾಕಿದರೆ ಭಾರತದ ಗೆಲುವು ಖಚಿತವಾಗಲಿದೆ.