Thursday, December 26, 2024

Latest Posts

ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ

- Advertisement -

ಹರಾರೆ: ಶುಭಮನ್ ಗಿಲ್ ಅವರ ಆಕರ್ಷಕ ಶತಕ  ಹಾಗೂ ಆವೇಶ್ ಖಾನ್ ಅವರ ಅದ್ಭುತ ಬೌಲಿಂಗ್ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ  13 ರನ್‍ಗಳ ರೋಚಕ ಗೆಲುವು ಗೆಲುವು ಪಡೆಯಿತು. ಜೊತೆಗೆ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.

ಇಲ್ಲಿನ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು. ಜಿಂಬಾಬ್ವೆ 49.3 ಓವರ್‍ಗಳಲ್ಲಿ 276 ರನ್‍ಗಳಿಗೆ ಆಲೌಟ್ ಆಯಿತು.

290 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಜಿಂಬಾಬ್ವೆ ಆರಂಭಿಕ ಬ್ಯಾಟರ್ ಘಿ, ಇನೋ ಸೆಂಟ್ ಕೈಯಾ (6) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.ಸಿಯಾನ್ ವಿಲಿಯಮ್ಸ್ 45 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.

ಟೋನಿ ಮುನ್ಯೊಂಗಾ  15 ರನ್ ಗಳಿಸಿದರು. ಐದನೆ ಕ್ರಮಾಂಕದಲ್ಲಿ ಬಂದ ಸಿಖಂದರ್ ರಾಜಾ ಭರ್ಜರಿ ಬ್ಯಾಟಿಂಗ್ ಮಾಡಿ 88 ಎಸೆತದಲ್ಲಿ ಶತಕ ಸಿಡಿಸಿದರು. ನಾಯಕ ರೆಗಿಸ್ ಚಕಬ್ವ (16), ರಿಯಾನ್ ಬುರ್ಲ್ 8, ಲ್ಯೂಕ್ ಜೊಂಗ್ವೆ 14,  ಬ್ರಾಡ್ ಇವನ್ಸ್ 28 ರನ್ ಹೊಡೆದು ಒಳ್ಳೆಯ ಸಾಥ್ ಕೊಟ್ಟರು.

ಕೊನೆಯ ಓವರ್‍ನಲ್ಲಿ  ಜಿಂಬಾಬ್ವೆಗೆ 6 ಎಸೆತದಲ್ಲಿ 15 ರನ್ ಬೇಕಿತ್ತುಘಿ. ಕೊನೆಯ ಓವರ್‍ನಲ್ಲಿ ದಾಳಿಗಿಳಿದ ಜಿಂಬಾಬ್ವೆ  ಮೂರನೆ ಎಸೆತದಲ್ಲಿ ವಿಕ್ಟರ್ ನ್ಯುಚಿ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಭಾರತ ಪರ  ಆವೇಶ್ ಖಾನ್ 3, ದೀಪಕ್ ಚಾಹರ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಭಾರತ ಶಿಖರ್ ಧವನ್ 40, ನಾಯಕ ಕೆ.ಎಲ್. ರಾಹುಲ್ 30 ರನ್ ಗಳಿಸಿದರು. ಶುಭಮನ್ ಗಿಲ್ 130 ರನ್ ಗಳಿಸಿದರು. ಶುಭಮನ್ 82 ಎಸೆತದಲ್ಲಿ ಶತಕ ಸಿಡಿಸಿದರು. ಶುಭಮನ್ ಒಟ್ಟು  97 ಎಸೆತ ಎದುರಿಸಿ 15 ಬೌಂಡರಿ 1 ಸಿಕ್ಸರ್ ಸಹಿತ 130 ರನ್ ಹೊಡೆದರು. ಇಶಾನ್ ಕೀಶನ್ 50, ಸಂಜು ಸ್ಯಾಮ್ಸನ್ 15 ರನ್ ಗಳಿಸಿದರು. ಜಿಂಬಾಬ್ವೆ ಪರ  ಬ್ರಾಡ್ ಇವನ್ಸ್ 54ಕ್ಕೆ 5 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ 

ಭಾರತ 289/8 

ಶುಭಮನ್ ಗಿಲ್ 130, ಇಶಾನ್ ಕಿಶನ 50 ರನ್ 

ಬ್ರಾಡ್ ಇವನ್ಸ್ 54ಕ್ಕೆ 5, ವಿಕ್ಟರ್ ನ್ಯುಚಿ 48ಕ್ಕೆ 1 

ಜಿಂಬಾಬ್ವೆ   276 ಆಲೌಟ್ (49.3 ಓವರ್) 

ಸಿಖಂದರ್ ರಾಜಾ 115, ಸೀಯಾನ್ ವಿಲಿಯಮ್ಸ್  45

ಆವೇಶ್ ಖಾನ್ 66ಕ್ಕೆ3, ಕುಲದೀಪ್ 38ಕ್ಕೆ 2  ವಿಕೆಟ್

- Advertisement -

Latest Posts

Don't Miss