Sunday, September 8, 2024

Latest Posts

ಧವನ್ ಪಡೆಗೆ ಸರಣಿ ಗೆಲ್ಲುವ ತವಕ :ಇಂದು ಭಾರತ, ವಿಂಡೀಸ್ 2ನೇ ಏಕದಿನ ಪಂದ್ಯ 

- Advertisement -

ಪೋರ್ಟ್ ಆಫ್ ಸ್ಪೇನ್:  ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.  ಎರಡನೆ ಪಂದ್ಯವನ್ನು ಗೆದ್ದು ಸರಣಿ ಕೈವಶಪಡಿಸಿಕೊಳ್ಳಲು ಹೋರಾಡಲಿದೆ.

ಧವನ್ ಅವರ ನಾಯಕನ ಅಟ, ಶುಭಮನ್ ಗಿಲ್ ಅವರ ಆಕ್ರಮಣಕಾರಿ ಆರಂಭ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಅದ್ಬುತ ದಾಳಿ ಎಲ್ಲಾ ವಿಭಾಗದಲ್ಲೂ ಮಿಂಚಿತು. 19 ತಿಂಗಳ ನಂತರ ಶುಭಮನ್ ಗಿಲ್ ಏಕದಿನ ಆವೃತ್ತಿಗೆ ಮರಳಿದ್ದಾರೆ. ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಬದಲು ಆಯ್ಕೆಯಾದ ಗಿಲ್ ತಂಡಕ್ಕೆ  ಒಳ್ಳೆಯ ಆರಂಭ ಕೊಟ್ಟು  ದೊಡ್ಡ ಮೊತ್ತ ಪೇರಿಸಲು ನೆರವಾದರು.

53 ಎಸೆತ ಎದುರಿಸಿ 6 ಬೌಂಡರಿ 2 ಸಿಕ್ಸರ್ ಸಿಡಿಸಿ ಒಟ್ಟು  64 ರನ್ ಪೇರಿಸಿದ್ದರು.ಈ ಮೂಲಕ ತಂಡದಲ್ಲಿ ಖಾಯಂ ಆಟಗಾರನಾಗುವತ್ತ ಮುಖ ಮಾಡಿದ್ದಾರೆ.

ನಾಯಕ ಧವನ್ 106 ಎಸೆತದಲ್ಲಿ 119 ರನ್ ಹೊಡೆದರು. ದುರಾದೃಷ್ಟವಶತ್ 18ನೇ ಶತಕ ಸಿಡಿಸುವ ಅವಕಾಶದಿಂದ ವಂಚಿತರಾದರು.

ಇನ್ನು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೇಯಸ್ ಅಯ್ಯರ್ ಅರ್ಧ ಶತಕ ಸಿಡಿಸಿದರು.  ಆದರೆ ಮಧ್ಯಮ ಕ್ರಮಾಂಕದ ಕುಸಿತ ತಂಡವನ್ನು ಇಕ್ಕಟಿಗೆ ಸಿಲುಕಿಸಿತು. ಭಾರತ 308 ರನ್ ಹೊಡೆಯುವಲ್ಲಿ ಶಕ್ತವಾಯಿತು.

ಸಂಜು ಸ್ಯಾಮ್ಸನ್ 18 ಎಸೆತದಲ್ಲಿ 12 ರನ್ ಹೊಡೆದು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದರೆ ಡೆತ್ ಓವರ್‍ನಲ್ಲಿ  ಬೌಂಡರಿ ತಡೆದಿದ್ದರಿಂದ ಕೊನೆಯ ಎಸೆತದಲ್ಲಿ ಭಾರತ ಗೆಲುವು ಕಂಡಿತು.  ಇಂದಿನ ಪಂದ್ಯದಲ್ಲೂ ಸೂರ್ಯ ಕುಮಾರ್, ಸ್ಯಾಮ್ಸನ್, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಮತ್ತೆ ಆಡುವ ಸಾಧ್ಯತೆ ಇದೆ.

ಗಾಯಾಳು ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಆಡುತ್ತಿರುವ ದೀಪಕ್ ಹೂಡಾ ಅಚ್ಚರಿ ರೀತಿಯಲ್ಲಿ  ಅರೆ ಕಾಲಿಕ ಬೌಲರ್ ಆಗಿ ಆಡುತ್ತಿದ್ದಾರೆ. ವೇಗಿ ಸಿರಾಜ್ ನಿಕೊಲೊಸ್ ಪೂರಾನ್ ಅವರನ್ನು ಪೆವಿಲಿಯನ್‍ಗೆ ಅಟ್ಟಿ ನಂತರ ಕೊನೆಯ ಓವರ್‍ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇನ್ನು ಸತತ ಏಕದಿನ ಸರಣಿಗಳನ್ನು ಕೈಚೆಲ್ಲಿರುವ  ವೆಸ್ಟ್ ಇಂಡೀಸ್ ತಂಡ ಇಂದು ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಸತತ ಏಕದಿನ ಸರಣಿಯನ್ನು ಕೈಚೆಲ್ಲಿರುವ ವೆಸ್ಟ ಇಂಡೀಸ್ ಈ ಸರಣಿಯನ್ನು ಉಳಿಸಿಕೊಳ್ಳಬೇಕಿದ್ದಲ್ಲಿ ಇಂದಿನ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. 309 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿ ವಿಂಡೀಸ್ ಸೋತಿರಬಹುದು ಆದರೆ ಕೊನೆಯವರೆಗೂ ಹೋರಾಡಿದ ರೀತಿ ಮೆಚ್ಚುವಂತದ್ದಾಗಿದೆ.

ಸಂಭಾವ್ಯ ತಂಡಗಳು

ಭಾರತ : ಶಿಖರ್ ಧವನ್ (ನಾಯಕ),  ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್, ಸಂಜು ಸ್ಯಾಮ್ಸನ್ (ವಿಕೆಟ್‍ಕೀಪರ್),ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹ್ಮದ್ ಸಿರಾಜ್, ಯಜ್ವಿಂದರ್ ಚಾಹಲ್, ಪ್ರಸಿದ್ಧ ಕೃಷ್ಣ.

ವೆಸ್ಟ್‍ಇಂಡೀಸ್ ತಂಡ; ಶಾಯ್ ಹೋಪ್, ಕೈಲೆ ಮೇಯರ್ಸ್‍ಘಿ, ಶಾಮರ್ಹ ಬ್ರೂಕ್ಸ್‍ಘಿ, ಬ್ರಾಂಡನ್ ಕಿಂಗ್, ನಿಕೊಲೊಸ್ ಪೂರಾನ್, ರೊವಮನ್ ಪೊವೆಲ್,ಅಕೀಲ್ ಹುಸೇನ್, ರೊಮೆರಿಯೊ ಶೆಪಾರ್ಡ್, ಅಲ್ಜರಿ ಜೋಸೆಫ್, ಜಯದೆನ್ ಸೀಲೆಸ್, ಗುಸಕೇಶ್ ಮೋತಿ.

 

- Advertisement -

Latest Posts

Don't Miss