Sunday, September 8, 2024

Latest Posts

ಇಂದು ಭಾರತ –ವಿಂಡೀಸ್ ಮೊದಲ ಟಿ20

- Advertisement -

 

ಪೋರ್ಟ್ ಆಫ್ ಸ್ಪೇನ್:ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನಂತರ ಟೀಮ್ ಇಂಡಿಯಾ ಇಂದಿನಿಂದ ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಇಲ್ಲಿನ ಪೋರ್ಟ್ ಆಫ್ ಸ್ಪೇನ್ ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ20 ಪಂದ್ಯ ನಡೆಯಲಿದೆ.

ರೋಹಿತ್ ನೇತೃತ್ವದ ಭಾರತ ತಂಡ ಬಲಿಷ್ಠವಾಗಿದೆ.ಯಾರಿಗೆ ಪ್ಲೇಯಿಂಗ್ ಇಲೆವೆನ್ ಅವಕಾಶ ಸಿಗುತ್ತೆ ಅನ್ನೋದು ಕುತೂಹಲಕಾರಿಯಾಗಿದೆ. ರೋಹಿತ್ ಪಡೆ ಇತ್ತಿಚೆಗೆ ಇಂಗ್ಲೆಂಡ್ ವಿರುದ್ಧ 2-1 ಸರಣಿಯಿಂದ ಗೆದ್ದುಕೊಂಡಿತು.

ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆಲ್ಲುವ ಅವಕಾಶವಿದ್ದರೂ ವಿಂಡೀಸ್ 0-3 ಅಂತರದಿಂದ ವೈಟ್ ವಾಶ್ ಆಯಿತು.ಬಾಂಗ್ಲಾ ದೇಶ ವಿರುದ್ಧವೂ ಸೋತಿದ್ದ ವಿಂಡೀಸ್ ಇದೀಗ ಮತ್ತೊಂದು ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದೆ.

ಮೊದಲ ಟಿ20 ಕದನಕ್ಕೆ ಮಳೆ ಭೀತಿ ?

ಕೊನೆಯ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಆದರೆ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿವಿಲ್ಲ ಎಂದು  ಇಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

- Advertisement -

Latest Posts

Don't Miss