ರೋಸ್ ಬೌಲ್ :ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಪ್ರದರ್ಶನದ ನೆರೆವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 50 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತು.ಇಂಗ್ಲೆಂಡ್ ತಂಡ 19.3 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್ ಆಯಿತು.
ರೋಸ್ ಬೌಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಭಾರತ ಪರ ನಾಯಕ ರೋಹಿತ್ ಶರ್ಮಾ 24, ಇಶಾನ್ ಕಿಶನ್ 8, ದೀಪಕ್ ಹೂಡಾ 33, ಸೂರ್ಯಕುಮಾರ್ 39, ಹಾರ್ದಿಕ್ ಪಾಂಡ್ಯ 51, ಅಕ್ಷರ್ ಪಟೇಲ್ 17, ದಿನೇಶ್ ಕಾರ್ತಿಕ್ 11, ಹರ್ಷಲ್ ಪಟೇಲ್ 3 ರನ್ ಗಳಿಸಿದರು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ ಹಾಗೂ ಮೊಯಿನ್ ಅಲಿ ತಲಾ 2 ವಿಕೆಟ್ ಪಡೆದರು.
199 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿ ಹೋಯ್ತು. ಇಂಗ್ಲೆಂಡ್ ಪರ ಜಾಸನ್ ರಾಯ್ 4, ಜೋಸ್ ಬಟ್ಲರ್ 0, ಡಾವಿದ್ ಮಲನ್ 21, ಲಿವೀಂಗ್ ಸ್ಟೋನ್ 0, ಹ್ಯಾರಿ ಬ್ರೂಕ್ 28, ಮೊಯಿನ್ ಅಲಿ 36, ಸಾಮ್ ಕರ್ರನ್ 4, ಕ್ರಿಸ್ ಜೋರ್ಡನ್ 26, ಮಿಲ್ಸ್ 7 ರನ್ ಗಳಿಸಿದರು. ಭಾರತ ಪರ ಹಾರ್ದಿಕ್ ಪಾಂಡ್ಯ 33ಕ್ಕೆ 4 ವಿಕೆಟ್ ಪಡೆದು ಮಿಂಚಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.