Monday, April 14, 2025

Latest Posts

ಸರಣಿ ಕೈವಶಪಡಿಸಿಕೊಂಡ ರೋಹಿತ್ ಪಡೆ : ಸರಣಿಯಲ್ಲಿ ಭಾರತಕ್ಕೆ 2-0 ಮುನ್ನಡೆ

- Advertisement -

ಬರ್ಮಿಂಗ್ಹ್ಯಾಮ್: ವೇಗಿ ಭುವನೇಶ್ವರ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ರಡನೆ ಟಿ20 ಪಂದ್ಯದಲ್ಲಿ 49 ರನ್‍ಗಳಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.ಸರಣಿಯಲ್ಲಿ ರೋಹಿತ್ ಪಡೆ 2-0 ಮುನ್ನಡೆ ಪಡೆದಿದೆ.

ಶನಿವಾರ ಎಡ್ಜ್‍ಬಾಸ್ಟನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು.ಭಾರತ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಇಂಗ್ಲೆಂಡ್ ತಂಡ 17 ಓವರ್‍ಗಳಲ್ಲಿ 121 ರನ್‍ಗಳಿಗೆ ಸರ್ವಪತನ ಕಂಡಿದೆ.

ಇಂಗ್ಲೆಂಡ್ ಪರ ಮೊಯಿನ್ ಅಲಿ 35, ಡೇವಿಡ್ ವಿಲ್ಲಿ 33, ನಾಯಕ ಜೋಸ್ ಬಟ್ಲರ್ 0, ಲಿವಿಂಗ್‍ಸ್ಟೋನ್ 15, ಸ್ಯಾಮ್ ಕರ£ನ್ 2ರನ್ ಗಳಿಸಿದರು.

ಭಾರತ ಪರ ಭುವನೇಶ್ವರ್ ಕುಮಾರ್ 15ಕ್ಕೆ 3 ವಿಕೆಟ್ ಪಡೆದರು. ಬುಮ್ರಾ ಮತ್ತು ಚಾಹಲ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಆರಂಭದಲ್ಲಿ ತೋರಿದ ಆಕ್ರಮಣಕಾರಿ ಆಟದಿಂದ ಹಾಗೂ ಅಂತ್ಯದಲ್ಲಿ ರವೀಂದ್ರ ಜಡೇಜಾ ಪ್ರದರ್ಶಿಸಿದ ಹೊಡೆತಗಳ ನೆರವಿನಿಂದ ಭಾರತವು ಎರಡನೆ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟಿಗೆ 170 ರನ್ ಗಳನ್ನು ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಜತೆಗೆ ರಿಷಬ್ ಪಂತ್ ಆರಂಭಿಕರಾಗಿ ಬಂದರು. ಇವರಿಬ್ಬರು ಮೊದಲ ವಿಕೆಟಿಗೆ 5 ಓವರುಗಳಲ್ಲೆ 50 ರನ್ ಸೇರಿಸಿದರು. ರೋಹಿತ್ 20 ಎಸೆತಗಳಿಂದ 31ರನ್ ಮಾಡಿದರೆ, ಪಂತ್ 15 ಎಸೆತಗಳಿಂದ 26 ರನ್ ಗಳಿಸಿದರು.

ಈ ಹಂತದಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ರಿಚರ್ಡ್ ಗ್ಲೀಸನ್ ಮೂರು ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ವಿರಾಟ್ ಕೊಹ್ಲಿ ಮತ್ತೊಮ್ಮೆ ದಯನೀಯ ಪ್ರದರ್ಶನ ನೀಡಿ ಕೇವಲ ಒಂದು ರನ್ ಗಳಿಸಿ ಔಟಾದರು.

ಹಾರ್ದಿಕ್ ಪಾಂಡ್ಯಾ (12) ಮತ್ತು ಸೂರ್ಯಕುಮಾರ್ (15) ತುಸು ಹೊತ್ತು ತಂಡವನ್ನು ಆಧಾರಿಸಿದರಾದರೂ ಅದು ಹೆಚ್ಚು ಕಾಲ ಬಾಳಲಿಲ್ಲ.  ಭಾರತವು ಮಧ್ಯಮ ಸರದಿಯಲ್ಲಿ ಮತ್ತೆ ಕುಸಿತ ಕಂಡಿತು. ಫಿನಿಶರ್ ದಿನೇಶ್ ಕಾರ್ತಿಕ್ (12) ಕೂಡ ಹೆಚ್ಚು ರನ್ ಗಳಿಸದಾದರು

ಆದರೆ ಅಲ್ ರೌಂಡರ್ ರವೀಂದ್ರ ಜಡೇಜಾ ಮತ್ತೆ ಭಾರತದ ನೆರವಿಗೆ ಬಂದರು. 22 ಎಸೆತಗಳಿಂದ ಅಜೇಯ 35 ರನ್ ಗಳಿಸಿದ ಅವರು ಭಾರತವು ಸವಾಲೊಡ್ಡುವ ಮೊತ್ತ ಪೇರಿಸಲು ಸಹಕಾರಿಯಾದರು.

ಇಂಗ್ಲೆಂಡ್ ಪರವಾಗಿ ಗ್ಲೀಸನ್ 15 ರನ್ ಗೆ ಮೂರು ವಿಕೆಟ್ ಪಡೆದರೆ, ಜೋರ್ಡಾನ್ 27 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

 

- Advertisement -

Latest Posts

Don't Miss