- Advertisement -
ಚಾಂಗ್‍ವಾನ್ (ದ.ಕೊರಿಯಾ): ಮೆಹುಲಿ ಘೋಷ್ ಮತ್ತು ಸಾಹು ತುಷಾರ್ ಮಾನೆ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಚಿನ್ನ ಗೆದ್ದಿದ್ದಾರೆ.
10ಮೀ. ಏರ್ ರೈಫಲ್ ಮಿಶ್ರಫೈನಲ್‍ನಲ್ಲಿ ಹಂಗೇರಿಯಾದ ಎಜ್ಟರ್ ಮೆಸಜಾರೊಸ್ ಮತ್ತು ಇಸ್ತವಾನ್ ಪೆನ್ ವಿರುದ್ಧ 17-13ಅಂಕಗಳಿಂದ ಗೆದ್ದರು.
ಮೂರು ಮತ್ತು ನಾಲ್ಕನೆ ಸ್ಥಾನವನ್ನು ಇಸ್ರೆಲ್ ಮತ್ತು ಜೆಕ್ ರಿಪಬ್ಲಿಕ್ ತಂಡಗಳು ಗೆದ್ದುಕೊಂಡವು. ಶೂಟರ್ ತುಷಾರ್‍ಗೆ ಮೊದಲ ಚಿನ್ನವಾಗಿದೆ. ಭಾರತದ ಮತ್ತೊಂದು ಜೋಡಿ ಪಾಲಾಕ್ ಮತ್ತು ಶಿವ ನರ್ವಾಲ್ ಕಂಚಿನ ಪದಕ ಗೆದ್ದರು.
ಮಿಶ್ರ ಏರ ಪಿಸ್ತೊಲ್ ವಿಭಾಗದಲ್ಲಿ ಶೂಟರ್‍ಗಳಾದ ಪಾಲಕ್ ಮತ್ತು ಶಿವ ಕಜಕಿಸ್ಥಾನದ ಲೊಕ್ತಿಒನೊವೊ ಮತ್ತು ವಾಲಿರಿ ರಾಖಿಮಜಾನ್ ವಿರುದ್ಧ 16-0 ಅಂಕಗಳಿಂದ ಗೆದ್ದರು.
ಈ ಫಲಿತಾಂಶದೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೇರಿದೆ. ಟೂರ್ನಿಯಲ್ಲಿ ಒಟ್ಟು 2 ಚಿನ್ನ ಮತ್ತು 1 ಕಂಚು ಗೆದ್ದಿದೆ.
- Advertisement -

