Thursday, October 16, 2025

Latest Posts

ಕುಸ್ತಿಯಲ್ಲಿ ಭಾರತ ಮಸ್ತಿ : ಭಜರಂಗ್, ಸಾಕ್ಷಿ, ಅನ್ಶು,ದೀಪಕ್ಗೆ ಚಿನ್ನ

- Advertisement -

ಬರ್ಮಿಂಗ್‍ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾಕೂಟದ ಶುಕ್ರವಾರ ಭಾರತದ ಪಾಲಿಗೆ ಶುಭ ಶುಕ್ರವಾರವಾಗಿತ್ತು.ಕುಸ್ತಿಯಲ್ಲಿ 3 ಚಿನ್ನವನ್ನು ಗೆದ್ದು ಭಾರತದ ಕುಸ್ತಿಪಟುಗಳು ಸಂಭ್ರಮಿಸಿದರು. ಒಟ್ಟು 6 ಪದಕಗಳೊಂದಿಗೆ ಭಾರತ ಯಶಸ್ವಿ ದಿನವನನ್ನಾಗಿ ಪೂರೈಸಿತು.

ತಾರಾ ಕುಸ್ತಿಪಟು ಭಜರಂಗ್ ಪುಣಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ.

ಶುಕ್ರವಾರ ಪುರುಷರ 65ಕೆಜಿ ವಿಭಾಗದಲ್ಲಿ ಕೆನಡಾದ ಮೆಕ್‍ನೀಲ್ ವಿರುದ್ಧ 9-2 ಅಂಕಗಳಿಂದ ಗೆದ್ದು  ಬೀಗಿದರು. ಇದರೊಂದಿಗೆ ಈ ಕ್ರೀಡಾಕೂಟದಲ್ಲಿ  ಕುಸ್ತಿ ವಿಭಾಗದಿಂದ  ಭಾರತಕ್ಕೆ ಮೊದಲ ಪದಕ  ತಂದುಕೊಟ್ಟರು. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಜರಂಗ್  ಪುಣಿಯಾಗೆ 3ನೇ ಪದಕ ಆಗಿದೆ.

ಇದಕ್ಕೂ ಮುನ್ನ  65ಕೆಜಿ ವಿಭಾಗದ ಫೈನಲ್‍ನಲ್ಲಿ  ಭಜರಂಗ್ ಪುಣಿಯ ಅಮೋಘ ಪ್ರದರ್ಶನ ನೀಡಿ ಇಂಗ್ಲೆಂಡ್‍ನ ಜಾರ್ಜ್ ರಾಮ್ ವಿರುದ್ಧ  10-0 ಅಂಕಗಳಿಂದ ಗೆದ್ದರು.

ಮಹಿಳಾ ವಿಭಾಗದಲ್ಲಿ ಅನ್ಶು ಮಲ್ಲಿಕ್ (57ಕೆಜಿ) ನೈಜಿರಿಯಾದ ಒಡುನಾಯೊ ಫೊಲಸಾಡೆ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

ನೈಜಿರಿಯಾದ ಒಡುನಾಯೊ ಫೊಲಸಾಡೆ ಸತತ ಮೂರನೆ ಬಾರಿಗೆ ಫೈನಲ್‍ನಲ್ಲಿ ಪದಕವನ್ನು ಉಳಿಸಿಕೊಂಡಿದ್ದಾರೆ.

ಸಾಕ್ಷಿ ಮಲ್ಲಿಕ್ ಮಹಿಳಾ ವಿಭಾಗದ 62ಕೆಜಿ ವಿಭಾಗದಲ್ಲಿ ಗೊಂಜಾಲೆಜ್ನ ಅನಾ ಪೌಲ್ ಗೊನೀಜೆ್ ವಿರುದ್ಧ ಗೆದ್ದು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದರು.

ಮತ್ತೋರ್ವ ಕುಸ್ತಿಪಟು ದೀಪಕ್ ಪುಣಿಯ 86 ಕೆಜಿ ವಿಭಾಗದ ಫೈನಲ್ ನಲ್ಲಿ ಪಾಕಿಸ್ಥಾನದ ಎರಡು ಬಾರಿ ಚಾಂಪಿಯನ್ ಮೊಹ್ಮದ್ ಇನಾಮ್ ಅವರನ್ನು ಸೋಲಿಸಿ ಚೊಚ್ಚಲ ಬಾರಿಗೆ ಸ್ವರ್ಣ ಗೆದ್ದ ಸಾಧನೆ ಮಾಡಿದರು.

- Advertisement -

Latest Posts

Don't Miss