International News: ಆಸ್ಟ್ರೇಲಿಯಾಗೆ ಅರ್ಧ ಟನ್‌ಗೂ ಹೆಚ್ಚು ಕೊಕೇನ್ ರಫ್ತು ಮಾಡಿದ್ದಕ್ಕಾಗಿ, ಯುಕೆಯಲ್ಲಿರುವ ಭಾರತೀಯ ದಂಪತಿಗೆ 33 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಆರ್ತಿ ಧೀರ್(59), ಕವಲ್ಜೀತ್ ಸಿನ್ಹಾ(35) ಎಂಬುವವರನ್ನು ಬಂಧಿಸಲಾಗಿದ್ದು, ತಾಯಿ ಮಗನ ವಯಸ್ಸಲ್ಲಿರುವ ಇವರು ದಂಪತಿಗಳೆಂದು ಹೇಳಲಾಗುತ್ತಿದೆ. 2021ರಲ್ಲಿ ಆಸ್ಟ್ರೇಲಿಯಾಗೆ ಕೊಕೇನ್ ಮಾರಾಟ ಮಾಡಲು ಯತ್ನಿಸಿದಾಗ, ಇವರಿಬ್ಬರನ್ನು ಬಂಧಿಸಲಾಗಿತ್ತು. ಇಂದು ತೀರ್ಪು ಬಂದಿದ್ದು, 33 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇವರು ಆಸ್ಟ್ರೇಲಿಯಾದಲ್ಲಿ ಅರ್ಧ ಟನ್ ಕೊಕೇನ್ ಮಾರಿ, 600 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಲ್ಲಿದ್ದರು.
ಇಷ್ಟೇ ಅಲ್ಲದೇ, 2015ರಲ್ಲಿ ಗೋಪಾಲ್ ಸೇಜಾನಿ ೆಂಬ 11 ವರ್ಷದ ಮಗುವನ್ನು ದತ್ತು ಪಡೆದು, ಲಂಡನ್‌ಗೆ ಕರೆದುಕೊಂಡು ಹೋಗಿ, ಒಳ್ಳೆಯ ಜೀವನ ಕೊಡುವುದಾಗಿ ಹೇಳಿದ್ದರು. ಆದರೆ 2017ರಲ್ಲಿ ಇಬ್ಬರೂ ಸೇರಿ ಗೋಪಾಲ್‌ನನ್ನು ಇರಿದು ಕೊಂದು, ನಡು ರಸ್ತೆಯಲ್ಲಿ ಬಿಟ್ಟು ಹೋದ ಆರೋಪವೂ ಇವರ ಮೇಲಿದೆ.
ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ