www.karnatakatv.net :ಭಾರತ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ವಿಚಾರದ ಕುರಿತಾಗಿ ಟ್ವೀಟ್ ಮೂಕಲ ತಿಳಿಸಿದ್ದಾರೆ. ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ನಾಯಕ ಸ್ಥಾನದಿಂದ ಕೆಳಗಿಳಿಯುವುದರ ಬಗ್ಗೆ ಅಧಿಕೃತವಾಗಿ ಘೋಚಣೆಯನ್ನು ಮಾಡಿದ್ದಾರೆ.
ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುದಾಗಿ ಹೇಳಿದ ಬೆನ್ನಲೇ ಮುಂದಿನ ನಾಯಕನ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಸಾಲಿಗೆ ಈಗ ಕ್ರಿಕೆಟ್ ದಂತಕಥೆ ಗವಾಸ್ಕರ್ ಸೇರ್ಪಡೆಯಾಗಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ತಂಡದ ಸಾರಥ್ಯವನ್ನು ವಹಿಸಬೇಕು ಹಾಗೆ ರೋಹಿತ್ ಗೆ ಕೆಎಲ್ ರಾಹುಲ್ ಉಪನಾಯಕನಾಗಿ ಅವರಿಗೆ ಸಾಥ್ ನೀಡಬೇಕು ಎಂದು ಹೇಳಿದರು.
ರಾಹುಲ್ ಇಲ್ಲಿಯವರೆಗೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ, ಇಂಗ್ಲೆಂಡ್ನಲ್ಲೂ ಅವರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಐಪಿಎಲ್ ಮತ್ತು 50 ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಅವರ ಪ್ರದರ್ಶನ ಚೆನ್ನಾಗಿದೆ. ಆದ್ದರಿಂದ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಬಹುದು’ ಎಂದು ಸ್ಫೋರ್ಟ್ಸ್ ಥಕ್ ಕಾರ್ಯಕ್ರಮದಲ್ಲಿ ಗವಾಸ್ಕರ್ ಹೇಳಿದ್ದಾರೆ.