International News: ಅಮೆರಿಕದಲ್ಲಿರುವ ಭಾರತೀಯರಿಗೆ ಸದ್ಯ ಜೀವ ಭಯ ಆರಂಭವಾಗಿದೆ. ಅಲ್ಲದೇ, ಇಂಥ ಸುದ್ದಿ ಕೇಳುತ್ತಿರುವ ಭಾರತೀಯರಿಗೂ, ಅಮೆರಿಕದಲ್ಲಿರುವ ಭಾರತೀಯರ ಬಗ್ಗೆ ಆತಂಕವಾಗಿದೆ. ವಿದ್ಯಾಭ್ಯಾಸ ಮಾಡಲು ಹೋದವರು, ಕೆಲಸ ಮಾಡುತ್ತಿರುವವರೆಲ್ಲ ಅಮೆರಿಕದಲ್ಲಿ ಭಯದ ವಾತಾವರಣದಲ್ಲೇ ಬದುಕುತ್ತಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಅಂದ್ರೆ, ಅಮೆರಿಕದಲ್ಲಿ ವಾರಕ್ಕೊಂದು ಭಾರತೀಯರ ಕೊಲೆ ನಡೆಯುತ್ತಿದೆ.
ವಿದ್ಯಾರ್ಥಿಗಳು, ಉದ್ಯಮಿಗಳು ಕೊಲೆಯಾದ ಸುದ್ದಿ ನಾವು ಪ್ರತೀ ವಾರ ಕೇಳುತ್ತಿದ್ದೇವೆ. ಅದೇ ರೀತಿ ಇಂದು ಕೇರಳದ ಪತಿ-ಪತ್ನಿ ಮತ್ತು ಅವರ ಪುಟ್ಟ ಅವಳಿ ಮಕ್ಕಳು, ಅಮೆರಿಕದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರನ್ನೆಲ್ಲ ಗುಂಡು ಹಾರಿಸಿ ಕೊಂದಿದ್ದಾರೆಂಬ ಸುದ್ದಿ ಇದೆ. ಆನಂದ್ ಮತ್ತು ಅವರ ಪತ್ನಿ ಪ್ರಿಯಾಂಕಾ ಮತ್ತು ಅವರ ನಾಲ್ಕು ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಇವರ ಸಂಬಂಧಿಕರು ಎಷ್ಟೇ ಕಾಲ್ ಮಾಡಿದರೂ ಕಾಲ್ ರಿಸೀವ್ ಮಾಡದ ಕಾರಣ, ಅಲ್ಲೇ ಇದ್ದ ಇವರ ಸಂಬಂಧಿಕರು ಮನೆಗೆ ಹೋಗಿದ್ದಾರೆ. ಈ ವೇಳೆ ಈ ದಂಪತಿಯ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ದಂಪತಿ 9 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಇನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಇವರ ಶವ ಬಾತ್‌ರೂಂನಲ್ಲಿ ಇರುವುದು ಕಂಡುಬಂದಿತ್ತು.
ಪಿಸ್ತೂಲು ಮತ್ತು ಸಜೀವ ಗುಂಡುಗಳು ಕೂಡ ಪತ್ತೆಯಾಗಿದೆ. ಮನೆಗೆ ಯಾರಾದರೂ ಬಂದ ಲಕ್ಷಣಗಳು ಕಂಡು ಬಾರದಿದ್ದರೂ, ಬಾತ್‌ರೂಂ ಕಿಟಕಿ ಓಪನ್ ಇತ್ತು. ಅಲ್ಲಿಂದ ಯಾರಾದರೂ ಬಂದಿದ್ದಾರಾ ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಥವಾ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಲೂ ಅಂದಾಜಿಸಲಾಗಿದೆ.
ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ