International News: ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಲವು ದಿನಗಳಿಂದ ವಾರಕ್ಕೆ ಒಂದಾದರೂ ಇಂಥ ಪ್ರಕರಣಗಳು ಕೇಳಿಬರುತ್ತಿದೆ. ಯುಎಸ್‌ನಲ್ಲಿ ಹಲವು ಭಾರತೀಯರು ವಾರಕ್ಕೊಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. 2014ರಲ್ಲಿ ಯುಎಸ್‌ನಲ್ಲಿ ಕೊಲೆಯಾದ 9ನೇ ಕೇಸ್ ಇದಾಗಿದೆ. ಈ ಸಂಗತಿ ನಿಜಕ್ಕೂ ಭಯಬೀಳಿಸುವಂತಿದೆ.
ಪರುಚುರಿ ಅಭಿಜೀತ್ ಎಂಬ ಆಂಧ್ರಪ್ರದೇಶದ ವಿದ್ಯಾರ್ಥಿ, ಯುಎಸ್‌ನಲ್ಲಿ ಸಾವನ್ನಪ್ಪಿದ್ದು, ಕಾಡಿನಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದೆ. ಅಭಿಜೀತ್ 20 ವರ್ಷದ ವಿದ್ಯಾರ್ಥಿಯಾಗಿದ್ದು, ಬಾಸ್ಟನ್ ಯುನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ. ಓರ್ವ ವಿದ್ಯಾರ್ಥಿಯೊಂದಿಗೆ, ಒಂದು ಅಪಾರ್ಟ್‌ನಲ್ಲಿ ಶೇರಿಂಗ್ ಮಾಡಿಕೊಂಡು ವಾಸಿಸುತ್ತಿದ್ದ.
ಅಭಿಜೀತ್ ಬುದ್ಧಿವಂತ ವಿದ್ಯಾರ್ಥಿಯಾಗಿದ್ದು, ಇವರ ತಂದೆ ಮುಂದಿನ ಓದಿಗಾಗಿ ವಿದೇಶಕ್ಕೆ ಕಳಿಸಿದ್ದರು. ಆದರೆ ಅಭಿಜೀತ್ ತಾಯಿಗೆ ಮಗ ವಿದೇಶದಲ್ಲಿ ವ್ಯಾಸಂಗ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ಆಕೆ ಮಗನಿಗೆ ಭಾರತದಲ್ಲೇ ಒಳ್ಳೆಯ ಶಾಲೆಗೆ ಸೇರುವಂತೆ ಒತ್ತಾಯಿಸಿದ್ದಳು. ಆದರೆ ಅಮ್ಮನ ಮಾತು ಕೇಳದ ಮಗ, ಯುಎಸ್‌ನಲ್ಲಿ ಇಂಜಿನಿಯರಿಂಗ್ ಮಾಡುವ ನಿರ್ಧಾರ ಮಾಡಿದ್ದ. ಇದೀಗ, ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಇನ್ನು ಈ ಘಟನೆ ಬಳಿಕ, ಅಭಿಜೀತ್‌ನ ಕೆಲ ಸ್ನೇಹಿತರು ಕಾಣೆಯಾಗಿದ್ದಾರೆ. ಈ ಬಗ್ಗೆ ಯುಎಸ್ ಪೊಲೀಸರು ತನಿಖೆ ನಡೆಸಿದ್ದಾರೆ. ಅಭಿಜೀತ್ ಶವ ಆಂಧ್ರದಲ್ಲಿರುವ ಮನೆಗೆ ಬಂದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..