Sunday, September 8, 2024

Latest Posts

ಮಹಿಳಾ ಅಥ್ಲೀಟ್ ಉದ್ದಿಪನಾ ಪರೀಕ್ಷೆಯಲ್ಲಿ ವಿಫಲ

- Advertisement -

ಹೊಸದಿಲ್ಲಿ: ಕಾಮನ್‍ವೆಲ್ತ್ ಗೇಮ್ಸ್‍ಗೆ ಆಯ್ಕೆಯಾಗಿದ್ದ  ಭಾರತೀಯ ಮಹಿಳಾ ರಿಲೇ ತಂಡದ ಸದಸ್ಯೆಯೊಬ್ಬಳು ಉದ್ದೀಪನಾ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಇದರಿಂದಾಗಿ ಆಕೆಯನ್ನು ತಂಡದಿಂದ ಕೈಬಿಡಲಾಗಿದೆಯೆಂದೂ ಹೇಳಲಾಗಿದೆ.

400 ಮೀ. 100 ಮೀಟರ್ ರಿಲೇ  ತಂಡದ  ಸದಸ್ಯೆಯೊಬ್ಬಳು ದ್ರವ್ಯ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆನ್ನಲಾಗಿದ್ದು,  ಈ ಓಟಗಾರ್ತಿ ಯಾರೆಂಬುದನ್ನು ಮಾತ್ರ ಬಹಿರಂಗಪಡಿಸಲಾಗಿಲ್ಲ.

ಇದರಿಂದಾಗಿ ರಿಲೇ ತಂಡವು ಇಕ್ಕಟ್ಟಿಗೆ ಸಿಲುಕಿದೆ. ಇನ್ನೀಗ ತಂಡದಲ್ಲಿ ನಾಲ್ವರು ಮಾತ್ರ ಉಳಿದಿದ್ದು ಒಂದು ವೇಳೆ ಯಾರಾದರೂ ಗಾಯಗೊಂಡರೆ ರಿಲೇಯಲ್ಲಿ ಭಾಗವಹಿಸಲು ಸಾಧ್ಯವಾಗದು. ಬೇರೊಬ್ಬ ಓಟಗಾರ್ತಿಯನ್ನು ಸೇರಿಸಿಕೊಳ್ಳಬಹುದಾದರೂ ಅದು ತಂಡದ ನಿರ್ವಹಣೆ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಓಟಗಾರ್ತಿ ಧನಲಕ್ಷ್ಮೀ ಶೇಖರ್ ಮತ್ತು ಟ್ರಿಪಲ್ ಜಂಪರ್ ಐಶ್ವರ್ಯ ಬಾಬು ದ್ರವ್ಯ ಪರೀಕ್ಷೆಯಲ್ಲಿ ವಿಫಲರಾಗುವ ಮೂಲಕ ಅವರನ್ನು ಕೈಬಿಡಲಾಗಿತ್ತು.

ಇಬ್ಬರು ಪ್ಯಾರಾಅತ್ಲೀಟ್‍ಗಳಲ್ಲಿ ಕೂಡಾ ಉದ್ದೀಪನಾ ದ್ರವ್ಯ ಸೇವನೆ ಪತ್ತೆಯಾದುದರಿಂದ ಅವರನ್ನು ಕೂಡಾ ಭಾರತೀಯ ತಂಡದಿಂದ ಕೈಬಿಡಲಾಗಿದೆ. ಶಾಟ್ ಪುಟ್ ಎಸೆತಗಾರ ಅನೀಶ್ ಕುಮಾರ್ ಮತ್ತು ಪವರ್‍ಲಿಫ್ಟಟರ್ ಗೀತಾ ಅವರು ಉದ್ದೀಪನಾ ದ್ರವ್ಯ ಸೇವಿಸಿರುವುದು ಪತ್ತೆಯಾಗಿದೆ. ಇದೀಗ ಅನೀಶ್ ಮತ್ತು ಗೀತಾ ಅವರಿಗೆ ನೋಟೀಸು ನೀಡಿ ಅವರನ್ನು ತಂಡದಿಂದ  ಕೈಬಿಡಲಾಗಿದೆ.

- Advertisement -

Latest Posts

Don't Miss