ಬರ್ಮಿಂಗ್‍ಹ್ಯಾಮ್: ಕಳಪೆ ಪ್ರರ್ದರ್ಶನ ನೀಡಿದ ಭಾರತ ಪುರುಷರ ಹಾಕಿ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದ ಫೈನಲ್‍ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು 0-7 ಗೋಲುಗಳ ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.
ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವೇಗ, ಆಕ್ರಮಣಕಾರಿ ದಾಳಿಯ ಸಹಾಯದಿಂದ ಮತ್ತೊಮ್ಮೆ ಕಾಮನ್‍ವೆಲ್ತ್‍ನಲ್ಲಿ ಪ್ರಭುತ್ವ ಸಾಧಿಸಿತು.ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೆ ಬಾರಿ ಸೋತಿದೆ.
2010 ಹಾಗೂ 2014ರಲ್ಲಿ ಸೋಲು ಕಂಡಿತ್ತು. ಆಸಿಸ್ ಪರ ನಾಥನ್ ಎರಮ್ಸ್ , ಟಾಮ್ ವಿಖಾಮ್, ಬ್ಲೇಕ್‍ಗೋವರ್ಸ್, ಜಾಕೊಬ್ ಆ್ಯಂಡರ್ಸನ್ ಹಾಗೂ ಫ್ಲಿನ್ ಒಗಿಲಿವ್ ಗೋಲುಗಳನ್ನು ಹೊಡೆದರು.
ಭಾರತ ರಕ್ಷಣಾ ವಿಭಾಗ ಬಲಿಷ್ಠವಾಗಿರಲಿಲ್ಲ. ಇದರ ಲಾಭ ಪಡೆದ ಆಸ್ಟ್ರೇಲಿಯಾ ಗೋಲುಗಳ ಮಳೆ ಸುರಿಸಿತು. ಇಡೀ ಪಂದ್ಯದಲ್ಲಿ ಒಂದೇ ಒಂದು ಪೆನಾಲ್ಟಿ ಪಡೆಯದೇ ನಿರಾಸೆ ಅನುಭವಿಸಿತು. ಚೆಂಡನ್ನು ಪಾಸ್ ಮಾಡುವಲ್ಲಿ ಕೂಡ ಆಟಗಾರರು ಎಡವಿದರು.ಗೋಲ್‍ಕೀಪರ್ ಶೃಜೇಶ್ ಅತ್ಯುತ್ತಮ ರಕ್ಷಣೆ ಮಾಡಿದರು.