ದೇಶದಲ್ಲಿ ಕೊರೊನಾ (Corona) ಬಂದಾಗಿನಿಂದ ಮದುವೆಗಳಿಗೆ ಸರ್ಕಾರಗಳ ನಿರ್ಭಂದ ಮತ್ತು ಷರತ್ತುಗಳ ನಡುವೆ ಮದುವೆಗಳು ನಿರಂತರಾವಾಗಿ ನಡೆಯುತ್ತಲೇ ಇವೆ. ಆ ಮದುವೆಗಳಿಗೆ ಕೇಲವರೂ ಹೋಗುವ ಆಸೆ ಆದರೆ ಕೊರೊನಾ ಹರಡುವ ಭೀತಿಯಿಂದ ಮನೆಯಲ್ಲಿಯೇ ಉಳಿದು ಬಿಡುತ್ತಾರೆ. ಇನ್ನೂ ಕೇಲವರು ಆನ್ ಲೈನ್ ಮೂಲಕ ಮದುವೆಯ ಸಭಾರಂಭಗಳಿಗೆ ಹಾಜರಾಗಿರುತ್ತಾರೆ.
ಆದರೆ ಈ ಎಲ್ಲಾದರ ನಡುವೆ ತ್ರೀಡಿ (3D) ಮೂಲಕ ಮದುವೆಯ ಸಮಾಂರಭದ ಆರತಕ್ಷತೆ ಕಾರ್ಯಕ್ರಮವನ್ನು ವಿಶ್ವದಾಂದ್ಯ ಇರುವ ಸ್ನೇಹಿತರು ಮತ್ತು ಕುಟುಂಬಸ್ಥರು ವೀಕ್ಷಿಸಬುಹುದಾಗಿದೆ. ಇದು ವಿಡಿಯೋ ಕಾನ್ಪರೆನ್ಸ್ ಗಿಂತ ತುಂಬಾ ಭಿನ್ನವಾಗಿದ್ದು, ಆನ್‌ಲೈನ್‌ನಲ್ಲೇ ಬೇರೊಬ್ಬರೊಡನೆ ಸಂಭಾಷಣೆಯನ್ನು ನಡೆಸಬಹುದಾಗಿದೆ.
ಇದನ್ನೇ ಮೆಟಾವರ್ಸ್ ಟೆಕ್ನಾಲಜಿ (Metaverse Technology) ಎಂದು ಕರೆಯಲಾಗುತ್ತದೆ. ಹ್ಯಾರಿ ಪಾಟರ್ ಕಥೆಗಳಲ್ಲಿರುವಂತೆ ದೊಡ್ಡ ಕಟ್ಟಡಗಳನ್ನು ಡಿಜಿಟಲ್ ಮೂಲಕ ಸೃಷ್ಟಿಸಿ, ಆ ಸ್ಥಳದಲ್ಲಿ ಆರತಕ್ಷತೆ ನಡೆಸಲಾಗುತ್ತದೆ. ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್‌ಕ್ರಾಫ್ಟ್ ಅಂಡ್ ವಿಝಾರ್ಡ್ರಿ (Hogwarts School of Witchcraft and Wizardry) ಮೆಟಾವರ್ಸ್ ಆರತಕ್ಷತೆಗೆ ಎಲ್ಲಾ ಸಿದ್ಧತೆ ನಡೆಸುತ್ತಿವೆ.
ಭಾವಿ ವರ ದಿನೇಶ್ ಈ ಕುರಿತು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಭಾರತದ ಮೊದಲ ಮೆಟಾವರ್ಸ್ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದೇನೆ. TardiVerse Metaverse ಸ್ಟಾರ್ಟ್‌ಅಪ್‌ನ ಸಹಯೋಗದೊಂದಿಗೆ ಈ ವಿಭಿನ್ನ ವಿವಾಹ ನಡೆಯಲಿದೆ. ಪ್ರಪಂಚದಲ್ಲೇ ಮೊದಲ ಮೆಟಾವರ್ಸ್ ಟೆಕ್ನಾಲಜಿಯ ಸಹಾಯದೊಂದಿಗೆ ವಿವಾಹವಾಗುತ್ತಿರುವುದಕ್ಕೆ ನನಗೆ ಹೆಮ್ಮೆಯೆಸುತ್ತಿದೆ ಎಂದಿದ್ದಾರೆ.