- Advertisement -
ಜಕಾರ್ತಾ: ಥಾಮಸ್ ಕಪ್ ವಿಜೇತ ಆಟಗಾರ ಎಚ್.ಎಸ್. ಪ್ರಣಾಯ್ ಪ್ರತಿಷ್ಠಿತ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್‍ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ ವಿಶ್ವದ ನಂ.23ನೇ ರಾಂಕ್ ಆಟಗಾರ ಪ್ರಣಾಯ್, ವಿಶ್ವದ 13ನೇ ರ್ಯಾಂಕ್ ಆಟಗಾರ ಡೆನ್‍ಮಾರ್ಕ್‍ನ ರಾಸಮಸ್ ಗೆಮೆಕೆ ವಿರುದ್ಧ ಸುಮಾರು ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 21-14, 21-12 ಅಂಕಗಳಿಂದ ಗೆದ್ದುಕೊಂಡರು. ಪ್ರಣಾಯ್ 7 ನೇರ ಅಂಕಗಳಿಂದ ಗೆದ್ದುಕೊಂಡರು.
ಟೂರ್ನಿಯಲ್ಲಿ ಅಜೇಯ ಓಟ ಮುಂದುವರೆಸಿರುವ ಕೇರಳ ಆಟಗಾರ ಇಂದು ನಡೆಯುವ ಸೆಮಿಫೈನಲ್‍ನಲ್ಲಿ ಚೀನಾದ ಜಾವೊ ಜನ್ ಪೆಂಗ್ ವಿರುದ್ಧ ಸೆಣಸಲಿದ್ದಾರೆ.
- Advertisement -