ಇಂಡೋನೇಷ್ಯಾ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗ ಸಭೆಯ 2ನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ಸಿದ್ದರಾಗಿದ್ದಾರೆ. ಶೃಂಗಸಭೆಯ 1ನೇ ದಿನದಂದು ಅವರು ಆಹಾರ ಪೂರೈಕೆ ಸರಪಳಿ, ಇಂಧನ ಭದ್ರತೆ ಮತ್ತು ಡಿಜಿಟಲ್ ರೂಪಾಂತರದ ಬಗ್ಗೆ, ಭಾರತದ ನಿಲುವನ್ನು ಎತ್ತಿ ತೋರಿಸಿದರು.
2024ರ ಅಮೆರಿಕಾ ಅದ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್ ಘೋಷಣೆ
ಪ್ರಧಾನಿ ಮೋದಿ ಅವರು ಬಾಲಿಯಲ್ಲಿ ಭಾರತೀಯ ವಲಸೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, 2014 ರ ಮೊದಲು ಮತ್ತು 2014ರ ನಂತರದ ಭಾರತದಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು ಎಂದು ಹೇಳಿದರು. ನಂತರ 1ನೇ ದಿನದಂದು ಪ್ರಧಾನಿ ಮೋದಿ ಅವರು ಇಂಡೋನೇಷ್ಯಾ ಅಧ್ಯಕ್ಷರು ಆಯೋಜಿಸಿದ್ದ ಅಧಿಕೃತ ಭೋಜನಕೂಟದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿ ಚೀನಾ ಅಧ್ಯಕ್ಷರನ್ನು ಸ್ವಾಗತಿಸಿ ಅರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿದರು.
2024ರ ಅಮೆರಿಕಾ ಅದ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್ ಘೋಷಣೆ
ನಾಗಮಂಗಲದಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ : ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ