Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಮನೆಗೆ ಇಂದ್ರಜೀತ್ ಲಂಕೇಶ್ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಮಗನ ಗೌರಿ ಸಿನಿಮಾ ಪ್ರಮೋಷನ್‌ಗಾಗಿ ಇಂದ್ರಜೀತ್ ಲಂಕೇಶ್ ಹುಬ್ಬಳ್ಳಿಗೆ ಆಗಮಿಸಿದ್ದು, ಫಯಾಜ್‌ನಲ್ಲಿ ತಿಂಗಳ ಹಿಂದೆ ಹತ್ಯೆಯಾಗಿದ್ದ ನೇಹಾ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ನೇಹಾ ತಂದೆ ತಾಯಿ, ಚಿಕ್ಕಪ್ಪನಿಗೆ ಸಾಂತ್ವಾನ ಹೇಳಿದರು.
ಬಳಿಕ ಮಾತನಾಡಿದ ಇಂದ್ರಜೀತ್, ನೇಹಾ ಹಿರೇಮಠ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ನೇಹ ಕಳೆದುಕೊಂಡು ಕುಟುಂಬ ಈಗಲೂ ಕಣ್ಣೀರು ಹಾಕುತ್ತಿದೆ. ಪುತ್ರಿ ಕಳೆದುಕೊಂಡ ನೋವು ನಿರಂತರವಾಗಿ ಕುಟುಂಬಕ್ಕೆ ಕಾಡುತ್ತದೆ.
ನಮ್ಮ ಅಕ್ಕನನ್ನು ಕಳೆದುಕೊಂಡು ನೋವು ನಮಗೆ ನಿರಂತರವಾಗಿ ಕಾಡುತ್ತಿದೆ. ಗೌರಿ ನನಗೆ ಅಕ್ಲಾ ಅಷ್ಟೇ ಆಗಿರಲಿಲ್ಲ ತಾಯಿ ಜಾಗಾ ತುಂಬಿದರು. ಈಗಲೂ ಅವಳು ನಮಗೆ ನೆನಪು ಆಗುತ್ತಾಳೆ. ಹಾಗೇ ನೇಹಾ ಕೂಡಾ ಈ ಕುಟುಂಬಕ್ಕೆ ನೆನಾಪುಗುತ್ತಲೇ ಇರುತ್ತಾಳೆ. ಎದೇ ಎತ್ತರಕ್ಕೆ ಬೆಳೆದ ಮಗಳು ನೇಹಾಗೆ ಸರಸ್ವತಿ ಒಲೆಸಿಕೊಂಡವಳು. ಓದಿನಲ್ಲಿ ಚುರುಕಾಗಿದ್ದವಳನ್ನು ಈ ರೀತಿ ಹತ್ಯೆ ಮಾಡಿರುವುದು ತುಂಬಾ ಅನ್ಯಾಯ. ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಇಲ್ಲದಂತಾಗಿದೆ. ನಾನು ಯಾವುದೇ ಸರ್ಕಾರ ವಿರುದ್ಧ ಮಾತಾಡಬೇಕು ಅಂತಾ ಮಾತಾಡುತ್ತಿಲ್ಲ. ಇರುವ ವಾಸ್ತವತೆಯ ಬಗ್ಗೆ ಹೇಳುತ್ತಿದ್ದೇನೆ. ರಾತ್ರಿ 12 ಗಂಟೆಗೆ ಒಬ್ಬ ಮಹಿಳೆ ನಿರ್ಭಯವಾಗಿ ಯಾವಾಗ ಓಡುಡು ಕಾಲ ಬರುತ್ತೆ. ಮಹಿಳಾ ಸುರಕ್ಷಿತೆಯ ಕುರಿತು ಸರ್ಕಾರ ಗಮನ ಹರಿಸಬೇಕು. ನೇಹಾ ಹತ್ಯೆಕೋರನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಇಂದ್ರಜೀತ್ ಆಗ್ರಹಿಸಿದ್ದಾರೆ.