Friday, November 22, 2024

Latest Posts

ಬಿಗ್‌ಬಿ ಅಮಿತಾಬಚ್ಚನ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ..?

- Advertisement -

ಡಾನ್‌ ಕೋ ಪಕಡ್ನಾ ಮುಶ್ಕಿಲ್‌ ಹೀ ನಹೀ ನಾ ಮುಮ್ಕಿನ್‌ ಹೈ ಅನ್ನೋ ಡೈಲಾಗ್ ಕೇಳಿದ ತಕ್ಷಣ ಸಿನಿಪ್ರೇಮಿಗಳಿಗೆ ನೆನಪಿಗೆ ಬರೋದು ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ, ಬಿಗ್‌ಬಿ ಅಂತಾ ಬಿರುದು ಗಳಿಸಿರೋ ಅಮಿತಾಬ್ ಬಚ್ಚನ್.

ಸಲ್ಮಾನ್, ಶಾರೂಖ್, ಆಮೀರ್‌ರಂಥಹ ಸಾವಿರಾರು ನಟರು ಬಂದು ಹೋದ್ರೂ, ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯೋ ಹೆಸರು ಅಮಿತಾಬಚ್ಚನ್. ಈ ಬಾಲಿವುಡ್ ಎವರ್‌ಗ್ರೀನ್ ಹೀರೋಗೆ ಬರೀ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಿಲ್ಲೂ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೇ, ಜಾಹೀರಾತು, ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಶೋಗಳನ್ನ ನಡೆಸಿಕೊಟ್ಟಿರುವ ಬಿಗ್‌ಬಿ ಆಸ್ತಿ ಎಷ್ಟು ಅಂತಾ ನಿಮಗೆ ಗೊತ್ತಾ..?

ಒಂದು ಸಿನಿಮಾದಲ್ಲಿ ನಟಿಸೋಕ್ಕೆ 5ರಿಂದ 15 ಕೋಟಿ ಸಂಭಾವನೆ ಪಡೆಯುವ ಬಿಗ್‌ಬಿ, ರಿಯಾಲಿಟಿ ಶೋ ಹೋಸ್ಟ್ ಮಾಡೋಕ್ಕೆ 25ಕೋಟಿಗೂ ಹೆಚ್ಚು ಸಂಭಾವನೆ ಪಡೀತಾರೆ. ಕೇಂದ್ರ ಸರ್ಕಾರದ ಜಾಹೀರಾತು ಇದ್ರೆ, ಅದರಲ್ಲಿ ಅಮಿತಾ ಬಚ್ಚನ್‌ರಿಗೇ ಮೊದಲ ಆದ್ಯತೆ.

ಸದ್ಯ ಅಮಿತಾಬ್ ಬಚ್ಚನ್, 3000 ಕೋಟಿಗಳ ಒಡೆಯ. ಇವರು ತಿಂಗಳಿಗೆ 35 ಕೋಟಿ ರೂಪಾಯಿ ಗಳಿಸುತ್ತಾರೆ. ವರ್ಷಕ್ಕೆ 350 ಕೋಟಿ ಗಳಿಸುತ್ತಾರೆ. 18 ಐಷಾರಾಮಿ ಕಾರುಗಳ ಒಡೆಯನಾಗಿರುವ ಅಮಿತಾಬ್, 4ರಿಂದ 5 ಬಂಗಲೆಗಳ ಓನರ್ ಆಗಿದ್ದಾರೆ.

- Advertisement -

Latest Posts

Don't Miss