Thursday, December 26, 2024

Latest Posts

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಪುರಾಣ ಕಥೆ..

- Advertisement -

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ಇಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಬಾಂಧವರು ಹಿಂದೂಗಳ ಜೊತೆ ಸೇರಿ ದೀಪಾವಳಿ ಆಚರಿಸುತ್ತಾರೆ. ಹಿಂದೂಗಳು ಸಹ ಮುಸ್ಲಿಂ ಬಾಂಧವರ ರಂಜಾನ್, ಮೊಹರಂ ಹಬ್ಬಗಳಲ್ಲಿ ಭಾಗವಹಿಸುತ್ತಾರೆ. ಎಲ್ಲರೂ ಸೇರಿ ಕ್ರಿಸ್‌ಮಸ್ ಆಚರಿಸುತ್ತಾರೆ. ಇದೇ ರೀತಿ ಕೆಲ ಮಂದಿರಗಳ ಸ್ವಚ್ಛತೆಯನ್ನ ಮುಸ್ಲಿಂ ಬಾಂಧವರು ಮಾಡಿದ್ದಾರೆ. ಮಸೀದಿ, ಚರ್ಚ್‌ಗಳಲ್ಲಿ ಹಿಂದೂಗಳೂ ಕೂಡ ಕೆಲಸಕ್ಕೆ ಕೈಜೋಡಿಸಿದ್ದಾರೆ. ಹೀಗೆ ಬಾಂಧವ್ಯ ಬೆಸೆಯುವ ದೇಶವಾದ ಭಾರತದಲ್ಲಿ ಕೆಲ ಮಂದಿರಗಳನ್ನ ಮುಸ್ಲಿಂಮರು ಸ್ಥಾಪಿಸಿದ್ದಾರೆ. ಅಂಥ ಮಂದಿರಗಳಲ್ಲಿ ಬಪ್ಪನಾಡು ದುರ್ಗಾಪರಮೇಶ್ವರಿ ಮಂದಿರ ಕೂಡ ಒಂದು. ಹಾಗಾದ್ರೆ ಬನ್ನಿ ಈ ದೇವಸ್ಥಾನದ ವಿಶೇಷತೆ ಏನು ಅನ್ನೋದನ್ನ ತಿಳಿಯೋಣ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಕರ್ನಾಟಕದಲ್ಲಿ ಹತ್ತು ಹಲವು ದೇವಸ್ಥಾನಗಳಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದೇವಿ ದೇವಸ್ಥಾನದಷ್ಟು ದೇವಾಲಯವು ಬೇರೆಲ್ಲಿಯೂ ಇಲ್ಲ. ಅಂಥ ದೇವಸ್ಥಾನಗಳಲ್ಲಿ ಒಂದು ವಿಶಿಷ್ಠವಾದ ದೇವಸ್ಥಾನವೇ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ. ಮಂಗಳೂರಿನ ಮುಲ್ಕಿಯ ಶಾಂಭವಿ ನದಿ ದಡದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.

ಈ ಸ್ಥಳದಲ್ಲಿ ದುರ್ಗಾಪರಮೇಶ್ವರಿ ನೆಲೆನಿಲ್ಲಲು ಕಾರಣವೇನೆಂಬ ಬಗ್ಗೆ ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಪುರಾಣ ಕಥೆಗಳಲ್ಲಿ ನಾವು ಕೇಳುವಂತೆ ರಾಕ್ಷಸರು, ಋಷಿಮುನಿಗಳ ಮೇಲೆ ಆಕ್ರಮಣ ಮಾಡಿ, ಕೊನೆಗೆ ಶಕ್ತಿ ದೇವತೆಯ ಕೈಯಿಂದ ಕೊನೆಗೊಳ್ಳುವರು. ಅಂತೆಯೇ ಇಲ್ಲಿಯೂ ಕೂಡ ಅಟ್ಟಹಾಸ ಮೆರೆಯುತ್ತಿದ್ದ ದಾರಿಗಾಸುರ ಎಂಬ ರಾಕ್ಷಸನು ದೇವತೆಗಳಿಗೆ ತಲೆನೋವಾಗಿ ಪರಿಣಮಿಸಿದನು. ತಪಸ್ಸಿನಿಂದ ಪಡೆದ ವರಗಳ ಸಹಾಯದಿಂದ ವಿಷ್ಣುವನ್ನ ಕೂಡ ಮಣಿಸಿ, ವಿಷ್ಣುವಿನ ಆಯುಧವನ್ನ ಕೊಂಡೊಯ್ಯುತ್ತಾನೆ.

ಇದರಿಂದ ಅವಮಾನಿತನಾದ ವಿಷ್ಣು ಕಣ್ಣೀರು ಹಾಕುತ್ತಾನೆ. ಆತನ ಕಣ್ಣೀರ ಹನಿಯಿಂದ ಸಪ್ತಶಕ್ತಿಗಳು ಉದ್ಭವವಾಗುತ್ತದೆ. ಆ ಸಪ್ತಶಕ್ತಿಗಳಿಗೆ ಭಗವತಿ, ಪರಮೇಶ್ವರಿ, ಭ್ರಮರಾಂಬಿಕೆ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ, ರಕ್ತೇಶ್ವರಿ, ಕಾತ್ಯಾಯಿನಿ ಎಂಬ ಹೆಸರನ್ನಿಡುತ್ತಾನೆ. ಈ ದೇವತೆಗಳೆಲ್ಲ ಸೇರಿ ದಾರಿಗಾಸುರನ ವಧೆ ಮಾಡಿ, ವಿಷ್ಣುವಿನ ಆಯುಧ ಮರಳಿ ತರುವಲ್ಲಿ ಯಶಸ್ವಿಯಾಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಪ್ತ ದೇವಿಯರಿಗೆ ಏಳು ದೇವಸ್ಥಾನಗಳಿದೆ. ಅದರಲ್ಲಿ ಹೊರನಾಡು, ಕಟೀಲು ಕೂಡ ಒಂದು. ತದನಂತರ ಸಪ್ತದೇವಿಯರಲ್ಲಿ ಒಬ್ಬಳಾದ ಪರಮೇಶ್ವರಿ ಶಾಂಭವಿ ನದಿಯಲ್ಲಿ ಲಿಂಗ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾಳೆ. ಒಮ್ಮೆ ಮುಸ್ಲಿ ವ್ಯಾಪಾರಿಯೋರ್ವ ತನ್ನ ಹಡಗಿನಲ್ಲಿ ಹೊರಡುವಾಗ ಆತನ ಹಡಗು ಲಿಂಗಕ್ಕೆ ತಾಗುತ್ತದೆ. ಅದೇ ದಿನ ಈ ಘಟನೆಯಿಂದ ಚಿಂತೆಗೀಡಾಗಿ ಮಲಗಿದ್ದ ಆ ವ್ಯಾಪಾರಿಯ ಕನಸಿನಲ್ಲಿ ಬಂದ ದೇವಿ, ತನಗಾಗಿ ದೇವಸ್ಥಾನ ಕಟ್ಟಲು ಹೇಳುತ್ತಾಳೆ.

ಕನಸ್ಸಿನಲ್ಲಿ ದೇವಿ ಹೇಳಿದ ಹಾಗೆ ಬಪ್ಪಾ ಬ್ಯಾರಿ ಎಂಬ ವ್ಯಾಪಾರಿ ಮುಲ್ಕಿಯಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನ ಕಟ್ಟುತ್ತಾನೆ. ಈ ದೇವಸ್ಥಾನವನ್ನ ಮುಸ್ಲಿಂ ವ್ಯಕ್ತಿ ಕಟ್ಟಿಸಿರುವುದರಿಂದ ಮುಸ್ಲಿಂ ಬಾಂಧವರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಜಾತ್ರೆ, ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಾರೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss