ಇದು ಬೆಂಗಳೂರಿನಲ್ಲಿರುವ 2000 ಸಾವಿರ ವರ್ಷಗಳ ಪುರಾತನ ದೇವಸ್ಥಾನ..

ಸಿಲಿಕಾನ್ ಸಿಟಿ ಬೆಂಗಳೂರು ಬರೀ ದೊಡ್ಡ ದೊಡ್ಡ ಕಂಪನಿಗಳಿಗಷ್ಟೇ ಹೆಸರುವಾಸಿಯಾಗಿಲ್ಲ. ಬದಲಾಗಿ ಇಲ್ಲಿ ಹಳೆಯ ಕಾಲದ ದೇವಸ್ಥಾನಗಳಿದೆ. ಅವು ಭಾರತೀಯ ಸಂಸ್ಕೃತಿಯನ್ನ ಬಿಂಬಿಸುತ್ತದೆ. ವಾಸ್ತುಶಿಲ್ಪದ ಶ್ರೀಮಂತಿಕೆಯನ್ನ ಎತ್ತಿ ತೋರಿಸುತ್ತದೆ. ಅಂಥ ದೇವಸ್ಥಾನಗಳಲ್ಲಿ ನಾವಿವತ್ತು ನಿಮಗೆ ಸೋಮೇಶ್ವರ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ.

ಬೆಂಗಳೂರು ಹೊರವಲಯವಾದ, ತಮಿಳುನಾಡಿಗೂ ಹತ್ತಿರವಾಗಿರುವಂಥ ಹಲಸೂರಿನಲ್ಲಿ ಈ ಸೋಮೇಶ್ವರ ದೇವಸ್ಥಾನವಿದೆ. ಜಯಪ್ಪಗೌಡ ಎಂಬ ರಾಜರು ಈ ದೇವಸ್ಥಾನವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಎರಡು ಸಾವಿರ ವರ್ಷಗಳ ಪುರಾತನ ದೇವಸ್ಥಾನವಾದ ಸೋಮೇಶ್ವರ ದೇವಸ್ಥಾನ ನಿರ್ಮಾಣದ ಕಥೆಯೇ ರೋಚಕವಾಗಿದೆ. ಜಯಪ್ಪಗೌಡರು ಈ ಸ್ಥಳದಲ್ಲಿ ಬೇಟೆಯಾಡಲು ಬಂದಿದ್ದರಂತೆ, ಹಾಗೆ ಬೇಟೆಯಾಡಲು ಬಂದ ಗೌಡರು, ಸುಸ್ತಾಗಿ, ಒಂದು ಮರದ ಕೆಳಗೆ ನಿದ್ದೆಗೆ ಜಾರಿದರು. ಅವರ ಕನಸಲ್ಲಿ ಬಂದ ಶಿವ, ನಿನ್ನ ಸಮೀಪದಲ್ಲೇ ಒಂದು ಶಿವಲಿಂಗವಿದೆ. ಅದನ್ನ ಹುಡುಕಿ, ಆ ಲಿಂಗಕ್ಕೊಂದು ಗುಡಿ ಕಟ್ಟಿಸಿ, ಪ್ರತಿದಿನ ಪೂಜೆಯಾಗುವಂತೆ ನೋಡಿಕೊ ಎಂದು ಆಜ್ಞೆ ಮಾಡಿದನಂತೆ.

ಶಿವನ ಮಾತಿನಂತೆ ಗೌಡರು ಶಿವಲಿಂಗವನ್ನು ಹುಡುಕಿ ತೆಗೆದು, ಅದಕ್ಕೆ ದೇವಸ್ಥಾನವನ್ನು ಕಟ್ಟಿಸಿ, ಪುರೋಹಿತರನ್ನು ನೇಮಿಸಿ, ಶಿವಲಿಂಗಕ್ಕೆ ಪೂಜೆಯಾಗುವಂತೆ ನೋಡಿಕೊಂಡರು. ಇಲ್ಲಿ ಪಾರ್ವತಿ ದೇವಿಯನ್ನ ಕೂಡ ಪೂಜಿಸಲಾಗುತ್ತದೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನದ ವಾಸ್ತು ಶಿಲ್ಪವನ್ನು ನೋಡಿದರೆ, ನಮ್ಮ ಪುರಾತನ ಶಿಲ್ಪಕಲೆಗಳ ಬಗ್ಗೆ ಹೆಮ್ಮೆ ಎನ್ನಿಸುತ್ತದೆ. ಕಟ್ಟಡದ ಪ್ರತಿ ಕಂಬದಲ್ಲೂ ಚೆಂದವಾಗಿ ವಾಸ್ತು ಶಿಲ್ಪವನ್ನು ಕೆತ್ತನೆ ಮಾಡಲಾಗಿದೆ.  

About The Author