Tuesday, January 14, 2025

Latest Posts

ಬೀಟ್ರೂಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?

- Advertisement -

ಹಲವು ಆರೋಗ್ಯಕರ ತರಕಾರಿಗಳಲ್ಲಿ ಬೀಟ್‌ರೂಟ್‌ ಕೂಡಾ ಒಂದು. ಬೀಟ್‌ರೂಟ್‌ನಿಂದ ಸೂಪ್, ಪಲ್ಯ, ಸಾರು, ಜ್ಯೂಸ್ ಇತ್ಯಾದಿ ಆರೋಗ್ಯಕರ ಪದಾರ್ಥವನ್ನು ಮಾಡಲಾಗತ್ತೆ. ಇದು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಬೀಟ್‌ರೂಟ್ ಸೇವನೆಯಿಂದ ಕೆಲ ನಷ್ಟಗಳೂ ಇದೆ. ಹಾಗಾಗಿ ಬೀಟ್‌ರೂಟ್‌ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

 ಬೀಟ್‌ರೂಟ್‌ ಸೇವನೆಯಿಂದ ದೇಹದಲ್ಲಿ ಹಿಮೊಗ್ಲೋಬಿನ್ ಅಂಶ ಹೆಚ್ಚುತ್ತದೆ. ಗರ್ಭಿಣಿಯರಿಗೆ ಬೀಟ್‌ರೂಟ್ ಸೇವಿಸಲು ಹೇಳಲಾಗತ್ತೆ. ಯಾಕಂದ್ರೆ ಗರ್ಭಾವಸ್ಥೆಯಲ್ಲಿದ್ದಾಗ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿ ಬೇಕಾಗುತ್ತದೆ. ಈ ಕಾರಣಕ್ಕೆ ಗರ್ಭಿಣಿಯರು ಬೀಟ್‌ರೂಟ್ ಸೇವನೆ ಮಾಡಬೇಕಾಗತ್ತೆ. ನೀವು ಬೀಟ್‌ರೂಟ್ ಸೇವನೆ ಮಾಡುವಾಗ ಹಸಿ ಬೀಟ್‌ರೂಟ್ ತಿಂದರೆ ಆದಷ್ಟು ಒಳ್ಳೆಯದು. ಬೀಟ್‌ರೂಟ್, ಕ್ಯಾರೆಟ್, ಸೌತೇಕಾಯಿ, ಈರುಳ್ಳಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ಅದಕ್ಕೆ ಉಪ್ಪು, ನಿಂಬೆರಸ ಹಾಕಿ ಸಲಾಡ್ ಮಾಡಿ ಸೇವಿಸಿ. ವಾರದಲ್ಲಿ ಮೂರು ಬಾರಿ ಈ ಸಲಾಡ್ ಸೇವಿಸಿದರೂ ಸಾಕು.

ಇಷ್ಟೇ ಅಲ್ಲದೇ, ನೀವು ಬೀಟ್‌ರೂಟ್ ಸಲಾಡ್ ತಿಂದಲ್ಲಿ ನಿಮ್ಮ ಮುಖದ ಮೇಲೆ ಮೊಡವೆಗಳಿರುವುದಿಲ್ಲ. ನಿಮ್ಮ ಮುಖದಲ್ಲಿ ಗ್ಲೋ ಬರುತ್ತದೆ. ತ್ವಚೆಯಲ್ಲಿ ತಾಜಾತನ ತುಂಬಿರುತ್ತದೆ. ಅಲ್ಲದೇ ಬೀಟ್‌ರೂಟ್‌ನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಇದರ ಸೇವನೆಯಿಂದ ಮೂಳೆ ಮತ್ತು ಹಲ್ಲುಗಳು ಗಟ್ಟಿಗೊಳ್ಳುತ್ತದೆ.  ಹಾಗಾಗಿ ಮೂಳೆ ರೋಗ ಇದ್ದವರಿಗೆ ಬೀಟ್‌ರೂಟ್ ಜ್ಯೂಸ್ ಮಾಡಿ ಕೊಟ್ಟರೆ ಒಳ್ಳೆಯದು. ಬಿಪಿ, ಶುಗರ್‌ನಿಂದ ಬಳಲುತ್ತಿರುವವರು, ಬೀಟ್‌ರೂಟ್‌ ಸೇವನೆ ಮಾಡಬೇಕು. ಬೀಟ್‌ರೂಟ್‌ ಮತತ್ತು ಕ್ಯಾರೆಟ್  ಮತ್ತು ಸೇಬು ಹಣ್ಣನ್ನ ಸೇರಿಸಿ ಜ್ಯೂಸ್ ಮಾಡಿ ಸೇವಿಸಬೇಕು. ಇದರಿಂದ ಬಿಪಿ, ಶುಗರ್ ಕಂಟ್ರೋಲಿಗೆ ಬರುತ್ತದೆ.

ಅತೀ ಸರ್ವತ್ರ ವರ್ಜಿತೇ ಅಂತಾ ಸಂಸ್ಕೃತದಲ್ಲಿ ಶ್ಲೋಕವಿದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಏನನ್ನೂ ಸೇವಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಬೀಟ್‌ರೂಟ್‌ ಸೇವನೆ ಮಾಡಬೇಡಿ. ಶುಗರ್ ಇದ್ದವರು ಇದರ ಜ್ಯೂಸ್ ಕುಡಿಬೇಕು ಅನ್ನೋದು ನಿಜ. ಆದ್ರೆ ಪ್ರತಿದಿನ ಜ್ಯೂಸ್ ಮಾಡಿ ಕುಡಿಯಬೇಡಿ. ವಾರಕ್ಕೆ ಮೂರು ಬಾರಿ ಜ್ಯೂಸ್ ಮಾಡಿ ಕುಡಿದರೆ ಸಾಕು. ಯಾಕಂದ್ರೆ ಅಗತ್ಯಕ್ಕಿಂತ ಹೆಚ್ಚು ಬೀಟ್‌ರೂಟ್ ಜ್ಯೂಸ್ ಸೇವನೆ ಶುಗರ್ ಪ್ರಮಾಣ ಹೆಚ್ಚು ಮಾಡುತ್ತದೆ. ಇನ್ನು ನಿಮಗೆ ಬೀಟ್‌ರೂಟ್‌ ತಿಂದಲ್ಲಿ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬೀಟ್‌ರೂಟ್ ಸೇವನೆ ಮಾಡುವುದು ಉತ್ತಮ.

- Advertisement -

Latest Posts

Don't Miss