Tuesday, December 24, 2024

Latest Posts

ಆಂಜನೇಯನಿಗೆ ವೀಳ್ಯದೆಲೆ ಮಾಲೆ ಯಾಕೆ ಹಾಕ್ತಾರೆ..? ವೀಳ್ಯದೆಲೆಯ ಮಹತ್ವವೇನು..?

- Advertisement -

ಹಿಂದೂಗಳಲ್ಲಿ ಹತ್ತು ಹಲವು ಸಂಪ್ರದಾಯಗಳಿದೆ. ಅಂಥ ಸಂಪ್ರದಾಯಗಳಲ್ಲಿ ದೇವರಿಗೆ ಮಾಲೆ ಹಾಕುವ ಸಂಪ್ರದಾಯ ಕೂಡ ಒಂದು. ಹೂವಿನ ಮಾಲೆ, ತುಳಸಿ ಮಾಲೆ, ವಡೆಯ ಮಾಲೆ, ಇನ್ನು ಹತ್ತು ಹಲವು ತರಹದ ಮಾಲೆಗಳನ್ನ ನಾವು ದೇವರಿಗೆ ಹಾಕ್ತೀವಿ. ಅಂಥ ಮಾಲೆಗಳಲ್ಲಿ ಇಂದು ನಾವು ವೀಳ್ಯದೆಲೆಯ ಮಾಲೆಯ ಮಹತ್ವವನ್ನ ಹೇಳಲಿದ್ದೇವೆ.

ವೀಳ್ಯದೆಲೆಯನ್ನ ನಾವು ಪ್ರತೀ ಪೂಜೆ, ಹೋಮ ಹವನ, ಮದುವೆ ಮುಂಜಿ ಸಮಾರಂಭಗಳಲ್ಲಿ ಬಳಸುತ್ತೇವೆ. ವೀಳ್ಯದೆಲೆ ಇಲ್ಲದೇ, ಪೂಜೆ ನಡೆಯುವುದಿಲ್ಲ. ತೆಂಗಿನಕಾಯಿಗೆ ಇರುವಷ್ಟೇ ಮಹತ್ವ ವೀಳ್ಯದೆಲೆಗೆ ಇದೆ. ಇನ್ನೊಂದು ವಿಶೇಷ ವಿಷಯವೆಂದರೆ, ವೀಳ್ಯದೆಲೆಯ ಮೇಲ್ಭಾಗದಲ್ಲಿ ಲಕ್ಷ್ಮೀ, ಮಧ್ಯಭಾಗದಲ್ಲಿ ಸರಸ್ವತಿ, ಕೊನೆಯ ಭಾಗದಲ್ಲಿ ಗೌರಿಯ ವಾಸಸ್ಥಾನವಿದೆ. ಇದೇ ರೀತಿ ಕೆಲವರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕೈಯನ್ನ ವೀಳ್ಯದೆಲೆಯ ರೂಪದಂತೆ ಜೋಡಿಸಿಕೊಂಡು ಕರಾಗ್ರೆ ವಸತೆ ಲಕ್ಷ್ಮೀ, ಕರಮಧ್ಯೆ ಸರಸ್ವತಿ, ಕರಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರದರ್ಶನಂ ಅನ್ನೋ ಶ್ಲೋಕ ಹೇಳಿ ದಿನ ಆರಂಭಿಸುತ್ತಾರೆ.

ಇಂಥ ವೀಳ್ಯದೆಲೆಯಿಂದಲೂ ಮಾಲೆ ಮಾಡಲಾಗುತ್ತದೆ. ಮತ್ತು ಆ ಮಾಲೆಯನ್ನ ಆಂಜನೇಯನಿಗೆ, ದೇವಿಯ ಮೂರ್ತಿಗೆ ಹಾಕಲಾಗುತ್ತದೆ. ಮಂಗಳವಾರದ ದಿನ ಹನುಮನಿಗೆ ವೀಳ್ಯದೆಲೆ ಮಾಲೇಯನ್ನ ಅರ್ಪಿಸಿ, ಪೂಜೆ ಸಲ್ಲಿಸುವುದರಿಂದ ದುಷ್ಟ ಶಕ್ತಿಗಳ ಪ್ರಭಾವದಿಂದ ಮುಕ್ತಿ ಪಡೆಯಬಹುದು. ಅಲ್ಲದೇ, ಹೀಗೆ ಪೂಜೆ ಸಲ್ಲಿಸುವುದರಿಂದ ಯಾರಾದರೂ ಮಾಟ ಮಂತ್ರ ಮಾಡಿದ್ದರೆ, ಅದರ ಪ್ರಭಾವ ಪೂಜೆ ಸಲ್ಲಿಸಿದವರ ಮೇಲೆ ಬೀಳುವುದಿಲ್ಲ ಎಂಬ ನಂಬಿಕೆಯೂ ಇದೆ.

ಇದರ ಜೊತೆ ವೀಳ್ಯದೆಲೆ ದೀಪವನ್ನ ಕೂಡ ಹಚ್ಚಲಾಗುತ್ತದೆ.ವೀಳ್ಯದೆಲೆಗೆ ಅರಿಷಿನ ಕುಂಕುಮ ಹಚ್ಚಿ, ಅದರ ಮೇಲೆ ಹಣತೆ ಇಟ್ಟು, ತುಪ್ಪದ ದೀಪ ಹಚ್ಚಬೇಕು. ಹೀಗೆ ಜೋಡಿ ದೀಪವನ್ನ ಹಚ್ಚುವುದರಿಂದ ಲಕ್ಷ್ಮೀ ಕೃಪೆ ಸದಾ ನಮ್ಮ ಮೇಲಿರುತ್ತದೆ, ಮಾಂಗಲ್ಯ ಭಾಗ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.

- Advertisement -

Latest Posts

Don't Miss