ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಇಂದು ನಾವು ಪ್ರಪಂಚದಲ್ಲಿರುವ ಬಹು ಅಪರೂಪದ 10 ದೊಡ್ಡ ಹಾವುಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಗ್ರೀನ್ ಅನಕೊಂಡಾ: ಪ್ರಪಂಚದ ಅತೀ ದೊಡ್ಡ ಹಾವು ಇದಾಗಿದ್ದು, ಹಸಿರು ಬಣ್ಣದಿಂದ ಕೂಡಿದ ಕಾರಣ, ಇದನ್ನು ಗ್ರೀನ್ ಅನಕೊಂಡಾ ಎಂದು ಕರೆಯಲಾಗುತ್ತದೆ. 30 ಫೀಟ್ ಉದ್ದವಿರುವ, 250 ಕೆಜಿ ತೂಕವುಳ್ಳ ಈ ಹಾವಿನ ಮೇಲೆ ಕಪ್ಪು ಕಪ್ಪಾದ ದೊಡ್ಡ ದೊಡ್ಡ ಡಾಟ್ಸ್ ಇರುತ್ತದೆ. ಬ್ರೆಜಿಲ್ ದೇಶದಲ್ಲಿ ಗ್ರೀನ್ ಅನಕೊಂಡಾ ಹೆಚ್ಚಾಗಿ ಕಂಡು ಬರುತ್ತದೆ.
ರೆಟಿಕ್ಯೂಲೆಟೆಡ್ ಪಾಥೆನ್: ಇದಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ಇದರ ದೇಹದ ಕಲರ್ ಕಾಂಬಿನೇಷನ್‌ನಿಂದ. ಈ ಹಾವಿನ ಮೈಮೇಲೆ ಕಪ್ಪು, ಬಿಳಿ, ಮತ್ತು ಬೂದು ಬಣ್ಣಗಳಿಂದ ಕೂಡಿದೆ. ಈ ಕಾರಣಕ್ಕೆ ಈ ಹಾವನ್ನು ರೆಟಿಕ್ಯೂಲೆಟೆಡ್ ಪಾಥೆನ್ ಎಂದು ಕರೆಯಲಾಗುತ್ತದೆ. 29 ಫೀಟ್ ಉದ್ದವಿರುವ ಈ ಹಾವಿನ ತೂಕ, 270 ಕೆಜಿ ಇರುತ್ತದೆ. ಇನ್ನು ಈ ಹಾವು ಎಷ್ಟೇ ದೊಡ್ಡ ಪ್ರಾಣಿ ಇದ್ದರೂ, ಅದನ್ನು ಹಿಡಿದು ತಿನ್ನುವ ಅರ್ಹತೆ ಹೊಂದಿರುತ್ತದೆ.
ಎಮೆಥಿಸ್ಟಿನ್ ಪೈಥನ್: 7ರಿಂದ 13 ಫೀಟ್ ಉದ್ದವಿರುವ ಈ ಹಾವಿನ ಬಣ್ಣ ಹಸಿರು ಕಲರ್ ಆಗಿರುತ್ತದೆ. ಇದರ ತೂಕ 14 ಕೆಜಿ ಇರುತ್ತದೆ. ನೀರಿನಲ್ಲೂ ಈಜಿ ಎಷ್ಟು ದೂರ ಬೇಕಾದ್ರೂ ಹೋಗುವ ಸಾಮರ್ಥ್ಯ ಇದಕ್ಕಿರುತ್ತದೆ.
ಬರ್ಮೀಸ್ ಪಾಥೆನ್: ಚೀನಾ ಮತ್ತು ದಕ್ಷಿಣ ಏಷ್ಯಾ ಭಾಗದಲ್ಲಿ ಕಂಡು ಬರುವ ಈ ಹಾವು, 23 ಫೀಟ್ ಉದ್ದವಿರುತ್ತದೆ. ಇದರ ತೂಕ 90 ಕೆಜಿ ಇರುತ್ತದೆ. ಇದು ಎಷ್ಟು ಶಕ್ತಿಶಾಲಿ ಎಂದರೆ, ಮೊಸಳೆಯಂಥ ಬಲಿಷ್ಠ ಪ್ರಾಣಿಯನ್ನೇ ಹಿಡಿದು, ಉಸಿರುಗಟ್ಟಿಸಿ ಕೊಲ್ಲುತ್ತದೆ.
ಇಂಡಿಯನ್ ಪೈಥನ್: 20 ಫೀಟ್ ಉದ್ದವಿರುವ, 68 ಕೆಜಿ ತೂಕವುಳ್ಳ ಈ ಹಾವಿನ ತಲೆ ಸಣ್ಣದಿರುತ್ತದೆ. ಮತ್ತು ದೇಹ ದೊಡ್ಡದಿರುತ್ತದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಕಾಡಿನಲ್ಲಿ ಈ ಹಾವನ್ನ ನಾವು ಕಾಣಬಹುದು.
ಇನ್ನುಳಿದ 5 ಹಾವುಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..