ಪ್ರಪಂಚದಲ್ಲಿ ಬಹು ಅಪರೂಪವಾಗಿ ಕಂಡು ಬರುವ 10 ದೊಡ್ಡ ಹಾವುಗಳಿವು.. ಭಾಗ 2

ಕಳೆದ ಭಾಗದಲ್ಲಿ ನಾವು ಪ್ರಪಂಚದ ಅಪರೂಪದ 10 ದೊಡ್ಡ ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಹಾವುಗಳ ಬಗ್ಗೆ ತಿಳಿಯೋಣ ಬನ್ನಿ..

ಆಫ್ರಿಕನ್ ರಾಕ್ ಪೈಥನ್: ಆಫ್ರಿಕಾ ಕಾಡಿನಲ್ಲಿ ಕಂಡು ಬರುವ ಈ ಹಾವು 16 ಫೀಟ್ ಉದ್ದವಿರುತ್ತದೆ. ಮತ್ತು ಇದರ ತೂಕ 15 ಕೆಜಿಗೂ ಹೆಚ್ಚಿರುತ್ತದೆ. ಇದರ ಬಳಿ ಯಾವುದಾದರೂ ಪ್ರಾಣಿ, ಅಥವಾ ಮನುಷ್ಯರು ಹೋದರೆ, ಅವರನ್ನು ಆವರಿಸಿ, ಉಸಿರುಗಟ್ಟಿಸಿ, ವಿಕಾರವಾಗಿ ಅದನ್ನು ಸೇವಿಸುತ್ತದೆ. ಇದಕ್ಕೆ ಹಸಿವು ಹೆಚ್ಚಾಗಿ ತಿನ್ನಲು ಏನೂ ಸಿಗದಿದ್ದಾಗ, ಇದರ ಮೊಟ್ಟೆಯನ್ನೇ ಇದು ತಿನ್ನುವಷ್ಟು ಕ್ರೂರಿ ಹಾವು ಇದಾಗಿದೆ.

ಬ್ಲ್ಯಾಕ್ ಮಾಂಬಾ: 8ರಿಂದ 14 ಫೀಟ್ ಉದ್ದವಿರುವ ಈ ಹಾವು ಹೆಸರಿಗೆ ತಕ್ಕಂತೆ, ಕಪ್ಪಗಿರುತ್ತದೆ. ಇದರ ತೂಕ ಬರೀ 2 ಕೆಜಿ ಇರುತ್ತದೆ. ಇದರ ವಿಷವನ್ನು ಔಷಧಿ ತಯಾರು ಮಾಡಲು ಕೂಡ ಬಳಸಲಾಗುತ್ತದೆ.

ಬೋವಾ ಕನ್ಸ್ಟ್ರಿಕ್ಟರ್: 13 ಫೀಟ್ ಉದ್ದವಿರುವ ಈ ಹಾವಿನ ತೂಕ 27 ಕೆಜಿ ಇರುತ್ತದೆ. ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಈ ಹಾವು ವಿಷಕಾರಿಯಾಗಿರುವುದಿಲ್ಲ. ಆದರೆ, ಇದರ ಕೈಗೆ ಯಾವುದಾದರೂ ಜೀವ ಸಿಕ್ಕರೆ, ಅದನ್ನ ಬಿಗಿದಪ್ಪಿ, ಉಸಿರುಗಟ್ಟಿಸಿ, ಸಾಯಿಸಿಬಿಡುತ್ತದೆ. ಇನ್ನೊಂದು ವಿಶೇಷ ಅಂದ್ರೆ ಈ ಹಾವು ಬೆಳಗ್ಗೆಗಿಂತ ರಾತ್ರಿ ಹೆಚ್ಚು ಆ್ಯಕ್ಟಿವ್ ಆಗಿರುತ್ತದೆ. ಹೊರದೇಶದಲ್ಲಿ ಜನ ಇದನ್ನು ಸಾಕಲು ಇಚ್ಛಿಸುತ್ತಾರೆ.

ಕಿಂಗ್ ಕೋಬ್ರಾ: ಕಿಂಗ್ ಕೋಬ್ರಾ ಅನ್ನೋ ಹೆಸರನ್ನು ನೀವು ಹಲವು ಬಾರಿ ಕೇಳಿರಬಹುದು. ಪ್ರಪಂಚದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಇದು ಒಂದಾಗಿದೆ. ಭಾರತ ಸೇರಿ ಹಲವು ದೇಶಗಳ ಕಾಡಿನಲ್ಲಿ ಕಂಡು ಬರುವ ಈ ಹಾವಿನ ಉದ್ದ, 13 ಫೀಟ್ ಉದ್ದವಿರುತ್ತದೆ. ಇದರ ತೂಕ 6 ಕೆಜಿ ಇರುತ್ತದೆ. ಬೂದು ಬಣ್ಣದಿಂದ ಕೂಡಿದ ದೇಹದ ಮೇಲೆ ತಿಳಿ ಚಿನ್ನದ ಬಣ್ಣದ ಅಡ್ಡ ಗೆರೆಗಳಿರುತ್ತದೆ.

ಕಿಂಗ್‌ ಬ್ರೌನ್ ಸ್ನೇಕ್: ಆಸ್ಟ್ರೇಲಿಯಾದ ಕಾಡು ಮತ್ತು ಹುಲ್ಲಿನ ಮೈದಾನದಲ್ಲಿ ಕಂಡು ಬರುವ ಹಾವಾಗಿದೆ. 11 ಫೀಟ್ ಉದ್ದವಿರುವ ಈ ಹಾವು, 6 ಕೆಜಿ ತೂಕ ಹೊಂದಿರುತ್ತದೆ. ವಿಷಕಾರಿಯಾಗಿರುವ ಈ ಹಾವಿನ ವಿಶೇಷತೆ ಅಂದ್ರೆ, ಇದರ ಬಣ್ಣ ತಿಳಿ ಹಳದಿ ಮತ್ತು ತಿಳಿ ಮೆಹಂದಿ ಬಣ್ಣದ್ದಾಗಿರುತ್ತದೆ.  ಹೀಗಾಗಿ ಇದು ಬಚ್ಚಿಕೊಳ್ಳಲು ಸುಲಭವಾಗುತ್ತದೆ.

About The Author