ನಾವು ಈ ಮೊದಲು ರಕ್ತದಾನ ಮಾಡಿದ ಬಳಿಕ ಏನು ತಿನ್ನಬೇಕು ಅಂತಾ ಹೇಳಿದ್ದೆವು. ಹಣ್ಣು, ಹಣ್ಣಿನ ರಸ ತಿನ್ನುವುದರಿಂದ, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಮರಳಿ ಬರುತ್ತದೆ ಎಂದು ಹೇಳಿದ್ದೇವು. ಇಂದು ನಾವು ರಕ್ತ ನೀಡುವ ಮುನ್ನ ನೀವು ಗಮನದಲ್ಲಿಡಬೇಕಾದ ಅಂಶವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ ಮೊದಲೇ ಹೇಳಿದಂತೆ, ರಕ್ತದಾನ ಅಂದ್ರೆ ಮಹಾದಾನ. ಯಾಕಂದ್ರೆ ಆ ದಾನದಿಂದ ಒಬ್ಬರ ಜೀವವನ್ನ ಉಳಿಸಬಹುದು. ಇದರಿಂದ ರಕ್ತ ಪಡೆಯುವವರ ಜೊತೆ ರಕ್ತ ಕೊಟ್ಟವರ ಆರೋಗ್ಯವೂ ವೃದ್ಧಿಸುತ್ತದೆ. ಆದ್ರೆ ನಾವು ರಕ್ತದಾನ ಮಾಡುವ ಮೊದಲು ಹಲವು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಅದರಲ್ಲಿ ಮೊದಲನೇಯದು, ರಕ್ತ ನೀಡುವುದಕ್ಕೂ ಮುನ್ನ ತೆಗೆದುಕೊಳ್ಳಬೇಕಾದ ಆಹಾರದ ಬಗ್ಗೆ ಗಮನ ಕೊಡುವುದು.
ನೀವು ಇನ್ನು ಎರಡು ವಾರ ಬಿಟ್ಟು ರಕ್ತ ನೀಡುತ್ತೀರಿ ಎಂದಾಗ, ಆ ಎರಡು ವಾರಗಳ ಮೊದಲು, ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸಬೇಕು. ಪಾಲಕ್, ಕಲ್ಲಂಗಡಿ ಹಣ್ಣು, ಶೇಂಗಾ ಚಿಕ್ಕಿ, ಬೀಟ್‌ರೂಟ್, ಕ್ಯಾರೆಟ್, ಸೌತೇಕಾಯಿ, ದಾಳಿಂಬೆ ಹಣ್ಣು ಸೇರಿ ಇತ್ಯಾದಿ ಆಹಾರವನ್ನು ಸೇವಿಸಲು ಶುರು ಮಾಡಿ. ಇನ್ನು ರಕ್ತದಾನಕ್ಕೂ ಮುನ್ನ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕರೆಕ್ಟ್ ಆಗಿರಬೇಕು. ಹಾಗಾಗಿ ಜ್ಯೂಸ್, ನೀರನ್ನು ಕುಡಿಯಲು ಶುರು ಮಾಡಿ.
ಇದರ ಜೊತೆ ವಿಟಾಮಿನ್ ಸಿ ಅಂಶವುಳ್ಳ ಆಹಾರವನ್ನು ಸೇವಿಸಿ. ನಿಂಬೆ ಹಣ್ಣಿನ ಜ್ಯೂಸ್, ಆರೇಂಜ್ ಜ್ಯೂಸ್, ಮೂಸಂಬಿ ಜ್ಯೂಸ್, ನೆಲ್ಲಿಕಾಯಿ ಸೇವಿಸಿ. ಇನ್ನು ಮುಖ್ಯವಾದ ವಿಷಯ ಅಂದ್ರೆ, ಧೂಮಪಾನ ಮಮತತ್ತು ಮದ್ಯಪಾನ ಮಾಡುವ ಅಭ್ಯಾಸವಿದ್ದವರು, ರಕ್ತ ದಾನ ಮಾಡುವ ಎರಡು ವಾರಗಳ ಮುಂಚೆಯೇ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಲ್ಲಿಸಿಬಿಡಿ. ಇದು ನಿಮ್ಮ ಜೀವಕ್ಕೂ ಒಳ್ಳೆಯದಲ್ಲ, ನೀವು ರಕ್ತ ಕೊಡುವವರ ಆರೋಗ್ಯಕ್ಕೂ ಒಳ್ಳೆಯದಲ್ಲ.
ಅಲ್ಲದೇ, ರಕ್ತ ಕೊಡುವ ದಿನ ನೀವು ಲೈಟ್ ಆಗಿಯೇ ಆಹಾರ ಸೇವಿಸಿ. ಆಗ ನಿಮ್ಮ ದೇಹದಲ್ಲಿ ಶುಗರ್ ಪ್ರಮಾಣ ಸಮವಾಗಿರುತ್ತದೆ. ಅಲ್ಲದೇ ಆ ದಿನ ನೀವು ಚಾಕೋಲೇಟ್ಸ್, ಸ್ವೀಟ್ಸ್ ಎಲ್ಲಾ ಸೇವಿಸುವಂತಿಲ್ಲ. ಇನ್ನು ರಕ್ತದಾನ ಮಾಡಿದ ಬಳಿಕ ಹೆಚ್ಚೆಚ್ಚು ನೀರು ಕುಡಿಯಿರಿ, ಹಣ್ಣು, ತರಕಾರಿ, ಹಾಲು, ಮೊಸರನ್ನ ಪ್ರತಿದಿನ ಸೇವಿಸಿ.