Wednesday, January 15, 2025

Latest Posts

ಮುದ್ದು ಮುದ್ದಾದ ಶ್ವಾನಗಳ ಬಗ್ಗೆ ಸಣ್ಣ ಮಾಹಿತಿ.. ಭಾಗ 1

- Advertisement -

ಪುಟ್ಟ ಪುಟ್ಟದಾದ, ಕ್ಯೂಟ್‌ ಕ್ಯೂಟ್ ಆಗಿರುವ ನಾಯಿ ಮರಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅವುಗಳು ನಮ್ಮೊಂದಿಗೆ ಆಟವಾಡುವ ರೀತಿ, ಅವುಗಳ ಮುಗ್ಧತೆ ಇದೆಲ್ಲ ಪಟ್ ಅಂತ ಇಷ್ಟವಾಗಿಬಿಡತ್ತೆ. ಇಂಥ ಕ್ಯೂಟ್ ಕ್ಯೂಟ್ ನಾಯಿ ಮರಿಗಳ ಬಗ್ಗೆ ನಾವಿವತ್ತು ಸಣ್ಣ ಮಾಹಿತಿಯನ್ನ ನೀಡಲಿದ್ದೇವೆ.

  1. ಫ್ರೆಂಚ್ ಬುಲ್ ಡಾಗ್: ಕುಬ್ಜವಾಗಿರುವ, ಮುದ್ದು ಮುದ್ದಾಗಿರುವ, ಬುದ್ಧಿವಂತ ನಾಯಿ ಅಂದ್ರೆ ಫ್ರೆಂಚ್ ಬುಲ್‌ ಡಾಗ್. ಮನುಷ್ಯರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ಶ್ವಾನ, ಪುಟ್ಟ ಮಕ್ಕಳಿಗೆ ತೊಂದರೆ ಕೊಡದೇ, ಅವರೊಟ್ಟಿಗೆ ಆಟವಾಡುತ್ತದೆ. 12 ವರ್ಷಗಳ ಕಾಲ ಆಯುಷ್ಯ ಹೊಂದಿರುವ ಈ ನಾಯಿ, ಕುಬ್ಜವಾಗಿದ್ದರೂ, ಬೆಳೆಯುತ್ತ ಬೆಳೆಯುತ್ತ, ಧಡೂತಿಯಾಗುತ್ತದೆ.
  2. ಚೌ ಚೌ: ಅರೇ ಇದೇನಿದು, ಚೌಚೌ ಹೆಸರಿನ ನಾಯಿಯೂ ಇರತ್ತಾ ಅಂತಾ ನಿಮಗೆ ಆಶ್ಚರ್ಯವಾಗಬಹುದು. ಹೌದು ಇರತ್ತೆ. ಈ ನಾಯಿ ಸೇಮ್ ಟೆಡ್ಡಿ ರೀತಿಯೇ ಇರತ್ತೆ. ಚಿಕ್ಕ ಸಿಂಹದ ಮರಿಯಂತೆ ಕಾಣುವ ಈ ಪಪ್ಪಿ, ಸಖತ್ ಕ್ಯೂಟ್ ಆಗಿರತ್ತೆ. ಇದರ ಮೈಮೇಲಿರುವ ದೊಡ್ಡ ದೊಡ್ಡ ರೋಮವೇ, ಇದರ ಅಂದ ಹೆಚ್ಚಿಸುತ್ತದೆ. ಚೀನಾ ದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಈ ನಾಯಿಗೆ ಹೆಚ್ಚಿನ ಬೇಡಿಕೆ ಇದೆ.
  3. ಜರ್ಮನ್ ಶೆಫರ್ಡ್: ಪೊಲೀಸರು ಬಳಸುವ ಈ ನಾಯಿ ಅದೇನ್ ಕ್ಯೂಟ್ ಆಗಿರತ್ತೆ ಅಂತಾ ನೀವು ಕೇಳಬಹುದು. ಆದ್ರೆ ಇದು ನಾಯಿ ಮರಿಯಾಗಿದ್ದಾಗ ತುಂಬಾನೇ ಮುದ್ದು ಮುದ್ದಾಗಿರುತ್ತದೆ. ಆದ್ರೆ ಬೆಳಿತಾ ಬೆಳಿತಾ ಇದರ ಆಕಾರ ವಿಕಾರವಾಗುತ್ತದೆ. ನೋಡಿದರೇನೆ ಭಯಬೀಳುವಂತಿರುತ್ತದೆ. ಆದ್ರೆ ಇದು ಪುಟ್ಟದಿರುವಾಗ, ಸಖತ್ ಕ್ಯೂಟ್ ಆಗಿರುತ್ತದೆ. ಅಲ್ಲದೇ ಚೂಟಿಯೂ ಇರತ್ತೆ. ಒಂಚೂರು ಆಲಸ್ಯ ತೋರದ ಈ ನಾಯಿ ಮರಿ, ಚಿಕ್ಕಂದಿನಲ್ಲೇ ಸೂಕ್ಷತೆ ಗಮನಿಸುವಷ್ಟು ಜಾಣ್ಮೆ ಹೊಂದಿರುತ್ತದೆ.
  4. ನ್ಯೂ ಫೌನ್‌ಲ್ಯಾಂಡ್: ಶಾಂತ ಸ್ವಭಾವದ, ಮುದ್ದು ಮುದ್ದಾಗಿರುವ ಈ ಶ್ವಾನ ಎದುರಾಳಿಯ ಮೇಲೆ ದಾಳಿ ಮಾಡುವುದನ್ನೂ ಕಲಿತಿರುತ್ತದೆ. ಇನ್ನು ಇದರ ಕ್ಯೂಟ್‌ನೆಸ್ಸನಿಂದ ಸಿನಿಮಾದಲ್ಲೂ ನಟಿಸುವ ಚಾನ್ಸ್ಯ್ ಗಿಟ್ಟಿಸಿಕೊಳ್ಳತ್ತೆ. ಅಲ್ಲದೇ ಪುಟ್ಟ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಛಿಸುವ ಈ ಪ್ರಾಣಿ, ಮಕ್ಕಳಿಗೆ ಹಾನಿಯುಂಟು ಮಾಡದೇ, ನಿಯತ್ತಾಗಿರುತ್ತದೆ. ಇದರ ಇನ್ನೊಂದು ವಿಶೇಷತೆ ಅಂದ್ರೆ ಇದಕ್ಕೆ ಸ್ವಿಮಿಂಗ್ ಮಾಡುವುದೆಂದರೆ ಇಷ್ಟ. ಅಲ್ಲದೇ ಇದು ಬೆಳೆದ ಬಳಿಕ ಕರಡಿಯಂತೆ ಕಾಣುತ್ತದೆ.
  5. ಪೊಮರೇನಿಯನ್: ನಾಯಿಗಳಲ್ಲೇ ಅತ್ಯಂತ ಮುದ್ದು ಮುದ್ದಾದ, ಹತ್ತಿಯಂತೆ ಮೃದುವಾದ ರೋಮ ಹೊಂದಿರುವ ಶ್ವಾನ ಅಂದ್ರೆ ಪೊಮರೇನಿಯನ್ ನಾಯಿ. ಈ ಪಪ್ಪಿ ಸೇಮ್ ಟೆಡ್ಡಿಯಂತೆ ಕಾಣತ್ತೆ. ಈ ಕುಬ್ಜ ಶ್ವಾನವನ್ನು ಚೆನ್ನಾಗಿ ನೋಡಿಕೊಂಡಲ್ಲಿ, ಇದು ಗೊಂಬೆಯಂತೆ ಕಾಣುತ್ತದೆ. ಇದರ ರೋಮವನ್ನು ನಿಯಮಿತವಾಗಿ ಕತ್ತರಿಸಿ, ಟ್ರಿಮ್ ಮಾಡಿದ್ರೆ, ಇದರ ಅಂದ ಇನ್ನೂ ಹೆಚ್ಚುತ್ತದೆ.

ಇನ್ನುಳಿದ 5 ಶ್ವಾನಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss