- Advertisement -
ಇದರ ಮೊದಲ ಭಾಗದಲ್ಲಿ ನಾವು 5 ಪಪ್ಪಿಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಪ್ಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
- ಡಾಗ್ಸಂಡ್: ಈ ನಾಯಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಅರ್ಹತೆ ಹೊಂದಿರುತ್ತದೆ. ಆದ್ರೆ ಇದು ಪುಟ್ಟದಿರುವಾಗ ತುಂಬಾನೇ ಚಂದವಿರುತ್ತದೆ. ಇದರ ದೇಹ ಮತ್ತು ಕಿವಿ ದೊಡ್ಡದಾಗಿದ್ದು, ಇದರ ಕಾಲುಗಳು ಪುಟ್ಟ ಪುಟ್ಟದಿರುತ್ತದೆ. ಇದರಿಂದಲೇ ಇದರ ಚೆಂದ ದುಪ್ಪಟ್ಟಾಗೋದು. ಈ ಕುಬ್ಜ ಪ್ರಾಣಿಗೆ ನೀವು ಎಷ್ಟು ಟ್ರೇನಿಂಗ್ ಕೊಡ್ತೀರೋ, ಅಷ್ಟು ಬೇಗ ಅದು ಹಲವು ಟಾಸ್ಕ್‌ಗಳನ್ನು ಮಾಡುವ ತಾಕತ್ತು ಬೆಳೆಸಿಕೊಳ್ಳುತ್ತದೆ.
- ವೆಲ್ಶ್ ಕಾರ್ಗಿ: ಈ ನಾಯಿ ಕೂಡ ಕುಬ್ಜವಾಗಿದ್ದು, ಇದರ ದೇಹ ದಪ್ಪವಾಗಿರುತ್ತದೆ. ಮತ್ತು ಕೈ ಕಾಲು ಸಣ್ಣದಿರುತ್ತದೆ. ಇದರ ಮುಖ ಕೂಡ ದೊಡ್ಡದಾಗಿ, ಅಂದವಾಗಿರುತ್ತದೆ. ಇದಕ್ಕೆ ಕಾರಣ, ಅವರ ರೋಮ. ಇದು ಚಿಕ್ಕದಿರುವಾಗಲೇ ಇದಕ್ಕೆ ಟ್ರೇನಿಂಗ್ ಕೊಟ್ಟು, ರೆಸ್ಕ್ಯೂ ಆಪರೇಶನ್ ಸಲುವಾಗಿ ಇದನ್ನ ಬಳಸಿಕೊಳ್ಳಲಾಗುತ್ತದೆ.
- ಬರ್ನೀಸ್ ಮೌಂಟೇನ್ ಡಾಗ್: ಇದು ಥೇಟ್ ಪುಟ್ಟದಾದ,. ಮುಗ್ಧ ಮಗುವಿನಂತೆ ಕಾಣುವ ನಾಯಿಯಾಗಿದೆ. ಇದನ್ನ ಸಾಕಿದ್ರೆ, ಚೆನ್ನಾಗಿ ಸಾಕಬೇಕಾಗುತ್ತದೆ. ಇಲ್ಲವಾದಲ್ಲಿ, ಇದು ಕೆಲವೇ ದಿನಗಳಲ್ಲಿ ಸಾವಿಗೀಡಾಗುತ್ತದೆ. ಯಾಕಂದ್ರೆ ಇದಕ್ಕೆ ರೋಗ ರುಜಿಗಳು ಅಂಟಿಕೊಳ್ಳೋದು ಬೇಗ. ಹಾಗಾಗಿ ಒಳ್ಳೆಯ ಊಟ, ಒಳ್ಳೆ ಜಾಗ ಮತ್ತು ಪ್ರತಿ ತಿಂಗಳು ವೈದ್ಯರ ಬಳಿ ಚೆಕಪ್‌ಗೆ ಕರೆದೊಯ್ಯುವುದು ಮತ್ತು ವರ್ಷಕ್ಕೊಮೆಯಾದರೂ ವ್ಯಾಕ್ಸಿನ್ ಹಾಕಿಸುವುದನ್ನ ಮರೆಯಬಾರದು.
- ಹಸ್ಕಿ: ಕಪ್ಪು ಮತ್ತು ಬಿಳಿ ಬಣ್ಣಗಳ ಮಿಶ್ರಣವಾದ ಈ ಶ್ವಾನ ನೋಡಲು ಸಖತ್ ಮುದ್ದು ಮುದ್ದಾಗಿರುತ್ತದೆ. ಪುಟ್ಟ ಮಕ್ಕಳೊಂದಿಗೆ ಮಕ್ಕಳಂತೆ ಆಡುವ ಈ ಶ್ವಾನಕ್ಕೆ ಸರಿಯಾದ ಟ್ರೇನಿಂಗ್ ಸಿಕ್ರೆ, ಪೊಲೀಸ್ ಫೋರ್ಸ್‌ನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡುವ ಅರ್ಹತೆಯನ್ನೂ ಹೊಂದುತ್ತದೆ. ಇನ್ನು ಇದರ ಸ್ಕಿನ್ ದಪ್ಪ ಹೊದಿಕೆಯಂತೆ ಇರುತ್ತದೆ. ಹಾಗಾಗಿ ಇದು ಸ್ನೋ ಫಾಲ್‌ನಲ್ಲೂ ಕೂಡ ಆರಾಮವಾಗಿ ಆಟವಾಡುತ್ತದೆ.
- ಗೋಲ್ಡನ್ ರಿಟ್ರಿವರ್ ಪಪ್ಪೀಸ್: ಇದರ ರೋಮದ ಬಣ್ಣ ಚಿನ್ನದ ಬಣ್ಣದ್ದಾಗಿದ್ದು, ಈ ಕಾರಣಕ್ಕೆ ಇದಕ್ಕೆ ಗೋಲ್ಡನ್ ರಿಟ್ರಿವರ್ ಪಪ್ಪೀಸ್ ಎಂದು ಕರೆಯಲಾಗುತ್ತದೆ. ಇದು ನೋಡೋಕ್ಕೆ ಸಖತ್ ಕ್ಯೂಟ್ ಆಗಿದ್ದು, ಶಾಂತ ಸ್ವಭಾವದ್ದಾಗಿರುತ್ತದೆ. ಇದಕ್ಕೆ ನಿಯತ್ತು ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಎದುರಾಳಿಯ ಮೇಲೆ ದಾಳಿ ಮಾಡುವ ಶಕ್ತಿ ಇದೆ. ಅಲ್ಲದೇ ಇದು ಬೆಕ್ಕುಗಳ ಫ್ರೆಂಡ್‌ಶಿಪ್ ಮಾಡೋದ್ರಲ್ಲೂ ಮೊದಲಾಗಿದೆ.
- Advertisement -