Sunday, September 8, 2024

Latest Posts

ಹಾಡುವ , ಕುಣಿಯುವ, ಡಾನ್ಸ್ ಮಾಡುವ ಪಕ್ಷಿಗಳಿವು- ಭಾಗ 2

- Advertisement -

ಈ ಹಿಂದೆ ನಾವು ನಿಮಗೆ ಅಪರೂಪದ 10 ಪಕ್ಷಿಗಳಲ್ಲಿ 5 ಪಕ್ಷಿಗಳ ಬಗ್ಗೆ ವಿವರಣೆ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಕ್ಷಿಗಳ ಬಗ್ಗೆ ಮಾಹಿತಿ ತಿಳಿಯೋಣ..

  1. ದಿ ಗ್ರೇಟರ್ ಸೇಜ್ ಗ್ರೌಸ್: ನಾರ್ತ್ ಅಮೆರಿಕದ ದೊಡ್ಡ ಪಕ್ಷಿಯಾಗಿರುವ ಈ ಪಕ್ಷಿ, ನೋಡಲು ವಿಚಿತ್ರವಾಗಿರುತ್ತದೆ. ಇದರ ರೆಕ್ಕೆ ಮುಳ್ಳುಮುಳ್ಳಂತಿದ್ದು, ಇದರ ಎದೆ ಮತ್ತು ಹೊಟ್ಟೆಯ ಭಾಗ ದೊಡ್ಡದಿರುತ್ತದೆ. ಇದೇ ಕಾರಣಕ್ಕೆ ಇದಕ್ಕೆ ಹೆಚ್ಚು ಹಾರಲು ಸಾಧ್ಯವಾಗುವುದಿಲ್ಲ.
  2. ಕ್ರಿಸ್‌ಮಸ್ ಐಲ್ಯಾಂಡ್ ಫ್ರಿಗೇಟ್ ಬರ್ಡ್: ಈ ಜಾತಿಯ ಗಂಡು ಪಕ್ಷಿಯ ಎದೆಯ ಭಾಗ ಕೆಂಪು ಬಣ್ಣದ್ದಾಗಿದ್ದು, ಹೆಣ್ಣು ಪಕ್ಷಿಯ ಎದೆಯ ಭಾಗ ಬಿಳಿ ಬಣ್ಣದ್ದಾಗಿರುತ್ತದೆ. ಶಿಕಾರಿ ಮಾಡಲು ತಮ್ಮ ಚೂಪು ಕೊಂಕನ್ನು ಉಪಯೋಗಿಸುವ ಈ ಪಕ್ಷಿಗಳು, ಹೆಣ್ಣು ಪಕ್ಷಿಯನ್ನು ಇಂಪ್ರೆಸ್ ಮಾಡಲು ತಮ್ಮ ಕೆಂಪು ಎದೆಯ ಭಾಗವನ್ನು ಉಬ್ಬಿಸುತ್ತದೆ.
  3. ವಿಕ್ಟೋರಿಯಾ ಕ್ರೌನ್ಡ್ ಪೀಜನ್: ಇದು ಸುಂದರವಾಗಿರುವ ಪಕ್ಷಿಯಾಗಿದ್ದು, ಇದರ ದೇಹದ ಬಣ್ಣ ಬೂದು ಬಣ್ಣದಿಂದ ಕೂಡಿರುತ್ತದೆ. ಇದಕ್ಕೆ ನವಿಲಿನ ಪಂಖದಂತೆ, ತಲೆಯ ಮೇಲೆ ಕೀರಿಟವಿದೆ. ಆ ಕಿರೀಟವೇ ಇದರ ಸೌಂದರ್ಯಕ್ಕೆ ಕಾರಣವಾಗಿದೆ. ಪಾರಿವಾಳದ ಪ್ರಜಾತಿಯಲ್ಲಿ ಬರುವ ಬಹು ಸುಂದರ ಪಕ್ಷಿಯೇ ಈ ವಿಕ್ಟೋರಿಯಾ ಕ್ರೌನ್ಡ್‌ ಪೀಜನ್.
  4. ಗ್ರೀನ್ ಪೀಫೌಲ್: ಇದು ಬಲು ಸುಂದರವಾದ ನವಿಲಿನ ಜಾತಿಯಾಗಿದೆ. ಇದರ ಕಣ್ಣೇ ಮೂರು ಬಣ್ಣದಿಂದ ಕೂಡಿದೆ. ನೀಲಿ, ಕೇಸರಿ ಮತ್ತು ಬಿಳಿ ಬಣ್ಣದ ಕಣ್ಣಿನ ಬಣ್ಣ ಹೊಂದಿರುವ ಈ ನವಿಲಿನ ಮೈ ಬಣ್ಣ ಹಸಿರಾಗಿದೆ.
  5. ಸೆಕ್ರೆಟರಿ ಬರ್ಡ್ಸ್: ಈ ಪಕ್ಷಿಯನ್ನು ಕಿಲ್ಲರ್ ಕ್ವೀನ್ ಅಂತಲೂ ಕರೆಯಲಾಗುತ್ತದೆ. ಯಾಕಂದ್ರೆ ಈ ಪಕ್ಷಿ ಕಿಂಗ್ ಕೋಬ್ರಾವನ್ನ ಕೂಡ ಸಾಯಿಸುವಷ್ಟು ಶಕ್ತಿಯನ್ನು ಹೊಂದಿದೆ. ಇದರ ರೂಪ ನೋಡಲು ಅಪರೂಪವಾಗಿದೆ. ಕಪ್ಪು ಬಿಳಿ ಮತ್ತು ಬೂದು ಬಣ್ಣದಿಂದ ಕೂಡಿದ ಈ ಪಕ್ಷಿ ಕಾಲು ಸಾಕ್ಸ್ ಹಾಕಿದ ರೀತಿ ಇದೆ. ಇನ್ನು ತಲೆಯ ಮೇಲೆ ನಾಲ್ಕು ಕಪ್ಪು ಪುಕ್ಕಗಳಿದೆ. ಕೆಂಪು ಬಣ್ಣದಿಂದ ಕೂಡಿದ ಕಣ್ಣುಗಳು ನೋಡಲು ತೀಕ್ಷವಾಗಿರುವಂತೆ ಕಾಣುತ್ತದೆ.

- Advertisement -

Latest Posts

Don't Miss