ಸಾಮಾನ್ಯವಾಗಿ ನಾವು ಊಟ ಮಾಡಲು ತಡಮಾಡಿದರೆ, ಅನ್ನವನ್ನ ಕಾಯಿಸಬಾರದು ಬೇಗ ಬಂದು ಊಟ ಮಾಡು ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೇವೆ. ಯಾಕೆ ಹೀಗೆ ಹೇಳ್ತಾರೆ..? ತಟ್ಟೆಯಲ್ಲಿ ಮೊದಲೇ ಅನ್ನವನ್ನ ಯಾಕೆ ಬಡಸಿಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಊಟ ಮಾಡುವ ವ್ಯಕ್ತಿ ಬಾಳೆಯ ಮುಂದೆ ಬಂದು ಕೂತಾಗಲೇ ಊಟ ಬಡಿಸಬೇಕು. ಊಟ ಬಡಿಸಿಟ್ಟ ಮೇಲೆ ವ್ಯಕ್ತಿ ಬಂದು ಬಟ್ಟಲ ಮುಂದೆ ಕುಳಿತುಕೊಳ್ಳುವುದು ಸರಿಯಲ್ಲ. ನಾವು ಅನ್ನಪೂರ್ಣೆಗಾಗಿ ಕಾದರೂ ನಡಿಯುತ್ತದೆ. ಆದ್ರೆ ನಮಗಾಗಿ ಅನ್ನಪೂರ್ಣೆ ಕಾಯಬಾರದು.
ನೀವೇನಾದರೂ ಊಟ ಮಾಡುವ ಮೊದಲೇ ಅನ್ನವನ್ನ ಬಡಿಸಿಟ್ಟು ಕಾದರೆ, ಕೆಟ್ಟ ಶಕ್ತಿಯೊಂದು ಊಟದ ಘಮಕ್ಕೆ ಮನೆಗೆ ಸೇರಿ, ಬೇರೆಯವರಿಗೆ ಬಡಿಸಿಟ್ಟ ಊಟವನ್ನ ಸ್ವೀಕರಿಸುವ ಸಾಧ್ಯತೆ ಇರುತ್ತದೆ. ಆ ಆಙಾರವೇನಾದರೂ ಕೆಟ್ಟ ಶಕ್ತಿ ಸ್ವೀಕರಿಸಿ, ತದನಂತರ ಬೇರೆಯವರು ಬಂದು ಆ ಊಟ ಮಾಡಿದರೆ, ಆತ ಅನಾರೋಗ್ಯಕ್ಕೀಡಾಗುತ್ತಾನೆ. ಹಾಗಾಗಿ ಊಟಕ್ಕೆ ಕೂತ ಬಳಿಕವೇ ತಟ್ಟೆಗೆ ಅನ್ನ ಬಡಿಸಿಕೊಳ್ಳಬೇಕು.
ಪೂರ್ಣಬ್ರಹ್ಮನಾಗಿರುವ ಅನ್ನವನ್ನ ಅವಮಾನಿಸಬಾರದು. ಟಿವಿ ನೋಡುವ ಭರದಲ್ಲಿ ತಟ್ಟೆಗಿಂತ ಮುಂದೆ ಕಾಲು ಬಿಟ್ಟು, ಅಥವಾ ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟ ಮಾಡಬಾರದು. ಅಚ್ಚುಕಟ್ಟಾಗಿ ನೆಲದ ಮೇಲೆ ಕೂತು, ಮುಂದೆ ತಟ್ಟೆಯನ್ನಿಟ್ಟು, ಅದನ್ನ ನಮಸ್ಕರಿಸಿ ತದನಂತರ ಊಟ ಬಡಿಸಿಕೊಂಡು ಆಹಾರ ಸೇವಿಸಬೇಕು.
ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಚಟ್ಟೆಮುಟ್ಟೆ ಹಾಕಿ ಕೂತು ಊಟ ಮಾಡುವುದರಿಂದ ನಾವು ಸೇವಿಸುವ ಆಹಾರದ ಪ್ರಮಾಣ ಮಿತಿಯಾಗಿದ್ದು, ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುತ್ತದೆ. ಈ ಕಾಣಕ್ಕೆ ಚಟ್ಟೆಮುಟ್ಟೆ ಹಾಕಿ ಕೂತು ಊಟ ಮಾಡಲಾಗುತ್ತದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911