- Advertisement -
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಆದ್ರೆ ವಿದೇಶದಲ್ಲಿ ಹಾವುಗಳನ್ನ ಕೂಡ ಸಾಕು ಪ್ರಾಣಿಯಂತೆ ಸಾಕಲಾಗುತ್ತದೆ. ಹಾಗಾದ್ರೆ ವಿದೇಶದಲ್ಲಿ ಸಾಕುವ 10 ವಿಧದ ಹಾವುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
- ಕಾಮನ್ ಬೋವಾ ಕನ್ಸ್ಟ್ರಿಕ್ಟರ್: ವಿದೇಶದಲ್ಲಿ ಇದನ್ನು ಸಾಕುತ್ತಾರೆ. ಆದ್ರೆ ಇದನ್ನು ಸಾಕುವವರು, ಇದರ ಬಗ್ಗೆ ತರಬೇತಿ ಪಡೆದಿರಬೇಕು. ಯಾಕಂದ್ರೆ ಈ ಹಾವಿನ ಮೂಡ ಸ್ವಲ್ಪ ಹಾಳಾದ್ರೂ, ಇದು ಸಾಕಿದವರ ಜೀವವನ್ನೇ ತೆಗೆದು ಬಿಡುತ್ತದೆ. ಆದ್ರೆ ಇದರ ದೇಹದಲ್ಲಿ ವಿಷವಿರುವುದಿಲ್ಲ. ಬದಲಾಗಿ ಇದು ದೇಹವನ್ನು ಸುತ್ತಿಕೊಂಡು ಉಸಿರುಗಟ್ಟಿಸಿ, ಕೊಲ್ಲುತ್ತದೆ.
- ಬ್ಲ್ಯಾಕ್ ರ್ಯಾಟ್ ಸ್ನೇಕ್: ಉತ್ತರ ಅಮೆರಿಕದಲ್ಲಿ ಕಂಡುಬರುವ ಈ ಹಾವಿನ ದೇಹದ ಮೇಲ್ಭಾಗ ಕಪ್ಪು ಬಣ್ಣದ್ದಾಗಿರುತ್ತದೆ ಮತ್ತು ಕೆಳಭಾಗ ಬಿಳಿ ಬಣ್ಣದ್ದಾಗಿರುತ್ತದೆ. ಇದು ಖಾಲಿ ಮೈದಾನ ಮತ್ತು ಕಾಡಿನಲ್ಲಿರಲು ಇಷ್ಟಪಡುತ್ತದೆ. ಇದರ ದೇಹದಲ್ಲಿ ವಿಷವಿಲ್ಲದ ಕಾರಣ, ಇದನ್ನು ಜನ ಸಾಕುತ್ತಾರೆ. ಹೆಚ್ಚಾಗಿ ವಿದೇಶದಲ್ಲಿ ವ್ಯವಸಾಯ ಮಾಡುವವರು ಈ ಹಾವನ್ನ ಸಾಕುತ್ತಾರೆ. ಯಾಕಂದ್ರೆ ಇದನ್ನು ತೋಟ-ಗದ್ದೆಗೆ ಬಿಟ್ರೆ, ಇಲಿ, ಹುಳ ಹುಪ್ಪಟೆಯನ್ನು ತಿಂದು, ಬೆಳೆ ನಾಶವಾಗದಂತೆ ನೋಡಿಕೊಳ್ಳುತ್ತದೆ.
- ಆಫ್ರಿಕನ್ ಹೌಸ್ ಸ್ನೇಕ್: ಆಫ್ರಿಕಾದಲ್ಲಿ ಕಂಡು ಬರುವ ಈ ಹಾವನ್ನು ವಿದೇಶದಲ್ಲಿ ಸಾಕಲಾಗತ್ತೆ. ಹೆಸರಿಗೆ ತಕ್ಕಂತೆ, ಹೆಚ್ಚಾಗಿ ಮನುಷ್ಯರಿರುವ ಜಾಗದಲ್ಲೇ ಈ ಹಾವು ಕಂಡು ಬರುವ ಕಾರಣ, ಇದನ್ನು ಹೌಸ್ ಸ್ನೇಕ್ ಎಂದು ಕರೆಯಲಾಗುತ್ತದೆ. ಇನ್ನು ಇದಕ್ಕೆ ತೊಂದರೆ ಸಂಭವಿಸುತ್ತದೆ ಅಂತಾ ಅನ್ನಿಸಿದಾಗ, ಇದು ಅಲ್ಲಿರುವವರಿಗೆ ಕಚ್ಚುವ ಬದಲು, ಆ ಜಾಗದಿಂದ ಓಡಿ ಹೋಗುತ್ತದೆ.
- ರೋಸಿ ಬೋವಾ: ಮೆಕ್ಸಿಕೋ ಮತ್ತು ಪಶ್ಚಿಮ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡು ಬರುವ ಈ ಹಾವು ಸಾಕಲು ಯೋಗ್ಯವಾಗಿರುತ್ತದೆ. 25 ವರ್ಷಗಳ ಕಾಲ ಬದುಕುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಮತ್ತು ಹಳದಿ ಬಣ್ಣ, ಬಿಳಿ ಮತ್ತು ಲೈಟ್ ಕಾಫಿ ಬಣ್ಣದಿಂದ ಕೂಡಿದ ಈ ಹಾವು, 4 ಫೀಟ್ ಉದ್ದವಾಗಿರುತ್ತದೆ. ಇದರ ಇನ್ನೊಂದು ವಿಶೇಷತೆ ಅಂದ್ರೆ, ಈ ಹಾವು ಕಚ್ಚುವುದಿಲ್ಲ. ಸೇಮ್ ನೀವು ನಾಯಿ, ಬೆಕ್ಕನ್ನ ಪ್ರೀತಿದಷ್ಟೇ ಇದನ್ನ ಪ್ರೀತಿಸಬಹುದು. ಇದರ ದೇಹದಲ್ಲಿ ವಿಷವಿರುವುದಿಲ್ಲ. ಆದರೂ ಇದು ಕಚ್ಚುವುದಿಲ್ಲ. ಹಾಗಾಗಿ ವಿದೇಶದಲ್ಲಿ ಇದನ್ನು ಪ್ರೀತಿಯಿಂದ ಸಾಕಲಾಗುತ್ತದೆ.
- ಅಮೆಜಾನ್ ಟ್ರೀ ಬೋವಾ: ಅಮೆಜಾನ್ ಕಾಡಿನಲ್ಲಿ ಕಂಡುಬರುವ ಈ ಹಾವು, ಹಲವು ಬಣ್ಣದಲ್ಲಿ ಕಾಣ ಸಿಗುತ್ತದೆ. ಹಸಿರು, ಕಪ್ಪು, ಕೆಂಪು, ಕೇಸರಿ, ಬೂದಿ ಬಣ್ಣ ಸೇರಿ ಹಲವು ಬಣ್ಣದಲ್ಲಿ ಈ ಹಾವು ಕಾಣಸಿಗುತ್ತದೆ. ಇದನ್ನ ಕೆಲವರು ಸಾಕುತ್ತಾರೆ.
ಇನ್ನುಳಿದ 4 ವಿಧದ ಸಾಕು ಹಾವುಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..
- Advertisement -