Monday, October 6, 2025

Latest Posts

ಹವನದ ವಿಭೂತಿಯ ಮಹತ್ವ ತಿಳಿಯಿರಿ..

- Advertisement -

ನಾವು ಹಲವಾರು ಹೋಮ ಹವನಗಳಲ್ಲಿ ಭಾಗವಹಿಸಿರುತ್ತೇವೆ. ಆದ್ರೆ ಹಲವರಿಗೆ ಆ ಹವನದ ಬೂದಿ ಶ್ರೇಷ್ಠ, ಅದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ ಎನ್ನುವ ಸತ್ಯ ಮಾತ್ರ ಗೊತ್ತಿರುವುದಿಲ್ಲ. ಹಾಗಾದ್ರೆ, ಹವನದ ಬೂದಿಯಿಂದಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಸುತ್ತಮುತ್ತಲಿನ ಪರಿಸರ ಶುದ್ಧವಾಗಲು ಹವನವನ್ನ ಮಾಡುತ್ತಾರೆ. ಇದೇ ಹವನದ ಬೂದಿಯನ್ನು ತಂದು ನಿಮ್ಮ ಮನೆಯ ಸುತ್ತಮುತ್ತಲು ಅಥವಾ ನಿಮ್ಮ ಅಂಗಡಿ ಮುಂಗಟ್ಟುಗಳ ಸುತ್ತ ಮುತ್ತಲು ಸಿಂಪಡಿಸಿದರೆ, ಅಲ್ಲಿನಕಾರಾತ್ಮಕ ಶಕ್ತಿಗಳು ಸುಳಿಯುವುದಿಲ್ಲ. ಬದಲಾಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮತ್ತು ವ್ಯಾಪಾರ ಉತ್ತಮವಾಗಿ ನಡೆಯುತ್ತದೆ.

ಇನ್ನು ನಿಮ್ಮ ಮನೆಗೆ ಯಾರದ್ದಾದರೂ ದೃಷ್ಟಿ ಬಿದ್ದರೆ, ಹವನದ ಬೂದಿಯನ್ನು ಸಿಂಪಡಿಸಿದ್ದಲ್ಲಿ ಆ ದೃಷ್ಟಿ ತೊಲಗುತ್ತದೆ. ಈ ಬೂದಿಯನ್ನ ಮನುಷ್ಯರು ಕೂಡ ಹಚ್ಚಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಪುಟ್ಟ ಮಗುವಿದ್ದರೆ, ಅದಕ್ಕೆ ದೃಷ್ಟಿ ಬಿದ್ದಿದ್ದರೆ, ಹವನದ ಬೂದಿಯನ್ನ ಅಂದ್ರೆ ವಿಭೂತಿಯನ್ನ ಹಣೆಗೆ ಹಚ್ಚಬೇಕು. ಇದರಿಂದ ಮಗುವಿನ ಮೇಲೆ ಬಿದ್ದ ದೃಷ್ಟಿ ಕಳೆದುಹೋಗುತ್ತದೆ.

ಇಷ್ಟೇ ಅಲ್ಲದೇ, ಜೀವನದಲ್ಲಿ ಅಭಿವೃದ್ಧಿ ಹೊಂದುತ್ತೀರಿ. ಪ್ರತಿದಿನ ಹವನದ ವಿಭೂತಿಯನ್ನ ಹಣೆಗೆ ಹಚ್ಚಿ, ವ್ಯಾಪಾರ ವಹಿವಾಟನ್ನು ಆರಂಭಿಸಿ. ಓದು ಬರಹ, ವ್ಯಾಪಾರ, ಆಫೀಸ್ ಕೆಲಸವನ್ನ ಆರಂಭಿಸಿ. ರಾತ್ರಿ ಕೆಟ್ಟ ಕನಸು ಬೀಳುತ್ತಿದ್ದರೆ, ಮಲಗುವ ವೇಳೆ ದೇವರಿಗೆ ಪ್ರಾರ್ಥಿಸಿ, ಈ ವಿಭೂತಿ ಹಚ್ಚಿ ಮಲಗಿದರೆ, ಕೆಟ್ಟ ಕನಸು ಬೀಳುವುದಿಲ್ಲ.

- Advertisement -

Latest Posts

Don't Miss