Sunday, December 22, 2024

Latest Posts

ನ.11 ರಂದು ಅರ್ಥಪೂರ್ಣ ಕನಕದಾಸ ಜಯಂತಿ ಆಚರಣೆಗೆ ನಿರ್ಧಾರ

- Advertisement -

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ನವೆಂಬರ್ 11 ರಂದು ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ: ಎಚ್ ಎಲ್ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅವರು‌ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ಮಾತನಾಡಿ ಕನಕ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು. ನ.11 ರಂದು ಬೆಳಿಗ್ಗೆ 10 ಗಂಟೆಗೆ  ಜಿಲ್ಲಾಧಿಕಾರಿಗಳ ಕಛೇರಿಯಿಂದ  ಮೆರವಣಿಗೆ ಕಾರ್ಯಕ್ರಮ ಪ್ರಾರಂಭವಾಗಿ  ಕಲಾಮಂದಿರ ತಲುಪಿದ ನಂತರ 11 ಗಂಟೆಗೆ  ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸಾಮೂಹಿಕ ಅತ್ಯಾಚಾರ ಪ್ರಕರಣ : ಆರೋಪಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್..!

ಕನಕದಾಸರ ಜಯಂತಿಯನ್ನು  ಆಚರಣೆಯಲ್ಲಿ ಅಧಿಕಾರಿಗಳು ಯಾವುದೇ ಲೋಪ ಉಂಟಾಗದ ರೀತಿ ವಹಿಸಿರುವ ಕೆಲಸಗಳ ನಿರ್ವಹಣೆ ಮಾಡಬೇಕು. ವಿವಿಧ ಸಂಘ ಸಂಸ್ಥೆಗಳ  ಮುಖಂಡರು ಕೈಜೋಡಿಸಬೇಕು  ಎಂದರು. ಕನಕದಾಸರ ಜಯಂತಿಯ ಮೆರವಣಿಗೆಯಲ್ಲಿ ರಥಕ್ಕೆ ಹೂವಿನ ಅಲಂಕಾರವಾಗಬೇಕು. ಕಲಾತಂಡಗಳ ನಿಯೋಜನೆಯಾಗಬೇಕು  ಎಂದು  ತಿಳಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ಉದಯ್ ಕುಮಾರ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜೆ.ಓಂ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜು, ಡಿವೈಎಸ್ ಪಿ ಶಿವಮೂರ್ತಿ,  ಜಿ.ಪಂ. ಪಿ.ಎ.ಇ.ಒ ಪವನ್ ಕುಮಾರ್, ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಸುರೇಶ್, ಮುಖಂಡರುಗಳಾದ ಮಹೇಶ್, ರಾಜು ಖಿಜ್ಜಾಂಚಿ, ಎಸ್ ಕೃಷ್ಣ, ದೊಡ್ಡಯ್ಯ, ಎಂ.ಮರಿಹೆಗ್ಗಡೆ ಜಿಲ್ಲೆಯ ವಿವಿಧ  ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss