ಕುಬೇರನ ರೀತಿ ಶ್ರೀಮಂತರಾಗಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ. ಈಗಿನ ಕಾಲದಲ್ಲಿ ದುಡಿದ ಹಣ ಕೂಡಿಡೋದೇ ಕಷ್ಟವಾಗಿದ್ದು, ಇನ್ನು ಕುಬೇರನಾಗಲು ಸಾಧ್ಯಾನಾ ಅಂತಾ ಪ್ರಶ್ನಿಸುವರೇ ಹೆಚ್ಚು ಜನ. ಆದ್ರೆ ನಾವಿಂದು ಹೇಳಲು ಹೊರಟಿರುವ ಕಥೆ ಕೇಳಿದ್ರೆ, ಅದರಲ್ಲಿ ಬರುವ ಮಾತುಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಖಂಡಿತ ಶ್ರೀಮಂತರಾಗುತ್ತೀರಿ. ಹಾಗಾದ್ರೆ ಕುಬೇರನಿಗೆ ಪಾರ್ವತಿ ದೇವಿ ಹೇಳಿದ ಮಾತೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನಾವು ಈಗಾಗಲೇ ನಿಮಗೆ ಹೋದ ಜನ್ಮದಲ್ಲಿ ಕಳ್ಳನಾಗಿದ್ದ ಕುಬೇರ ಈ ಜನ್ಮದಲ್ಲಿ ಶ್ರೀಮಂತನಾಗಿದ್ದು ಹೇಗೆ ಅನ್ನೋ ಬಗ್ಗೆ ಕಥೆಯನ್ನ ಹೇಳಿದ್ದೇವೆ. ಇಂದು ಅದೇ ರೀತಿ, ಕುಬೇರ ಅಸೂಯೆ ಪಟ್ಟಿದ್ದಕ್ಕೆ ಏನಾಯಿತು ಅನ್ನೋ ಬಗ್ಗೆ ತಿಳಿಯೋಣ.
ಹಿಂದಿನ ಜನ್ಮದಲ್ಲಿ ಗುಣ ನಿಧಿಯಾಗಿದ್ದ ಕುಬೇರ ಮುಂದಿನ ಜನ್ಮದಲ್ಲಿ ಶಿವನ ಅನುಗ್ರಹದಿಂದ ವೈಶ್ರವಣನಾಗಿ ಜನ್ಮ ತಾಳುತ್ತಾನೆ. ಈ ಜನ್ಮದಲ್ಲಿ ಮತ್ತೆ ಶಿವನಿಗಾಗಿ ಕುಬೇರ ತಪಸ್ಸು ಮಾಡುತ್ತಾನೆ. ಕುಬೇರನ ತಪಸ್ಸಿಗೆ ಮೆಚ್ಚಿದ ಶಿವ ಪತ್ನಿ ಸಮೇತನಾಗಿ ಕುಬೇರನ ಮುಂದೆ ಪ್ರತ್ಯಕ್ಷನಾಗುತ್ತಾನೆ. ಸತಿ ಸಮೇತನಾದ ಪರಮೇಶ್ವರನ ಮೇಲೆ ಕುಬೇರನಿಗೆ ಅಸೂಯೆ ಉಂಟಾಗುತ್ತದೆ.
ಇದನ್ನರಿತ ಪಾರ್ವತಿ ದೇವಿ, ಮನಸ್ಸಿನಲ್ಲಿಯೇ ಯಾವ ಕಣ್ಣಿನಿಂದ ಕುಬೇರ ಅಸೂಯೆ ಪಟ್ಟನೋ ಆ ಕಣ್ಣು ಕಮರಿಹೋಗಲಿ ಎಂದು ಶಾಪ ಹಾಕುತ್ತಾಳೆ. ಇದರಿಂದ ಒಂದು ಕಣ್ಣು ಕಮರಿ ಹೋಗಿ ಕುಬೇರ ಕುರೂಪಿಯಾಗುತ್ತಾನೆ. ಇದಕ್ಕೆ ಕಾರಣ ಕೇಳಿದಾಗ, ನೀನು ನಮ್ಮ ಬಗ್ಗೆ ಅಸೂಯೆ ಪಟ್ಟಿದ್ದಕ್ಕೆ ನಿನ್ನ ಕಣ್ಣು ಕಮರಿ ಹೋಗುವಂತೆ ಮಾಡಿದೆ ಎನ್ನುತ್ತಾಳೆ.
ತದನಂತರ ತನ್ನ ತಪ್ಪನ್ನರಿತ ಕುಬೇರ, ಯಾರ ಮೇಲೂ ಅಸೂಯೆ ಪಡದೆ, ಉತ್ತಮ ರೀತಿಯಿಂದ ಜೀವನ ನಡೆಸಿ, ಶ್ರೀಮಂತನಾಗುತ್ತಾನೆ. ನಂತರ ಪಾರ್ವತಿ ದೇವಿ ಕುಬೇರನಿಗೆ ಕೆಲ ಕಿವಿ ಮಾತನ್ನ ಹೇಳುತ್ತಾಳೆ. ಯಾರ ಬಗ್ಗೆಯೂ ಅಸೂಯೆ ಪಡದೇ, ಯಾರಿಗೂ ಕೇಡು ಬಯಸದೇ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತ, ಎಲ್ಲರಿಗೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತ, ಎಲ್ಲರಿಗೂ ಒಳ್ಳೆಯದ್ದನ್ನ ಬಯಸಿದವನಷ್ಟೇ ಜೀವನದಲ್ಲಿ ಉದ್ಧಾರವಾಗುತ್ತಾನೆ ಎಂದು ಕಿವಿ ಮಾತು ಹೇಳುತ್ತಾಳೆ.
ನಾವು ನಮ್ಮ ಜೀವನದಲ್ಲಿ ಈ ವಿಷಯಗಳನ್ನ ಅಳವಡಿಸಿಕೊಂಡರೆ ಕುಬೇರನಾಗದಿದ್ದರೂ, ತಕ್ಕ ಮಟ್ಟಿನ ಶ್ರೀಮಂತರಾಗುತ್ತೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ