ಶಿವನ ಕುರಿತಂತೆ ಹಲವು ವಿಚಾರಗಳ ಬಗ್ಗೆ ನಾವು ನಿಮಗಾಗಲೇ ಹೇಳಿದ್ದೇವೆ. ಕೊರಳಲ್ಲಿರು ಸರ್ಪ ಯಾರು..? ಶಿವನ ಪುತ್ರಿಯರು ಯಾರು..? ಶಿವನಿಗೆ ಬಿಲ್ವ ಪತ್ರೆ ಯಾಕೆ ಹಾಕಲಾಗತ್ತೆ..? ಶಿವನ ಜಟೆಯಲ್ಲಿ ಚಂದ್ರ ಸುಶೋಭಿತನಾಗಿದ್ದೇಕೆ..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಇಂದು ನಾವು ಶಿವನ 19 ಅವತಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯದ್ದು ಶರಭಾವತಾರ. ಎಂಟು ಕಾಲುಗಳುಳ್ಳ ಜೀವವೇ ಶರಭ. ಸಿಂಹನ ಮುಖ, ಪಕ್ಷಿಯ ರೆಕ್ಕೆ, ಹಿರಣ್ಯದ ಕಾಲು, ಮನುಷ್ಯನ ದೇಹ. ಅಂದ್ರೆ ಎದೆಯ ಭಾಗ ಮತ್ತು ಕೈ. ಶಿವ ಈ ಅವತಾರವನ್ನು ತಾಳಲು ಕಾರಣವೇನೆಂದರೆ, ನರಸಿಂಹನ ಕೋಪ. ಹಿರಣ್ಯ ಕಶಪುವನ್ನು ಕೊಂದ ಬಳಿಕವೂ ನರಸಿಂಹನ ಕೋಪ ತಣ್ಣಗಾಗಲಿಲ್ಲ. ಹೀಗಾಗಿ ನರಸಿಂಹನ ಕೋಪ ತಣ್ಣಗಾಗಿಸಲು, ಶಿವ ಶರಭ ರೂಪ ತಾಳಿದ.
ಎರಡನೇಯದು ಪಿಪ್ಲಾದ ಅವತಾರ. ಪಿಪ್ಲಾದ ದೇವತೆಗಳಲ್ಲಿ, ನನ್ನ ಅಪ್ಪ ದದೀಚಿ ನಾನು ಹುಟ್ಟುವ ಮೊದಲೇ ನನ್ನನ್ನು ಬಿಟ್ಟು ಹೋಗಿದ್ದೇಕೆ ಎಂದು ಕೇಳಿದ. ಅದಕ್ಕೆ ದೇವತೆಗಳು ಶನಿ ದೃಷ್ಟಿ ಬಿದದ್ದ ಕಾರಣ ಹೀಗಾಯಿತು ಎಂದು ಹೇಳುತ್ತಾರೆ. ಇದಕ್ಕೆ ಕೋಪಗೊಂಡ ಪಿಪ್ಲಾದ, ನಭೋಮಂಡಲದಿಂದ ಬಿದ್ದು ಹೋಗುವಂತೆ ಶನಿಗೆ ಶಾಪ ನೀಡಿದರು. ತನ್ನ ತಪ್ಪನ್ನು ಕ್ಷಮಿಸೆಂದು ಶನಿ ಕೇಳಿಕೊಂಡ ಮೇಲೆ. ನೀನು 7ವರೆ ವರುಷ ನಿನ್ನ ವಕೃದೃಷ್ಟಿ ಬಿದ್ದವರ ಮೇಲೆ ತೊಂದರೆ ಕೊಡಬಾರದೆಂದು ಹೇಳಿದ. ಹಾಗಾಗಗಿ ಶನಿಕಾಟ ಇದ್ದವರು ಪಿಪ್ಲಾದನನ್ನು ನೆನೆದರೆ, ಆ ಕಾಟದಿಂದ ತೊಂದರೆಯಾಗುವುದಿಲ್ಲವೆಂದು ಹೇಳಲಾಗಿದೆ.
ಮೂರನೇಯದ್ದು ನಂದಿ ಅವತಾರ. ಶಿಲಾದ ಮುನಿ ಬ್ರಹ್ಮಚಾರಿಗಳಾಗಿದ್ದರು. ಹಾಗಾಗಿ ಆ ವಂಶಕ್ಕೆ ವಂಶೋದ್ಧಾರಕನಿಲ್ಲದ ಕಾರಣ, ಹಿರಿಯರು ವಿವಾಹವಾಗಿ ಸಂತಾನೋತ್ಪತ್ತಿ ಮಾಡೆಂದು ಸಲಹೆ ನೀಡಿದರು. ಹೀಗಾಗಿ ಶಿಲಾದ ಮುನಿ ಶಿವನನ್ನು ಕುರಿತು ತಪಸ್ಸು ಮಾಡಿದರು. ಆಗ ಶಿವನ ಕೃಪೆಯಿಂದ ಗದ್ದೆಯಲ್ಲಿ ಶಿಲಾದ ಮುನಿಗಳಿಗೆ ಓರ್ವ ಪುಟ್ಟ ಗಂಡು ಮಗು ಸಿಕ್ಕಿತು. ಆ ಮಗುವೇ ನಂದಿ, ಮುಂದೆ ಅವನು ಶಿವಗಣ ಸೇರಿ ನಂದೀಶ್ವರನಾದ.
ನಾಲ್ಕನೇಯದ್ದು ಭೈರವ ಅವತಾರ. ಬ್ರಹ್ಮನ ಅಹಂ ಮುರಿಯಲು ಬಂದವನೇ ಭೈರವ. ಬ್ರಹ್ಮನ ನಾಲ್ಕನೇ ತಲೆ ಕಡಿದಿದ್ದಕ್ಕೆ, ಭೈರವನಿಗೆ ಬ್ರಹ್ಮ ಹತ್ಯಾದೋಷ ತಗುಲಿತ್ತು. ಹಾಗಾಗಿ ಕಾಶಿಗೆ ಹೋಗಿ, ಬ್ರಹ್ಮ ಕಪಾಲದಲ್ಲಿ ಭಿಕ್ಷೆ ಬೇಡಿ ತನ್ನ ಪಾಪಕ್ಕೆ ಭೈರವ ಪ್ರಾಯಶ್ಚಿತ ಮಾಡಿಕೊಂಡಿದ್ದ.
ಉಳಿದ ಅವತಾರಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.