ವಿವಾಹಿತ ಮಹಿಳೆಯರು ಯಾಕೆ ಮಂಗಲಸೂತ್ರ ಹಾಕಬೇಕು..? ಹಾಕದಿದ್ದರೆ ಏನಾಗತ್ತೆ..?

ಮಾಂಗಲ್ಯ.. ವಿವಾಹಿತ ಹೆಣ್ಣಿನ ಜೀವನದ ಅತೀ ಮುಖ್ಯವಾದ ಆಭರಣ. ಮಾಂಗಲ್ಯ ಹಾಕಿಕೊಂಡ ಮಹಿಳೆಗೆ ಪುಂಡ ಪೋಕರಿಗಳ ಕಾಟವಿರುವುದಿಲ್ಲ. ಕೆಟ್ಟ ದೃಷ್ಟಿಗಳಿಂದ ಹೆಣ್ಣನ್ನು ರಕ್ಷಿಸುವಲ್ಲಿ ಮಾಂಗಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಇಂದಿನ ಕಾಲದ ಕೆಲ ವಿವಾಹಿತ ಮಹಿಳೆಯರು ಈ ಸಂಪ್ರದಾಯವನ್ನೆಲ್ಲ ಬದಿಗಿಟ್ಟು, ಫ್ಯಾಷನ್‌ಗೆ ಮಾರುಹೋಗಿ, ಮಾಂಗಲ್ಯವಿಲ್ಲದೇ ಓಡಾಡುತ್ತಾರೆ. ಮಾಂಗಲ್ಯವಿದ್ದರೆ ಎಲ್ಲಿ ತಮ್ಮ ಗ್ಲಾಮರ್ ಕಡಿಮೆಯಾಗಿ ಬಿಡುತ್ತೋ ಅನ್ನೋ ಭ್ರಮೆಯಲ್ಲಿರ್ತಾರೆ. ಆದ್ರೆ ಮಾಂಗಲ್ಯ ಹಾಕದಿದ್ದರೆ, ಮನೆಗೆ ಒಳಿತಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೋಡೋಣ.

ಭಾರತೀಯ ಸಂಸ್ಕೃತೀಯ ಪ್ರಕಾರ ಗಂಡು ಹೆಣ್ಣಿಗೆ ತಾಳಿ ಕಟ್ಟಿದರೆನೇ ಮದುವೆ ಪರಿಪೂರ್ಣವೆಂಬ ಪದ್ಧತಿ ಇದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ವಿವಾಹಿತ ಹೆಣ್ಣು ಮಾಂಗಲ್ಯ, ಕಾಲುಂಗುರ, ಮೂಗುಬೊಟ್ಟು, ಬಳೆ, ಸಿಂಧೂರ ಧರಿಸುವುದರಿಂದ ಆಕೆಯ ಆರೋಗ್ಯದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ. ಇದು ಐದು ವಸ್ತುಗಳು ಪಂಚೇದ್ರಿಯವನ್ನ ನಿಯಂತ್ರಿಸುವಲ್ಲಿ ಉತ್ತಮ ಕಾರ್ಯ ನಿಭಾಯಿಸುತ್ತದೆ. ಇದನ್ನು ಧರಿಸುವುದರಿಂದಲೇ ಆಕೆ ಮುತ್ತೈದೇ ಎಂದು ಕರೆಸಿಕೊಳ್ಳುತ್ತಾಳೆ.

ಆದ್ರೆ ಇಂದಿನ ಕಾಲದ ಕೆಲ ವಿವಾಹಿತೆಯರು ಇದನ್ನೆಲ್ಲ ಧರಿಸೋದು ತುಂಬಾ ಅಪರೂಪ. ಪ್ಯಾಂಟ್ ಶರ್ಟ್ ಹಾಕೊಂಡ್ರೆ ಅದಕ್ಕೆ ಮೂಗುಬೊಟ್ಟು, ಕುಂಕುಮ, ಬಳೆ, ತಾಳಿ ಎಲ್ಲ ಮ್ಯಾಚ್ ಆಗಲ್ಲ ಅಂತಾ ಇವೆಲ್ಲವನ್ನೂ ಬದಿಗಿರಿಸಿಬಿಡುತ್ತಾರೆ.

ಮಂಗಳಸೂತ್ರವೆಂದರೆ, ಶುಭ ಸೂತ್ರವೆಂದರ್ಥ. ಪತಿಯ ಆಯುಷ್ಯ ಗಟ್ಟಿಯಾಗಿರಲಿ, ಆತನಿಗೆ ಯಾವುದೇ ತೊಂದರೆ ಬಾಧಿಸದಿರಲಿ ಎಂದು ಹೆಂಡತಿ ಮಂಗಳಸೂತ್ರವನ್ನ ಹಾಕಿಕೊಳ್ಳುತ್ತಾಳೆ. ಈಗಂತೂ ವಿವಿಧ ತರಹದ ಮಂಗಳ ಸೂತ್ರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದ್ರೆ ಎಷ್ಟೇ ವೆರೈಟಿ ಡಿಸೈನ್ಸ್ ಬಂದರೂ ಕೂಡ, ಚಿನ್ನ, ಹವಳ, ಕರಿಮಣಿ ಇರುವ ತಾಳಿಗೆ ಹೆಚ್ಚಿನ ಬೆಲೆ ಇದೆ. ಇನ್ನು ಕೆಲವರು ತೋರಿಕೆಗಾಗಿ ಲಕ್ಷಾಂತರ ರೂಪಾಯಿಯ ಮಂಗಲಸೂತ್ರ ಮಾಡಿಸಿಕೊಂಡು, ಅದನ್ನ ಪ್ರದರ್ಶಿಸುತ್ತಾರೆ. ಆದ್ರೆ ಎಂದಿಗೂ ಹೆಣ್ಣು ತನ್ನ ಮಂಗಲಸೂತ್ರವನ್ನ ಪ್ರದರ್ಶಿಸಬಾರದು, ಇದರಿಂದ ದೃಷ್ಟಿದೋಷ ತಾಗಿ, ಗಂಡನ ಆಯುಷ್ಯಕ್ಕೆ ಧಕ್ಕೆ ಬರುತ್ತದೆ.

ಇನ್ನೊಂದು ವಿಚಾರ ಅಂದ್ರೆ ಮಂಗಲಸೂತ್ರ ಧರಿಸುವುದರಿಂದ ಅದರಲ್ಲಿನ ಸಕಾರಾತ್ಮಕ ಶಕ್ತಿಯಿಂದ ಪತಿ ಪತ್ನಿ ಉತ್ತಮ ಸಂಬಂಧ ಹೊಂದುತ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ತಾಳಿ ಧರಿಸಿದ ಹೆಣ್ಣಿನಲ್ಲಿ ತಾಳ್ಮೆ ಬರುತ್ತದೆ. ಹಾಗಾಗಿ ವೈವಾಹಿಕ ಜೀವನವನ್ನ ತಾಳ್ಮೆಯಿಂದ ಮುಂದುವರಿಸಿಕೊಂಡು ಹೋಗಬೇಕು ಅನ್ನೋ ಕಾರಣಕ್ಕೆ ಮದುವೆಯಲ್ಲಿ ತಾಳಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author