ನಾವು ಈಗಾಗಲೇ ನಿಮಗೆ ಪಶುಪತಿನಾಥ ದೇವಸ್ಥಾನದ ಬಗ್ಗೆ ಹೇಳಿದ್ದೇವೆ. ನೇಪಾಳದ ದೇವಸ್ಥಾನ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಪಶುಪತಿನಾಥ ದೇವಾಲಯ. ಆದ್ರೆ ಅದರೊಂದಿಗೆ ಇನ್ನೊಂದು ದೇವಸ್ಥಾನ ಕೂಡ ಪ್ರಸಿದ್ಧವಾಗಿದೆ. ಆ ದೇವಸ್ಥಾನವೇ ಮುಕ್ತಿನಾಥ ದೇವಸ್ಥಾನ. ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪಶುಪತಿನಾಥ ದೇವಸ್ಥಾನದಲ್ಲಿ ಶಿವ ನೆಲೆಸಿದ್ದರೆ, ಮುಕ್ತಿನಾಥ ದೇವಾಲಯದಲ್ಲಿ ವಿಷ್ಣು ಸಾಲಿಗ್ರಾಮ ರೂಪದಲ್ಲಿ ನೆಲೆನಿಂತಿದ್ದಾನೆ. ಬೌದ್ಧರು ಬರೀ ಬುದ್ಧನನ್ನು ಪೂಜಿಸುತ್ತಾರೆ. ಆದ್ರೆ ಇಲ್ಲಿ ಹಿಂದೂಗಳ ಜೊತೆ ಬೌದ್ಧರು ಕೂಡ ಮುಕ್ತಿನಾಥನನ್ನು ಪೂಜಿಸುತ್ತಾರೆ. ಆದ್ರೆ ಬೌದ್ಧರ ಪ್ರಕಾರ ಈತ ಅವಲೋಕಿತೇಶ್ವರ.
ವಿಷ್ಣು ಎಂದರೆ ನಮಗೆ ಶೇಷನ ಮೇಲೆ ಪವಡಿಸಿದ ಶ್ರೀ ವಿಷ್ಣು ನೆನಪಿಗೆ ಬರುತ್ತಾನೆ. ಆದ್ರೆ ಇಲ್ಲಿ ವಿಷ್ಣು ಸಾಮಾನ್ಯ ಮನುಷ್ಯನ ರೂಪದಲ್ಲಿ ನೆಲೆನಿಂತಿದ್ದಾನೆ. ಮನುಷ್ಯನಷ್ಟೇ ಉದ್ದವಾದ ಮುಕ್ತಿನಾಥನ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಚಿನ್ನ ಲೇಪನ ಮಾಡಲಾಗಿದೆ.
ಇನ್ನು ಮುಕ್ತಿನಾಥ ಈ ಸ್ಥಳಕ್ಕೆ ಬಂದು ನೆಲೆಸಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ, ಒಮ್ಮೆ ಜಲಂಧರ ಎಂಬ ರಾಕ್ಷಸ, ಶಿವನ ರೂಪ ತಾಳಿ, ಪಾರ್ವತಿಯ ಬಳಿ ಬರುತ್ತಾನೆ. ಆದರೆ ಈತ ಶಿವನಲ್ಲ ಎಂಬ ಸತ್ಯ ಅರಿತ ಪಾರ್ವತಿ, ಜಲಂಧರನ ಸಂಹಾರಕ್ಕಾಗಿ ಶಿವನನ್ನು ಪ್ರಾರ್ಥಿಸುತ್ತಾಳೆ. ಶಿವ ಪ್ರತ್ಯಕ್ಷನಾಗಿ ಜಲಂಧರನ ಜೊತೆ ಹೋರಾಡುತ್ತಾನೆ. ಆದ್ರೆ ಶಿವನಿಂದ ಜಲಂಧರನನ್ನು ಮಣಿಸಲಾಗುವುದಿಲ್ಲ. ಇದಕ್ಕೆ ಕಾರಣ ಜಲಂಧರನ ಪತ್ನಿ ವೃಂದಾಳ ಪಾತಿವೃತ್ಯವಾಗಿರುತ್ತದೆ. ಆಗ ಶಿವ ವಿಷ್ಣುವಿನ ಸಹಾಯ ಕೇಳುತ್ತಾನೆ.
ವಿಷ್ಣು ಜಲಂಧರನ ರೂಪ ತಾಳಿ, ವೃಂದಾಳ ಬಳಿ ಹೋಗಿ, ವೃಂದಾಳನ್ನ ಒಲಿಸಿಕೊಳ್ಳುತ್ತಾನೆ. ಆಗ ವೃಂದಾಳ ಪಾತಿವೃತ್ಯಕ್ಕೆ ಧಕ್ಕೆಯುಂಟಾಗುತ್ತದೆ. ತದನಂತರ ಶಿವ ಜಲಂಧರನನ್ನು ವಧಿಸುತ್ತಾನೆ. ನಂತರ ಆಕೆಗೆ ಪತಿಯ ರೂಪದಲ್ಲಿ ಬಂದಿರುವುದು ವಿಷ್ಣು ಎಂದು ಗೊತ್ತಾಗುತ್ತದೆ. ಆಗ ವೃಂದಾ ವಿಷ್ಣುವಿಗೆ, ನೀನು ಕಪ್ಪು ಶಿಲೆಯಾಗು,ನಿನಗೂ ಪತ್ನಿ ವಿಯೋಗ ಬರಲಿ ಎಂದು ಶಾಪ ಹಾಕುತ್ತಾಳೆ. ನಂತರ ತಾನೂ ಭಸ್ಮವಾಗಿ, ತುಳಸಿ ರೂಪ ತಾಳುತ್ತಾಳೆ.
ಈ ಕಾರಣಕ್ಕೆ ಮುಕ್ತಿನಾಥದಲ್ಲಿ ವಿಷ್ಣು ಕಪ್ಪು ಸಾಲಿಗ್ರಾಮವಾಗಿ, ಪತ್ನಿಯಿಂದ ದೂರವಾಗಿ ಪೂಜಿಸಲ್ಪಡುತ್ತಾನೆ. ಮತ್ತು ತನ್ನ ಭಕ್ತೆಯಾಗಿದ್ದ ಮತ್ತು ತನ್ನಿಂದಲೇ ಪಾತಿವೃತ್ಯ ಕಳೆದುಕೊಂಡ ವೃಂದಾಳ ಸ್ವರೂಪವಾದ ತುಳಸಿ ದಳದಿಂದಲೇ ಪೂಜಿತನಾಗುತ್ತಿದ್ದಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

