Wednesday, February 5, 2025

Latest Posts

ಹಾವುಗಳ ವಂಶ ಹುಟ್ಟಿದ್ದು ಹೇಗೆ..? ನಾಶವಾಗುತ್ತಿದ್ದ ಹಾವಿನ ವಂಶವನ್ನ ಬಚಾಯಿಸಿದ್ದು ಯಾರು..?

- Advertisement -

ಇವತ್ತು ನಾವು ಹಾವುಗಳ ವಂಶ ಹುಟ್ಟಿದ್ದು ಹೇಗೆ..? ನಾಶವಾಗುತ್ತಿದ್ದ ಹಾವಿನ ವಂಶವನ್ನ ಬಚಾಯಿಸಿದ್ದು ಯಾರು..? ಅನ್ನೋದರ ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಶ್ಯಪ ಮಹರ್ಷಿಗಳಿಗೆ 13 ಜನ ಹೆಂಡತಿಯರಿದ್ದರು. ಅವರಲ್ಲಿ ಕದ್ರು ಕೂಡ ಒಬ್ಬಳು. ಕದ್ರು ತನ್ನ ಪತಿಯನ್ನ ಸದಾಕಾಲ ಸಂತೋಷದಿಂದ ನೋಡಿಕೊಳ್ಳುತ್ತಿದ್ದಳು. ತುಂಬಾ ಕಾಳಜಿ ಮಾಡುತ್ತಿದ್ದಳು. ಕದ್ರುವಿನ ಪ್ರೀತಿಗೆ ಮೆಚ್ಚಿದ ಕಶ್ಯಪರು ನಿನಗೇನು ವರ ಬೇಕು ಕೇಳು ಎಂದರು. ಅದಕ್ಕೆ ಕದ್ರು ನನಗೆ ಶಕ್ತಿಶಾಲಿ ಸಾವಿರ ನಾಗಗಳು ಮಕ್ಕಳಾಗಿ ಜನಿಸಬೇಕು ಎಂದು ಕೇಳಿಕೊಂಡಳು. ಅದಕ್ಕೆ ಒಪ್ಪಿದ ಕಶ್ಯಪರು, ತಥಾಸ್ತು ಎಂದರು. ಕದ್ರುವಿಗೆ ಸಾವಿರ ನಾಗಗಳು ಮಕ್ಕಳಾಗಿ ಜನಿಸಿದರು.

ಒಮ್ಮೆ ಕಶ್ಯಪರ ಎರಡನೇ ಹೆಂಡತಿ ವಿನತಾ ಮತ್ತು ಕದ್ರು ಒಂದು ಕುದುರೆಯನ್ನು ಕಂಡರು. ವಿನತಾ ಆ ಕುದುರೆ ಬಾಲ ಬಿಳಿ ಎಂದಳು, ಅದಕ್ಕೆ ಕದ್ರು ಇಲ್ಲಾ ಆ ಕುದುರೆ ಬಾಲ ಕಪ್ಪು ಎಂದಳು. ಹೀಗೆ ಜಗಳ ನಡೆದು, ಆಕುದುರೆ ಬಾಲ ಕಪ್ಪಾದರೆ ನಾನು ನಿನ್ನ ದಾಸಿಯಾಗುತ್ತೇನೆ, ಬಿಳಿಯಾದರೆ ನೀನು ನನ್ನ ದಾಸಿಯಾಗಬೇಕು ಎಂದು ವಿನತಾ ಕದ್ರುವಿಗೆ ಹೇಳಿದಳು. ಇದಕ್ಕೆ ಒಪ್ಪಿದ ಕದ್ರು, ಕುದುರೆ ಬಾಲ ನೋಡಿದಾಗ, ಅದು ಬಿಳಿ ಎಂದು ಗೊತ್ತಾಯಿತು.

ಆದ್ರೆ ಕದ್ರುವಿಗೆ ವಿನತಾಳ ದಾಸಿಯಾಗಿರಲು ಇಷ್ಟವಿರಲಿಲ್ಲ. ಅದಕ್ಕೆ ತನ್ನ ಸಾವಿರ ಮಕ್ಕಳನ್ನು ಕರೆದು ನೀವು ಆ ಕುದುರೆಯ ಬಾಲದಲ್ಲಿ ನಾಗ ರೂಪ ತಳೆದು ಹೋದರೆ ಅದು ಕಪ್ಪಾಗುತ್ತದೆ. ಹಾಗೆ ಮಾಡಿ ಎನ್ನುತ್ತಾಳೆ. ಕೆಲ ನಾಗಗಳು ತಾಯಿ ಮಾತಿಗೆ ಒಪ್ಪಿ ಕುದುರೆ ಬಾಲ ಸೇರುತ್ತದೆ. ಇನ್ನು ಕೆಲವು ತಾಯಿ ಹೇಳಿದ ಕೆಲಸ ಮಾಡುವುದಿಲ್ಲ. ಯಾರು ತನ್ನ ಮಾತು ಕೇಳಲಿಲ್ಲವೋ, ಅವರೆಲ್ಲ ಸುಟ್ಟು ಸಾಯಲಿ ಎಂದು ಕದ್ರು ಶಾಪ ಹಾಕುತ್ತಾಳೆ. ಇನ್ನು ಇತ್ತ ಕದ್ರು ಮಾಡಿದ ಮೋಸದಿಂದ ವಿನತಾ ದಾಸಿಯಾಗುತ್ತಾಳೆ.

ಕದ್ರು ಶಾಪ ಹಾಕಲು ಮತ್ತು ತನ್ನ ತಂದೆಯನ್ನು ಕೊಂದ ತಕ್ಷಕ ಎಂಬ ಹಾವು ಸಾಯಲಿ ಎಂದು ಜನಮೇಜಯ ಎಂಬುವವನು ಸರ್ಪ ಯಜ್ಞ ಮಾಡಲು ಸರಿಯಾಗುತ್ತದೆ. ಇನ್ನೇನು ಸರ್ಪಕುಂಡದಲ್ಲಿ ತಕ್ಷಕ ಬಂದು ಬೀಳಬೇಕು ಎನ್ನುವಷ್ಟರಲ್ಲಿ ಆಸ್ತಿಕಾ ಮುನಿಗಳು ತಕ್ಷಕನನ್ನು ತಡೆದು ಅವನ ಜೀವ ಉಳಿಸುತ್ತಾರೆ. ಹೀಗೆ ನಾಗಲೋಕ ವಿನಾಶವಗುವುದರಿಂದ ತಪ್ಪುತ್ತದೆ.

- Advertisement -

Latest Posts

Don't Miss