ವಿವಾಹಿತೆಯನ್ನ ಮುತ್ತೈದೆ ಅಂತಾ ಕರಿಯೋದ್ಯಾಕೆ..?

ಹಿಂದೂ ಧರ್ಮದಲ್ಲಿ ಮಹಿಳೆಯರು ವಿವಾಹದ ಬಳಿಕ ತಾಳಿ, ಕುಂಕುಮ, ಕಾಲುಂಗುರ, ಬಳೆ, ಮೂಗು ಬೊಟ್ಟು ಧರಿಸುತ್ತಾರೆ. ಈ ಐದು ಆಭರಣ ಧರಿಸಿದವರನ್ನ ಮುತ್ತೈದೆ ಅಂತಾ ಕರೆಯಲಾಗುತ್ತದೆ. ವಿವಾಹಿತೆಯರು ಈ ಆಭರಣವನ್ನ ಯಾಕೆ ಧರಿಸಬೇಕು..? ಇದರ ಹಿಂದಿರುವ ವೈಜ್ಞಾನಿಕ ಕಾರಣವಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ತಾಳಿ: ತಾಳಿ ಸುಮಂಗಲಿಯರ ಸಂಕೇತ, ಅದೊಂದು ಪವಿತ್ರ ದಾರ. ತಾಳಿಯನ್ನ ಧರಿಸಿದ ಬಳಿಕ ತಾಳ್ಮೆ ಬರಲಿ ಎಂಬುದೇ ತಾಳಿಯ ಅರ್ಥ. ನಿಜವಾದ ಅರ್ಥದಲ್ಲಿ ತಾಳಿ ಎಂದರೆ ತಾಳು, ತಡಿ, ನಿಲ್ಲು ಎಂದರ್ಥ. ಅಂದರೆ, ಪತ್ನಿಯಾದವಳು ಜೀವನದಲ್ಲಿ ಎಂಥದ್ದೇ ಕಷ್ಟ ಕಾರ್ಪಣ್ಯ ಬಂದರೂ, ತಾಳ್ಮೆಯಿಂದ ಇರಬೇಕು ಅನ್ನೋದೇ ಇದರ ಅರ್ಥ. ಮೊದಲೆಲ್ಲ ರೇಷ್ಮೆ ನೂಲಿನಲ್ಲಿ ಕರಿಮಣಿಯನ್ನ ಪೋಣಿಸಿ, ಮಂಗಲಸೂತ್ರವನ್ನು ತಯಾರಿಸಲಾಗುತ್ತಿತ್ತು. ಮತ್ತು ವರ್ಷಕ್ಕೊಮ್ಮೆ ಆ ತಾಳಿಯಿಂದ ರೇಷ್ಮೆ ನೂಲನ್ನ ತೆಗೆದು ಬೇರೆ ರೇಷ್ಮೆ ದಾರದಲ್ಲಿ ಕರಿಮಣಿ ಪೋಣಿಸಲಾಗುತ್ತಿತ್ತು. ಆದ್ರೀಗ ಚಿನ್ನದಿಂದ ತಾಳಿ ಮಾಡಿಸಲಾಗುತ್ತಿದೆ.

ಕುಂಕುಮ: ಕುಂಕುಮ ಹಚ್ಚುವುದರಿಂದ ನಮ್ಮ ಏಕಾಗೃತೆ ಹೆಚ್ಚುತ್ತದೆ. ಈ ಏಕಾಗೃತೆಯಿಂದಲೇ ಹೆಣ್ಣು ತನ್ನ ಸಂಸಾರ ನಡೆಸಿಕೊಂಡು ಹೋಗುತ್ತಾಳೆ. ಇನ್ನು ಸಿಂಧೂರವನ್ನೂ ಹಚ್ಚಲಾಗುತ್ತದೆ. ಇದರಿಂದ ಪತಿಯ ಆಯುಷ್ಯ ಹೆಚ್ಚುವುದಲ್ಲದೇ, ಮಹಿಳೆಯೂ ಸೌಭಾಗ್ಯವಂತೆಯಾಗುತ್ತಾಳೆ.

ಕಾಲುಂಗುರ: ಕಾಲುಂಗುರ ಬರೀ ಚಂದಕ್ಕಷ್ಟೇ ಹಚ್ಚುವುದಲ್ಲ. ಬದಲಾಗಿ ಕಾಲುಂಗುರ ಧರಿಸುವುದರಿಂದ ಹೆಣ್ಣಿನ ಗರ್ಭಕೋಶ ಉತ್ತಮವಾಗಿರುತ್ತದೆ. ಆಕೆಗೆ ಬಂಜೆತನ ಬರುವುದರಿಂದ ಕಾಪಾಡುತ್ತದೆ. ಕಾಲುಂಗುರ ಧರಿಸುವುದರಿಂದ ಹೆಣ್ಣು ತಾಯಿಯಾಗಲು ಅನುಕೂಲವಾಗುತ್ತದೆ. ಮತ್ತು ಮಗುವಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ.

ಬಳೆ: ಈಗಿನ ಕಾಲದಲ್ಲಿ ಗಾಜಿನ ಬಳಿ ಧರಿಸೋರು ಕಡಿಮೆ. ಈಗೇನಿದ್ರೂ ಒಂದೊಂದು ಚಿನ್ನದ ಬಳೆ ಅಥವಾ ಬೇರೆ ಥರದ ಗಟ್ಟಿಯಾದ ಬಳೆ ಧರಿಸುತ್ತಾರೆ. ಆದ್ರೆ ಮೊದಲಿನ ಕಾಲದಲ್ಲಿ ಮುತ್ತೈದೆಯಾದವರು ಕೈಗೆ 12 ಬಳೆ ಧರಿಸಬೇಕಿತ್ತು. ಹಾಗೆ ಬಳೆ ಧರಿಸೋದ್ಯಾಕೆ ಅಂದ್ರೆ, ಆಕೆಗೆ ತಾಳ್ಮೆ ಬರಲಿ. ಆಕೆ ತಗ್ಗಿ ಬಗ್ಗಿ ನಡೆಯಲಿ ಎಂದು. ಯಾಕಂದ್ರೆ ಮದುವೆಯ ವರೆಗೆ ಹೆಣ್ಣು ಮಕ್ಕಳು ಮನಸ್ಸಿಗೆ ಬಂದ ಹಾಗೆ ಇರುತ್ತಾರೆ. ಅದೇ ಮದುವೆಯಾದ ಬಳಿಕ ಆಕೆ ನಾಜೂಕಾಗಿ ಇರಬೇಕು. ಆ ನಾಜೂಕುತನ ಬರಲಿ ಎಂದೇ ಗಾಜಿನ ಬಳೆ ಧರಿಸಲಾಗುತಿತ್ತು.

ಮೂಗು ಬೊಟ್ಟು: ಮುಗೂ ಬೊಟ್ಟು ಆರೋಗ್ಯ ಅಭಿವೃದ್ಧಿ ಮಾಡುವುದರ ಜೊತೆಗೆ, ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಮತ್ತಿ ಮುಟ್ಟಿನ ಸಮಯದಲ್ಲಾಗುವ ತೊಂದರೆಯನ್ನು ಕಡಿಮೆ ಮಾಡುತ್ತದೆ ಅಂತಾ ಹೇಳಲಾಗುತ್ತದೆ. ಮೂಗು ಬೊಟ್ಟು ಧರಿಸುವುದರಿಂದ ಪದೇ ಪದೇ ಅನಾರೋಗ್ಯಕ್ಕೀಡಾಗುವುದು ತಪ್ಪುತ್ತದೆ.

About The Author